ಗೊಂದಲದ ವಾತಾವರಣಕ್ಕೆ ತೆರೆ, ನಿಮ್ಮ ಪ್ರಾಮಾಣಿಕತೆಗೆ ಒಳ್ಳೆಯ ಪ್ರತಿಫಲ

Published : May 14, 2019, 07:14 AM IST
ಗೊಂದಲದ ವಾತಾವರಣಕ್ಕೆ ತೆರೆ, ನಿಮ್ಮ ಪ್ರಾಮಾಣಿಕತೆಗೆ ಒಳ್ಳೆಯ ಪ್ರತಿಫಲ

ಸಾರಾಂಶ

ಇಂದಿನ ದಿನ ನಿಮಗೆ ಶುಭದಾಯಕವೇ? ಯಾವ ಫಲ ಸಿಗಲಿದೆ? ಹೀಗಿದೆ ನಿಮ್ಮ ಇಂದಿನ ರಾಶಿ ಭವಿಷ್ಯ

ಮೇಷ: ನಿಮಗೆ ಸರಿ ಎನ್ನಿಸಿದ ಕೆಲಸವನ್ನು ತಡ ಮಾಡದೇ ಮಾಡಿ ಮುಗಿಸಿ. ತಂದೆಯಿಂದ ನಿಮ್ಮ ವ್ಯಾಪಾರಕ್ಕೆ ಸಹಾಯವಾಗಲಿದೆ.

ವೃಷಭ: ನಿಮ್ಮ ಬಗ್ಗೆ ಮತ್ತೊಬ್ಬರು ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವುದು ಬೇಡ. ಹೊಸ ಕೆಲಸಗಳಿಗೆ ಸಮಯ ಹೊಂದಿಸಿಕೊಳ್ಳಿ.

ಮಿಥುನ: ಮೂರನೇಯವರ ವಿಚಾರಕ್ಕೆ ನಿಮ್ಮ ಮನೆಯಲ್ಲಿ ಗೊಂದಲ ಉಂಟಾಗಲಿದೆ. ಸಂಬಂಧಗಳ ನಿರ್ವಹಣೆಯಲ್ಲಿ ಎಚ್ಚರ ಇರಲಿ.

ಕಟಕ: ನಡೆಯುವಾಗ ಜಾರಿ ಕೆಳಗೆ ಬೀಳುವುದು ಸಹಜ. ಕುಗ್ಗದೇ ಮುಂದೆ ಸಾಗಿದರೆ ಸಾಧನೆ ನಿಮ್ಮದಾಗುವುದು. ನೆಮ್ಮದಿ ಹೆಚ್ಚಲಿದೆ.

ಸಿಂಹ: ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ. ಸ್ನೇಹಿತರ ಕಷ್ಟಗಳಿಗೆ ಇಂದು ನೀವು ನೆರವು ನೀಡಲಿದ್ದೀರಿ. ದೂರದ ಪ್ರಯಾಣ ಸಾಧ್ಯತೆ.

ಕನ್ಯಾ: ನಿಮ್ಮ ಪಾಡಿಗೆ ನೀವು ಇದ್ದು ಬಿಡುವುದು ಒಳ್ಳೆಯದ್ದು. ಹತ್ತಿರದವರೊಂದಿಗೆ ಮನಸ್ತಾಪ ಉಂಟಾಗಲಿದೆ. ಆರ್ಥಿಕವಾಗಿ ಸಂಕಷ್ಟ.

ತುಲಾ: ಮನೆಯಲ್ಲಿ ಇದ್ದ ಗೊಂದಲದ ವಾತಾವರಣಕ್ಕೆ ಇಂದು ತೆರೆ ಬೀಳಲಿದೆ. ನಿಮ್ಮ ಪ್ರಾಮಾಣಿಕತೆಗೆ ಒಳ್ಳೆಯ ಪ್ರತಿಫಲ ದೊರೆಯಲಿದೆ. ಶುಭ ಫಲ.

ವೃಶ್ಚಿಕ: ಗೆಳೆಯರನ್ನು ಸಂಖ್ಯೆ ದೃಷ್ಟಿಯಲ್ಲಿ ಅಳೆಯ ಬೇಡಿ. ಗುಣದ ದೃಷ್ಟಿಯಲ್ಲಿ ನೋಡಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.

ಧನುಸ್ಸು: ನಯವಾಗಿ ಮಾತನಾಡಿ ಮೋಸ ಮಾಡುವವರು ನಿಮ್ಮ ಸುತ್ತಲೂ ಇದ್ದಾರೆ. ಗುರಿ ಸೇರಲು ಅಡ್ಡ ದಾರಿ ಹಿಡಿಯುವುದು ಬೇಡ.

ಮಕರ: ಹೊಸ ತಂತ್ರಜ್ಞಾನದ ಬಗ್ಗೆ ಇಂದು ತಿಳಿದುಕೊಳ್ಳಲಿದ್ದೀರಿ. ಕೆಲಸ ಒತ್ತಡ ಹೆಚ್ಚಾಗಲಿದೆ. ಮನೆಗೆ ಬಂಧುಗಳ ಆಗಮನವಾಗಲಿದೆ.

ಕುಂಭ: ಹಣಕಾಸಿನ ವಿಚಾರದಲ್ಲಿ ಹಿಡಿತ ಇರಲಿ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ನೀಡಲಿದ್ದೀರಿ. ಕೋಪ ತ್ಯಜಿಸಿ ಮುಂದೆ ಸಾಗಿ.

ಮೀನ: ಸಣ್ಣ ಪುಟ್ಟ ವಿಚಾರಗಳಿಗೂ ಸಿಡುಕುವುದು ಬೇಡ. ಇನ್ನೊಬ್ಬರ ವಿಚಾರಕ್ಕೆ ಹೋಗದೇ, ನಿಮ್ಮ ದಾರಿಯಲ್ಲಿ ನೀವು ಮುಂದೆ ಸಾಗಿ.

PREV
click me!

Recommended Stories

ಸುಚಿತ್ರಾ ಶಿವಮೊಗ್ಗ ಬಂದ ಮೇಲೆ...? ಕಮಲಾಕರ ಭಟ್ ಬಗ್ಗೆ ಅಚ್ಚರಿ ಮಾಹಿತಿ ಬಿಚ್ಚಿಟ್ಟ ಮನೆ ಬಾಡಿಗೆ ನೀಡಿದ್ದ ಮಾಲೀಕ
ಫೆಬ್ರವರಿ ಉತ್ತರಾರ್ಧದಲ್ಲಿ ಪಂಚಕ್ರಗಿ ಯೋಗದಿಂದ ಇಡೀ ತಿಂಗಳು ಒಂದು ರಾಶಿಗೆ ಮಾತ್ರ ಜಾಕ್‌ಪಾಟ್