ಈ ರಾಶಿಯವರು ಕೈ ಹಾಕಿದ ಕೆಲಸದಲ್ಲಿ ಯಶಸ್ಸು, ಭಾರೀ ಲಾಭ

Published : May 21, 2019, 07:21 AM ISTUpdated : May 21, 2019, 07:22 AM IST
ಈ ರಾಶಿಯವರು ಕೈ ಹಾಕಿದ ಕೆಲಸದಲ್ಲಿ ಯಶಸ್ಸು, ಭಾರೀ ಲಾಭ

ಸಾರಾಂಶ

ಹೇಗಿದೆ ಇಂದಿನ ರಾಶಿ? ಯಾರಿಗೆ ಯಾವ ಫಲ? ಯಾರಿಗೆ ಶುಭದಾಯಕ? ತಿಳಿದುಕೊಳ್ಳಿ ಇಂದಿನ ರಾಶಿ ಭವಿಷ್ಯದಲ್ಲಿ

ಮೇಷ: ನೆಮ್ಮದಿಯ ನಾಳೆಗಳಿಗಾಗಿ ಇಂದಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಿ. ಆರೋಗ್ಯದಲ್ಲಿ ಚೇತರಿಕೆ. ಹೊಸ ವಸ್ತು ಕೊಳ್ಳಲಿದ್ದೀರಿ

ವೃಷಭ: ಜೀವನ ಶೈಲಿಯಲ್ಲಿ ಬದಲಾವಣೆ ಏರ್ಪಡಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಆತ್ಮವಿಶ್ವಾಸ ಅಧಿಕವಾಗಲಿದೆ.

ಮಿಥುನ: ನಿಮ್ಮ ಬಗ್ಗೆ ಬರುವ ಟೀಕೆಗಳಿಗೆ ಉತ್ತರ ನೀಡುತ್ತಾ ಕೂರುವುದು ಬೇಡ. ನಿಮ್ಮ ದಾರಿಯಲ್ಲಿ ನೀವು ಮುಂದೆ ಸಾಗುತ್ತಿರಿ.

ಕಟಕ: ಸೂಕ್ತವಾದ ರೀತಿಯಲ್ಲಿ ಹಾಕಿದ ಶ್ರಮ ಖಂಡಿತ ಫಲ ನೀಡಿಯೇ ನೀಡುತ್ತದೆ. ಸಹೋದರನ ಗೆಲುವಿಗೆ ಸಹಾಯ ಮಾಡುವಿರಿ.

ಸಿಂಹ: ಬಾಲ್ಯದ ಗೆಳೆಯನ ಅನಿರೀಕ್ಷಿತ ಭೇಟಿ ಯಾಗಲಿದೆ. ನಿಮ್ಮ ಆಪ್ತರಿಂದಲೇ ನಿಮಗೆ ಮೋಸವಾಗಲಿದೆ. ನಿರಂತರ ಪರಿಶ್ರಮ ಇರಲಿ.

ಕನ್ಯಾ: ಮಾಡುವ ಕೆಲಸವನ್ನೇ ಮನಸಾರೆ ಮಾಡಿ. ಮತ್ತೊಬ್ಬರ ಮೇಲೆ ಅವಲಂಬಿತವಾಗುವುದು ಬೇಡ. ಇಡೀ ದಿನ ಹೆಚ್ಚು ಒತ್ತಡ ಇರಲಿದೆ.

ತುಲಾ: ಸಂಬಂಧಗಳಲ್ಲಿ ಮನಸ್ತಾಪ ಉಂಟಾಗಲಿದೆ. ದೇವಸ್ಥಾನಕ್ಕೆ ಭೇಟಿ ನೀಡುವವರಿದ್ದೀರಿ. ಸಮಯಕ್ಕೆ ಹೆಚ್ಚಿನ ಮಾನ್ಯತೆ ನೀಡಿ.

ವೃಶ್ಚಿಕ: ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಕಾರಾತ್ಮಕ ಆಲೋಚನೆಗಳನ್ನು ಇಟ್ಟುಕೊಂಡು ಮುಂದೆ ಸಾಗುತ್ತಿರಿ. ಧೈರ್ಯವೇ ನಿಮ್ಮ ಶಕ್ತಿಯಾಗಲಿದೆ.

ಧನುಸ್ಸು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರೊಂದಿಗೆ ಮನಸ್ತಾಪ ಉಂಟಾಗಲಿದೆ. ತಂದೆಯ ಸಲಹೆಯಂತೆ ಮುನ್ನಡೆಯಿರಿ.

ಮಕರ: ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವುದು ಬೇಡ. ಹೊಗಳುಭಟರ ಮಾತಿಗೆ ಹೆಚ್ಚು ಬೆಲೆ ನೀಡಬೇಡಿ. ಖರ್ಚು ಅಧಿಕ.

ಕುಂಭ: ಅನವಶ್ಯಕ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಮದುವೆ ಪ್ರಸ್ತಾಪ ಹೆಚ್ಚಾಗಲಿದೆ. ದೂರದ ಊರಿಗೆ ಭೇಟಿ.

ಮೀನ: ಕಷ್ಟದಲ್ಲಿ ಇರುವ ಸ್ನೇಹಿತರಿಗೆ ಸಹಾಯ ಮಾಡಲಿದ್ದೀರಿ. ಕೈ ಹಾಕಿದ ವ್ಯವಹಾರದಲ್ಲಿ ಹೆಚ್ಚು ಲಾಭ ಪಡೆದುಕೊಳ್ಳಲಿದ್ದೀರಿ. ಶುಭ ಫಲ.

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ