ಒಂದು ರಾಶಿಗೆ ಹೆಚ್ಚು ಒಳಿತಾಗಲಿದೆ : ಉಳಿದ ರಾಶಿ ಹೇಗಿದೆ?

Published : Sep 17, 2019, 07:09 AM ISTUpdated : Sep 17, 2019, 08:03 AM IST
ಒಂದು ರಾಶಿಗೆ ಹೆಚ್ಚು ಒಳಿತಾಗಲಿದೆ : ಉಳಿದ ರಾಶಿ ಹೇಗಿದೆ?

ಸಾರಾಂಶ

ಸೆಪ್ಟೆಂಬರ್ 17, 2019 ಮಂಗಳವಾರ, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ದಿನ

ಒಂದು ರಾಶಿಗೆ ಹೆಚ್ಚು ಒಳಿತಾಗಲಿದೆ : ಉಳಿದ ರಾಶಿ ಹೇಗಿದೆ?

ಮೇಷ
ಕ್ಷುಲ್ಲಕ ಕಾರಣಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಿ.
ನಿಮ್ಮ ಪಾಡಿಗೆ ನೀವು ಇದ್ದರೆ ಎಲ್ಲಾ
ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ.

ವೃಷಭ
ಸಂಬಂಧಿಗಳು ಇಂದು ನಿಮ್ಮ ನೆರವಿಗೆ
ಬರಲಿದ್ದಾರೆ. ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ
ತರುವಂತಹ ಕೆಲಸ ಮಾಡುವುದು ಬೇಡ.

ಮಿಥುನ
ಸೌಂದರ್ಯ ಶಾಶ್ವತವಲ್ಲ, ಗುಣವೇ ಶಾಶ್ವತ.
ನೆಮ್ಮದಿಯ ನಾಳೆಗಾಗಿ ಇಂದಿನಿಂದಲೇ
ತಯಾರಿ ನಡೆಸಿ. ಚಿಂತೆಗಳು ದೂರಾಗಲಿವೆ.

ಕಟಕ
ಅನ್ಯರ ಮಾತಿಗೆ ಬೆಲೆ ಕೊಟ್ಟು ಸುಮ್ಮನೆ
ಕೂರುವುದು ಬೇಡ. ನಿಮ್ಮ ದಾರಿಯಲ್ಲಿ ನೀವು
ಸಾಗುತ್ತಿರಿ. ಒಳ್ಳೆಯ ಫಲ ಸಿಗಲಿದೆ.

ಸಿಂಹ
ತಂದೆಯ ಮಾತಿಗೆ ಬೆಲೆ ಕೊಡಲಿದ್ದೀರಿ. ಹಣ
ಕಾಸಿನ ವಿಚಾರದಲ್ಲಿ ಹೆಚ್ಚು ಹಿಡಿತ ಸಾಧಿಸಿ.
ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವಿರಿ.

ಕನ್ಯಾ
ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ನೆರವು
ನೀಡಲಿದ್ದೀರಿ. ದೊಡ್ಡ ನಿರ್ಧಾರಗಳನ್ನು
ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ.

ತುಲಾ 
ಎಲ್ಲವನ್ನೂ ಹಣದಿಂದಲೇ ಅಳತೆ
ಮಾಡುವುದಕ್ಕೆ ಹೋಗಬೇಡಿ. ಖರ್ಚಿನಲ್ಲಿ
ಇಳಿಕೆಯಾಗಲಿದೆ. ಆರೋಗ್ಯದಲ್ಲಿ ಚೇತರಿಕೆ.

ವೃಶ್ಚಿಕ
ಮಾಡುವ ಕಾರ್ಯಗಳನ್ನೇ ಭಿನ್ನವಾಗಿ ಮಾಡಿ.
ಒಂದು ಸೋಲಿಗೆ ಆತ್ಮಸ್ಥೈರ್ಯ ಕಳೆದು
ಕೊಳ್ಳುವುದು ಬೇಡ. ಚಿಂತೆ ಕಳೆಯಲಿದೆ. 

ಧನುಸ್ಸು
ಎಲ್ಲರೂ ನಿಮ್ಮಂತೆಯೇ ಇರಬೇಕು
ಎನ್ನುವುದನ್ನು ಬಿಡಿ. ವಹಿಸಿದ ಕಾರ್ಯ
ಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ.

ಮಕರ
ಮುಂದಿನ ಕಾರ್ಯಗಳಿಗೆ ಅಗತ್ಯ ತಯಾರಿ
ಗಳನ್ನು ಮಾಡಿಕೊಳ್ಳಲಿದ್ದೀರಿ. ಸಣ್ಣ ವಿಚಾರಕ್ಕೆ
ಮನಸ್ತಾಪ ಮಾಡಿಕೊಳ್ಳುವುದು ಬೇಡ.

ಕುಂಭ
ಒಳ್ಳೆಯ ಕೆಲಸಗಳಲ್ಲಿ ಇಡೀ ದಿನ
ತೊಡಗಿಸಿಕೊಳ್ಳಲಿದ್ದೀರಿ. ಆತ್ಮಾಭಿಮಾನಕ್ಕೆ
ಹೆಚ್ಚು ಒತ್ತು ಕೊಡಲಿದ್ದೀರಿ. ಶುಭ ಫಲ.

ಮೀನ
ಆಹಾರದ ವಿಚಾರದಲ್ಲಿ ಮಿತಿ ಮೀರುವುದು
ಬೇಡ. ಮಾಡುವ ಕೆಲಸವನ್ನು ಶ್ರದ್ಧೆಯಿಂದ 
ಮಾಡಿ ಮುಗಿಸಿ. ಮತ್ತೊಬ್ಬರನ್ನು ಗೌರವಿಸಿ.

PREV
click me!

Recommended Stories

ಸೋತವನು ಗೆಲ್ಲಲು ಅಡುಗೆ ಮನೆಯಲ್ಲಿರುವ ಜೀರಿಗೆ ಸಾಕು!
Sri Krishna Janmashtami: ಜನ್ಮಾಷ್ಟಮಿ ರಾತ್ರಿ ನವಿಲುಗರಿಯ ಈ ಉಪಾಯ ಮಾಡಿ ಅದೃಷ್ಟವೇ ಬದಲಾಗುತ್ತೆ