ಈ ರಾಶಿಗೆ ಹಣವು ಹರಿದು ಬರಲಿದೆ : ಉಳಿದ ರಾಶಿಗೆ ?

Published : Sep 16, 2019, 07:09 AM ISTUpdated : Sep 16, 2019, 08:10 AM IST
ಈ ರಾಶಿಗೆ ಹಣವು ಹರಿದು ಬರಲಿದೆ : ಉಳಿದ ರಾಶಿಗೆ ?

ಸಾರಾಂಶ

ಸೆಪ್ಟೆಂಬರ್ 16, ಸೋಮವಾರ, ಇಂದು ಯಾವ ರಾಶಿಗೆ ಯಾವ ಫಲ


ಮೇಷ
ಮತ್ತೊಬ್ಬರ ಗುಣವನ್ನು ನೀವು ಮೆಚ್ಚುವಿ
ರಾದರೆ ನಿಮ್ಮ ಗುಣವನ್ನು ಮತ್ತೊಬ್ಬರು
ಮೆಚ್ಚಲು ಸಾಧ್ಯ. ಧೈರ್ಯವಾಗಿ ಮುಂದೆ ಸಾಗಿ.

ವೃಷಭ
ನಿಮ್ಮ ಶಕ್ತಿಯ ಮೇಲೆ ನಿಮಗೆ ನಂಬಿಕೆ ಇದ್ದರೆ
ಏನು ಬೇಕಾದರೂ ಮಾಡಲು ಸಾಧ್ಯ.
ಒಳ್ಳೆಯತನಕ್ಕೆ ಯಾವಾಗಲೂ ಬೆಲೆ ಇದ್ದೇ ಇದೆ.

ಮಿಥುನ
ತಾಯಿ ಮಾಡಿದ ಹಣಕಾಸಿನ ಸಹಾಯದಿಂದ
ಹೊಸ ಉದ್ಯಮವನ್ನು ಶುರು ಮಾಡಲಿದ್ದೀರಿ.
ಮೋಸ ಮಾಡುವವರಿಂದ ದೂರ ಇರಿ.

ಕಟಕ
ವಾಹನ ಚಾಲನೆ ಮಾಡುವಾಗ ಎಚ್ಚರ ಇರಲಿ.
ಸಣ್ಣ ತಪ್ಪಿಕೂ ದೊಡ್ಡ ಮಟ್ಟದ ದಂಡ
ತೆರಲಿದ್ದೀರಿ. ಚಿಂತೆ ಮಾಡುತ್ತಾ ಕೂರದಿರಿ.

ಸಿಂಹ
ಹಿಂದೆ ಕಂಡ ಜಾಗಗಳು ಇಂದು ಅಪರಿಚಿತ
ವಾಗಿ ಕಾಣಲಿವೆ. ಸೂಕ್ಷ್ಮ ಸಂಗತಿಗಳ ಬಗ್ಗೆ
ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿ.

ಕನ್ಯಾ
ಶುಭ ಸಮಾರಂಭಕ್ಕೆ ಸೂಕ್ತ ತಯಾರಿಗಳನ್ನು
ಮಾಡಿಕೊಳ್ಳಲಿದ್ದೀರಿ. ನಿಮ್ಮ ನಗುವು
ಮತ್ತೊಬ್ಬರಿಗೆ ನೋವು ಉಂಟು ಮಾಡದಿರಲಿ.

ತುಲಾ 
ಮತ್ತೊಬ್ಬರ ಏಳಿಗೆಯನ್ನು ಕಂಡು ಹೊಟ್ಟೆಕಿಚ್ಚು
ಪಡುವುದಕ್ಕೆ ಬದಲಾಗಿ ನೀವು ಸಾಧನೆಯ
ಹಾದಿಯತ್ತ ಮುಂದೆ ಸಾಗುತ್ತಿರಿ. ಶುಭ ಫಲ.

ವೃಶ್ಚಿಕ
ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿ. ದೂರದ
ಬಂಧುಗಳು ಇಂದು ಹತ್ತಿರವಾಗಲಿದ್ದೀರಿ.
ಚಿಂತೆ ಮಾಡದೇ ಹಿಡಿದ ಕಾರ್ಯ ಸಾಧಿಸಿ. 

ಧನುಸ್ಸು
ನಿಮ್ಮಲ್ಲಿರುವ ಸಂತೋಷವನ್ನು ಮತ್ತೊ
ಬ್ಬರಿಗೂ ಹಂಚುವಿರಿ. ಸಣ್ಣ ಸಣ್ಣ ವಿಚಾರ
ಗಳಿಗೂ ಹೆಚ್ಚು ಮಾನ್ಯತೆ ನೀಡಲಿದ್ದೀರಿ.

ಮಕರ
ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ
ಇಷ್ಟಗಳನ್ನು ತಂದೆ ತಾಯಿಗಳಿಗೆ ಮುಕ್ತವಾಗಿ
ತಿಳಿಸಿ. ದಾರಿ ತಪ್ಪಿ ನಡೆಯುವುದು ಬೇಡ.

ಕುಂಭ
ಕೊಟ್ಟ ಮಾತಿಗೆ ಬದ್ಧವಾಗಿ ನಡೆದುಕೊಳ್ಳಿ.
ತುಂಬಾ ಹಳೆಯ ಸ್ನೇಹಿತರು ಇಂದು ನಿಮ್ಮನ್ನು
ಭೇಟಿಯಾಗಲಿದ್ದಾರೆ. ಶುಭ ಫಲ ಸಿಗಲಿದೆ.

ಮೀನ 
ಗಾಯದ ಮೇಲೆ ಬರೆ ಎಳೆದಂತೆ ಒಂದಷ್ಟು
ಕಷ್ಟಗಳು ಎದುರಾಗಲಿವೆ. ಧೈರ್ಯವಾಗಿ
ಮುಂದೆ ಸಾಗಿದರೆ ಶುಭ ಫಲ ಖಂಡಿತ ಇದೆ. 

PREV
click me!

Recommended Stories

Coolest Zodiac Sign : ಈ 4 ರಾಶಿ ಜನರು ಬೇಸಿಗೆಯಲ್ಲೂ ತಂಪು, ಹಾಟ್‌ ಅಲ್ಲ ಫುಲ್‌ ಕೂಲ್‌ ಇವರು
ಈ ರಾಶಿಯವರು ಮೋಸ್ಟ್ ಬ್ಯೂಟಿಫುಲ್, ಮೊದಲ ನೋಟದಲ್ಲೇ ಸೆಳೆಯುತ್ತಾರೆ