ಈ ದಿನ ಯಾವ ರಾಶಿಗೆ ಶುಭದಾಯಕ

Published : Sep 25, 2019, 07:17 AM IST
ಈ ದಿನ ಯಾವ ರಾಶಿಗೆ ಶುಭದಾಯಕ

ಸಾರಾಂಶ

ಸೆಪ್ಟೆಂಬರ್ 25 ಬುಧವಾರ: ಇಂದು ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ

ಮೇಷ: ನಡೆಯುವಾಗ ಸಾವಿರ ಅಡೆತಡೆಗಳು ಬರುವುದು ಸಹಜ. ಅವುಗಳಿಗೆ ಹೆದರಿಕೊಂಡು ಪ್ರಯಾಣ ನಿಲ್ಲಿಸದಿರಿ.

ವೃಷಭ: ಯಾರೋ ಮೂರನೇಯ ವ್ಯಕ್ತಿಯನ್ನು ನಂಬಿಕೊಂಡು ದಿನವಿಡೀ ಅಲೆದಾಡುವಿರಿ. ನಿಮ್ಮ ಶಕ್ತಿಯ ಮೇಲೆ ನಿಮಗೆ ವಿಶ್ವಾಸ ಇರಲಿ.


ಮಿಥುನ: ಅಸಮರ್ಥರ ಬಗ್ಗೆ ತಲೆ ಕೆಡಿಸಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ನಿಮ್ಮ ಪಾಲಿನ ಕಾಯಕವನ್ನು ನೀವು ಮಾಡಿರಿ.


ಕಟಕ: ಕೋಪ ಎನ್ನುವುದು ಮೊದಲು ಸುಡುವುದು ನಿಮ್ಮನ್ನೇ. ಯಾರದೋ ತಪ್ಪಿಗೆ ಇನ್ನಾರದ್ದೋ ಮೇಲೆ ಸಿಟ್ಟು ಮಾಡಿಕೊಳ್ಳುವುದು ಬೇಡ.

ಸಿಂಹ: ಅತಿ ವಿನಯವಂತಿಕೆ ಒಳ್ಳೆಯದ್ದಲ್ಲ. ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದೆ ಸಾಗುವ ಸಿಂಹ ಮನಸ್ಸು ಮಾಡಲಿದ್ದೀರಿ. ಶುಭ ಫಲ.

ಕನ್ಯಾ: ಮತ್ತೊಬ್ಬರನ್ನು ಅನುಕರಣೆ ಮಾಡಲು ಹೋಗದಿರಿ. ಎಲ್ಲರ ಮೇಲೂ ನಂಬಿಕೆ ಇರಲಿ. ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ.


ತುಲಾ: ಒಳ್ಳೆಯ ಗಳಿಗೆಗಾಗಿ ಕಾಯುತ್ತಾ ಕೂರುವ ಬದಲಿಗೆ ನಿಮಗೆ ಸಿಕ್ಕ ಸಮಯವನ್ನೇ ತುಲಾ ಒಳ್ಳೆಯದಾಗಿ ಬದಲಾಯಿಸಿಕೊಂಡು ಸಾಗಿ.

ವೃಶ್ಚಿಕ: ಅತ್ತೆಯ ಮೇಲಿನ ಕೋಪ ಕತ್ತೆಯ ಮೇಲೆ ಎನ್ನುವ ಹಾಗೆ ಇಂದಿನ ದಿನ ಆಗಲಿದೆ. ದೂರದ ಪ್ರಯಾಣ ಮಾಡಬೇಕಾದ ಅನಿವಾರ್ಯ.


ಧನಸ್ಸು: ಆಹಾರ, ನಿದ್ದೆ, ಮಾತಿನ ಮೇಲೆ ಮಿತಿ ಇರಲಿ. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಇಂದು ಅಧಿಕ ಧನುಸ್ಸು ಲಾಭ ದೊರೆಯುವ ಸಾಧ್ಯತೆ ಇದೆ.


ಮಕರ: ಬಂಧು ಬಳಗ ಇಂದು ನಿಮಗೆ ಹತ್ತಿರ ವಾಗಲಿದೆ. ಓಡಾಟ ಹೆಚ್ಚಾಗಲಿದೆ. ಅಂತೆಯೇ ಆದಾಯದಲ್ಲಿಯೂ ಏರಿಕೆ ಕಾಣಲಿದ್ದೀರಿ.


ಕುಂಭ : ಅಂತರಂಗ ಹೇಳಿದ ಮಾತುಗಳಿಗೆ ಅನುಗುಣವಾಗಿ ನಡೆದುಕೊಳ್ಳಿ. ಎಲ್ಲರ ಪಾಲಿಗೂ ನೀವು ಒಳ್ಳೆಯವರಾಗಲು ಆಗದು.

ಮೀನ: ಕಾರ್ಯವಾಸಿ ಕತ್ತೆ ಕಾಲು ಹಿಡಿಯಬೇಕು. ಜಾಣತನದಿಂದ ನಿಮ್ಮ ಕೆಲಸವನ್ನು ಮೀನ ಮಾಡಿಸಿಕೊಳ್ಳಿ. ನೆಮ್ಮದಿ ಹೆಚ್ಚಾಗಲಿದೆ.

PREV
click me!

Recommended Stories

ನಾಳೆ ಡಿಸೆಂಬರ್ 9 ಸರ್ವಾರ್ಥ ಸಿದ್ಧಿ ಯೋಗ, 5 ರಾಶಿಗೆ ಅದೃಷ್ಟ, ಸಂಪತ್ತು
ಅದೃಷ್ಟ ಬಾಗಿಲು ತಟ್ಟುತ್ತಿದೆ, ಈ 6 ರಾಶಿ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ