ಈ ರಾಶಿಗೆ ಶುಭ ಫಲದೊಂದಿಗೆ ಲಾಭವೂ ಒಲಿಯಲಿದೆ

Published : Jul 12, 2019, 07:10 AM IST
ಈ ರಾಶಿಗೆ ಶುಭ ಫಲದೊಂದಿಗೆ ಲಾಭವೂ ಒಲಿಯಲಿದೆ

ಸಾರಾಂಶ

ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ಭವಿಷ್ಯ 

ಈ ರಾಶಿಗೆ ಶುಭ ಫಲದೊಂದಿಗೆ ಲಾಭವೂ ಒಲಿಯಲಿದೆ

ಮೇಷ: ನೆಮ್ಮದಿಯ ನಾಳೆಗಳಿಗಾಗಿ ಇಂದಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಿ. ಆರೋಗ್ಯದಲ್ಲಿ ಚೇತರಿಕೆ. ಹೊಸ ವಸ್ತು ಕೊಳ್ಳಲಿದ್ದೀರಿ

ವೃಷಭ: ಜೀವನ ಶೈಲಿಯಲ್ಲಿ ಬದಲಾವಣೆ ಏರ್ಪಡಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಆತ್ಮವಿಶ್ವಾಸ ಅಧಿಕವಾಗಲಿದೆ.

ಮಿಥುನ: ನಿಮ್ಮ ಬಗ್ಗೆ ಬರುವ ಟೀಕೆಗಳಿಗೆ ಉತ್ತರ ನೀಡುತ್ತಾ ಕೂರುವುದು ಬೇಡ. ನಿಮ್ಮ ದಾರಿಯಲ್ಲಿ ನೀವು ಮುಂದೆ ಸಾಗುತ್ತಿರಿ.

ಕಟಕ: ಸೂಕ್ತವಾದ ರೀತಿಯಲ್ಲಿ ಹಾಕಿದ ಶ್ರಮ ಖಂಡಿತ ಫಲ ನೀಡಿಯೇ ನೀಡುತ್ತದೆ. ಸಹೋದರನ ಗೆಲುವಿಗೆ ಸಹಾಯ ಮಾಡುವಿರಿ.

ಸಿಂಹ: ಬಾಲ್ಯದ ಗೆಳೆಯನ ಅನಿರೀಕ್ಷಿತ ಭೇಟಿ ಯಾಗಲಿದೆ. ನಿಮ್ಮ ಆಪ್ತರಿಂದಲೇ ನಿಮಗೆ ಮೋಸವಾಗಲಿದೆ. ನಿರಂತರ ಪರಿಶ್ರಮ ಇರಲಿ.

ಕನ್ಯಾ: ಮಾಡುವ ಕೆಲಸವನ್ನೇ ಮನಸಾರೆ ಮಾಡಿ. ಮತ್ತೊಬ್ಬರ ಮೇಲೆ ಅವಲಂಬಿತವಾಗುವುದು ಬೇಡ. ಇಡೀ ದಿನ ಹೆಚ್ಚು ಒತ್ತಡ ಇರಲಿದೆ.

ತುಲಾ: ಸಂಬಂಧಗಳಲ್ಲಿ ಮನಸ್ತಾಪ ಉಂಟಾಗಲಿದೆ. ದೇವಸ್ಥಾನಕ್ಕೆ ಭೇಟಿ ನೀಡುವವರಿದ್ದೀರಿ. ಸಮಯಕ್ಕೆ ಹೆಚ್ಚಿನ ಮಾನ್ಯತೆ ನೀಡಿ.

ವೃಶ್ಚಿಕ: ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಕಾರಾತ್ಮಕ ಆಲೋಚನೆಗಳನ್ನು ಇಟ್ಟುಕೊಂಡು ಮುಂದೆ ಸಾಗುತ್ತಿರಿ. ಧೈರ್ಯವೇ ನಿಮ್ಮ ಶಕ್ತಿಯಾಗಲಿದೆ.

ಧನುಸ್ಸು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರೊಂದಿಗೆ ಮನಸ್ತಾಪ ಉಂಟಾಗಲಿದೆ. ತಂದೆಯ ಸಲಹೆಯಂತೆ ಮುನ್ನಡೆಯಿರಿ.

ಮಕರ: ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವುದು ಬೇಡ. ಹೊಗಳುಭಟರ ಮಾತಿಗೆ ಹೆಚ್ಚು ಬೆಲೆ ನೀಡಬೇಡಿ. ಖರ್ಚು ಅಧಿಕ.

ಕುಂಭ: ಅನವಶ್ಯಕ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಮದುವೆ ಪ್ರಸ್ತಾಪ ಹೆಚ್ಚಾಗಲಿದೆ. ದೂರದ ಊರಿಗೆ ಭೇಟಿ.

ಮೀನ: ಕಷ್ಟದಲ್ಲಿ ಇರುವ ಸ್ನೇಹಿತರಿಗೆ ಸಹಾಯ ಮಾಡಲಿದ್ದೀರಿ. ಕೈ ಹಾಕಿದ ವ್ಯವಹಾರದಲ್ಲಿ ಹೆಚ್ಚು ಲಾಭ ಪಡೆದುಕೊಳ್ಳಲಿದ್ದೀರಿ. ಶುಭ ಫಲ.

PREV
click me!

Recommended Stories

ಮೂಕಾಂಬಿಕೆ ದರ್ಶನ ಬಳಿಕ ಪಕ್ಷ ಸ್ಥಾಪಿಸಿ ಸಿಎಂ ಆಗಿದ್ದ ಎಂಜಿಆರ್, AIADMK ಚಿಹ್ನೆಗೂ ಇದೆ ಕೊಲ್ಲೂರು ನಂಟು
ಶಿವಲಿಂಗದ ಜೊತೆ ಸರ್ಪ… ಈ ಕನಸು ಮತ್ತೆ ಮತ್ತೆ ಬಿದ್ದರೆ ಅದಕ್ಕೇನು ಅರ್ಥ?