ಈ ರಾಶಿಗೆ ಹೆಚ್ಚಿನ ಸಂತೋಷ : ಕಾರ್ಯಗಳಿಂದ ಲಾಭ

Published : Apr 13, 2019, 07:11 AM IST
ಈ ರಾಶಿಗೆ ಹೆಚ್ಚಿನ ಸಂತೋಷ : ಕಾರ್ಯಗಳಿಂದ ಲಾಭ

ಸಾರಾಂಶ

ಇಂದು ಯಾವ ರಾಶಿಗೆ ಯಾವ ಫಲ..? ತಿಳಿಯರಿ ರಾಶಿ ಭವಿಷ್ಯದ ಮೂಲಕ

ಈ ರಾಶಿಗೆ ಹೆಚ್ಚಿನ ಸಂತೋಷ : ಕಾರ್ಯಗಳಿಂದ ಲಾಭ

ಮೇಷ : ಹಣದಿಂದಲೇ ಎಲ್ಲವೂ ಸಾಧ್ಯವಾಗುವುದಿಲ್ಲ ಎನ್ನುವ ಸತ್ಯ ಇಂದು ನಿಮಗೆ ತಿಳಿಯಲಿದೆ. ಸ್ನೇಹಕ್ಕೆ ಬೆಲೆ ನೀಡಲಿದ್ದೀರಿ. ಗೊಂದಲ ಬೇಡ

ವೃಷಭ : ನಿಮ್ಮ ಆಪ್ತ ಬಳಗದಲ್ಲಿ ಇರುವವರಿಂದಲೇ ಇಂದು ನಿಮಗೆ ನೋವಾಗಲಿದೆ. ಯಾರ ಮೇಲೆಯೂ ಆರೋಪ ಬೇಡ

ಮಿಥುನ : ಸಣ್ಣ ಪುಟ್ಟ ವಿಚಾರಗಳಿಂದ ಹೆಚ್ಚು ಸಂತೋಷ ಅನುಭವಿಸಲಿದ್ದೀರಿ. ಆಮಿಷಗಳಿಗೆ ಬಲಿಯಾಗುವುದು ಬೇಡ, ಧೈರ್ಯ  ಹೆಚ್ಚಾಗಲಿದೆ. 

ಕಟಕ : ಯಾರು ಏನಾದರು ಅಂದುಕೊಳ್ಳಲಿ ನಿಮ್ಮ ದಾರಿಯಲ್ಲಿ ನೀವು ಸಾಗುತ್ತಿರಿ, ಆರೋಗ್ಯದ ಕಡೆಗೆ ಗಮನವಿರಲಿ

ಸಿಂಹ : ಆದಾಯದಲ್ಲಿ ಇಂದು ಸ್ವಲ್ಪ ಏರಿಕೆ ಕಂಡು ಬರಲಿದೆ. ಮನೆಯ ಖರ್ಚಿನಲ್ಲಿ ಏರಿಕೆ. ವೃತ್ತಿಯಲ್ಲಿ ಕಿರಿಕಿರಿ ಅನುಭವಿಸುವ ಸಾಧ್ಯತೆ

ಕನ್ಯಾ : ಕೊಟ್ಟ ಮಾತನ್ನು ಯಾವುದೇ ಕಾರಣಕ್ಕೂ ಮರೆಯುವುದು ಬೇಡ, ಬೇರೆಯವರ ತಪ್ಪಿಗೆ ನೀವು ದಂಡ ತೆರಬೇಕಾಗಿ ಬರಬಹುದು

ತುಲಾ : ತಾಳ್ಮೆಯಿಂದ ಇದ್ದರೆ ನಿಮಗೆ ಹೆಚ್ಚು ಅನುಕೂಲವಾಗುವುದು. ಚಿಂತೆ ನಿಮ್ಮನ್ನ ಬಾಧಿಸದು. ಸಕಲ ಕಾರ್ಯಗಳೂ ಆಗಲಿವೆ. 

ವೃಶ್ಚಿಕ : ನೆರೆ ಮನೆಯವರ ಕಷ್ಟಕ್ಕೆ ನೆರವಾಗಲಿದ್ದೀರಿ. ನಿತ್ಯದ ಚಟುವಟಿಕೆಗಳಲ್ಲಿ ಸ್ವಲ್ಪ ಬದಾವಣೆ ಕಂಡು ಬರಲಿದೆ. ಕಣ್ಣಿನ ಸಮಸ್ಯೆಗೆ ಪರಿಹಾರ

ಧನಸ್ಸು : ಉಂಡುಹೋದ ಕೊಂಡು ಹೋದ ಎನ್ನುವಂತೆ ಮಾಡದಿರಿ. ದೇವರಲ್ಲಿ ಹೆಚ್ಚು ನಂಬಿಕೆ ಹುಟ್ಟಲಿದೆ. ತಂದೆಯ ಮಾತಿಗೆ ಬೆಲೆ ನೀಡಿ. 

ಮಕರ : ಶತ್ರುಗಳು ಕೂಡ ಇಂದು ನಿಮಗೆ ಅನುಕೂಲವಾಗುವಂತೆ ಕೆಲಸ ಮಾಡಲಿದ್ದಾರೆ. ಸಣ್ಣ ವಿಚಾರಗಳಿಗೆ ಮನಸ್ಸು ಕೆಡಿಸಿಕೊಳ್ಳದಿರಿ. 

ಕುಂಭ : ನಿಮ್ಮ ಕಾರ್ಯಗಳಿಗೆ ನಿಮ್ಮ ವಿರುದ್ಧದ ಟೀಕೆಗೆ ಉತ್ತರವಾಗಲಿ. ಮಾತಿನಿಂದ ಮಾನ ಹಾನಿಯಾಗುವ ಸಾಧ್ಯತೆ ಹೆಚ್ಚು.

ಮೀನ : ದುಷ್ಟರನ್ನು ಕಂಡರೆ ದೂರವಿರಿ. ಆಹಾರ ಕ್ರಮದಲ್ಲಿ ವ್ಯತ್ಯಯವಾಗಲಿದೆ. ಇಂದು ಸ್ವಾರ್ಥ ವ್ಯಕ್ತಿಗಳಿಗೆ ತಕ್ಕ ಉತ್ತರ ನೀಡಲಿದ್ದೀರಿ. 

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ