ಒಳ್ಳೆಯ ಲಾಭವಿದೆ ಈ ಒಂದು ರಾಶಿಗೆ : ನಿಮ್ಮ ರಾಶಿಯಲ್ಲೇನಿದೆ?

By Kannadaprabha NewsFirst Published Oct 8, 2019, 7:22 AM IST
Highlights

ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ, ಮಂಗಳವಾರ ಅಕ್ಟೋಬರ್ 08

ಮೇಷ : ತಪ್ಪನ್ನು ಯಾರೇ ಮಾಡಿದರೂ ಅದು ತಪ್ಪೇ. ಅದನ್ನು ಸಮರ್ಥನೆ ಮಾಡಿಕೊಳ್ಳುವ ಬದಲಿಗೆ ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡಿ....

ವೃಷಭ : ಒಳ್ಳೆಯ ಕಾರ್ಯ ಮಾಡಲು ತುಸು ಸಮಯ ಬೇಕಾಗುತ್ತದೆ. ಆದರೆ ಕಾರ್ಯವನ್ನು ಪೂರ್ಣ ಮಾಡುವ ಛಲ ಮತ್ತು ಶಕ್ತಿ ನಿಮ್ಮಲ್ಲಿ ಇರಲಿ...

ಮಿಥುನ :  ನಿಮ್ಮ ಬಲದ ಮೇಲೆ ನಿಮಗೆ ನಂಬಿಕೆ ಇರಲಿ. ಯಾರೋ ಹೇಳಿದರು ಎಂದು ಬೇಡದ ವಿಚಾರಕ್ಕೆ ತಲೆ ಕೆಡಿಸಿಕೊಂಡು ಕೂರದಿರಿ....

ಕಟಕ : ಹೊರೆ ಹೆಚ್ಚಾಯಿತು ಎಂದು ಅಳುತ್ತಾ ಕೂರುವುದಕ್ಕೆ ಬದಲಾಗಿ ಅದನ್ನು ಹೇಗೆ ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಚಿಂತೆ ಕಾಡಲಿದೆ...

ಸಿಂಹ : ಧನಾತ್ಮಕ ಚಿಂತನೆಗಳು ಹೆಚ್ಚಾಗಲಿವೆ. ಧರ್ಮ ಕಾರ್ಯಕ್ಕೆ ನಿಮ್ಮ ಸೇವೆಯ ಅಗತ್ಯವಿದೆ. ಪರ ನಿಂದೆಯನ್ನು ನಿಲ್ಲಿಸಿ 

ಕನ್ಯಾ:  ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡ ವಸ್ತು ಹೆಚ್ಚು ಸಂತೋಷ ನೀಡಲಿದೆ. ಮಕ್ಕಳ ಪಾಲಿಗೆ ಇದು ಶುಭವಾದ ದಿನ. ಗೆಲುವು ...

ತುಲಾ  : ಚಿಲ್ಲರೆ ವ್ಯಾಪಾರಿಗಳಿಗೆ ಒಳ್ಳೆಯ ಲಾಭ ಸಿಗಲಿದೆ. ದೊಡ್ಡ ಕಾರ್ಯಗಳಿಗೆ ಇಂದು ಕೈ ಹಾಕಲಿದ್ದೀರಿ. ಆರೋಗ್ಯದಲ್ಲಿ ಎಚ್ಚರ...

ವೃಶ್ಚಿಕ : ಬಂಧುಗಳ ಜೊತೆಗೆ ಹೆಚ್ಚು ಸಮಯ ಕಳೆಯು ವಿರಿ. ಹಳೆಯ ಸ್ನೇಹಿತರು ಒಂದು ಕಡೆ ಸೇರು ವುದಕ್ಕೆ ನೀವು ನೇತೃತ್ವ ವಹಿಸಿ...

ಧನುಸ್ಸು : ಆಹಾರದ ವಿಚಾರದಲ್ಲಿ ಹೆಚ್ಚು ಜಾಗೃತೆ ಇರಲಿ. ಇಲ್ಲದೇ ಇದ್ದರೆ ತೀವ್ರ ಆರೋಗ್ಯ ಸಮಸ್ಯೆ ಉಂಟಾಗಲಿದೆ. ನೆಮ್ಮದಿ  

ಈ ರಾಶಿಗೆ ಭಾರೀ ಸಿಹಿ ಸುದ್ದಿಯೊಂದು ಬರಲಿದೆ : ವಾರ ಭವಿಷ್ಯ...

ಮಕರ : ಅನ್ಯರ ಬಗ್ಗೆಯೇ ಮಾತನಾಡುತ್ತಾ ಕುಳಿತರೆ ನಿಮ್ಮ ಯಶಸ್ಸು ಸಾಧ್ಯವಾಗದು. ನಿಮ್ಮ ಪಾಲಿನ ಕರ್ಮವನ್ನು ನೀವು ಮಾಡಿ ಮುಗಿಸಿ...

ಕುಂಭ : ಆಪ್ತ ಸ್ನೇಹಿತರು ಇಂದು ನಿಮ್ಮನ್ನು ಅಗಲಲಿದ್ದಾರೆ. ಸಣ್ಣ ವಿಚಾರಗಳಿಗೂ ರೇಗುವುದು ಬೇಡ. ಸಂತೋಷ ಹೆಚ್ಚಲಿದೆ....

ಮೀನ  : ಇರುವ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವ ಭರದಲ್ಲಿ ಹೊಸ ಸಮಸ್ಯೆ ತಂದುಕೊಳ್ಳದಿರಿ. ನಿಧಾನವೇ ಪ್ರಧಾನ. ಆರೋಗ್ಯ ವೃದ್ಧಿ

click me!