ಈ ವರ್ಷದ ಕೊನೆಯ ದಿನ ಯಾರಿಗೆ ಒಳಿತು : ಯಾವ ರಾಶಿಗೆ ಶುಭ ಫಲ

Suvarna News   | Asianet News
Published : Dec 31, 2019, 07:15 AM IST
ಈ ವರ್ಷದ ಕೊನೆಯ ದಿನ ಯಾರಿಗೆ ಒಳಿತು : ಯಾವ ರಾಶಿಗೆ ಶುಭ ಫಲ

ಸಾರಾಂಶ

ಈ ವರ್ಷದ ಕಳೆದು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. 2019ರ ಕೊನೆಯ ದಿನವಾದ ಇಂದು ಮಂಗಳವಾರ ನಿಮ್ಮ ರಾಶಿಗಳ ಫಲಾ ಫಲ ಹೇಗಿದೆ..? 

ಈ ವರ್ಷದ ಕೊನೆಯ ದಿನ ಯಾರಿಗೆ ಒಳಿತು : ಯಾವ ರಾಶಿಗೆ ಶುಭ ಫಲ

ಮೇಷ
ವೈಯಕ್ತಿಕ ಸಮಸ್ಯೆಗಳ ಕುರಿತು ಹೇಳುವವರ
ಮಾತಿಗೆ ಕಿವಿಯಾಗುವುದಕ್ಕಿಂತ ತಜ್ಞರ ಸಲಹೆ
ಪಡೆಯಿರಿ. ನಿರ್ಲಕ್ಷ್ಯ ಎಂದೂ ಒಳ್ಳೆಯದಲ್ಲ.

ವೃಷಭ
ಮಡದಿಯ ಆರೋಗ್ಯದ ಸಮಸ್ಯೆಯು ಈಗ
ನಿವಾರಣೆಯಾಗಲಿದೆ. ಸ್ಥಳ ಬದಲಾವಣೆಯೂ
ಆಗಲಿದೆ. ಅನಗತ್ಯ ಚಿಂತೆಗಳಿಗೆ ಜಾಗವಿಲ್ಲ.

ಮಿಥುನ
ಮಹಿಳಾ ಸಂಘದ ಕೆಲಸದಲ್ಲಿ ಪ್ರತಿಷ್ಠೆ, ಗೌರವ
ಗಳು ಹೆಚ್ಚು ಸಿಗುತ್ತವೆ. ನಿಮ್ಮ ಹೊಗಳುವವರು
ಹಿಂದೆ-ಮುಂದೆ ಇರ‌್ತಾರೆ. ಅದೇ ಜೀವನವಲ್ಲ.

ಕಟಕ
ಚೆನ್ನಾಗಿ ಓದಿ ಹೆಚ್ಚು ಅಂಕಗಳನ್ನು ಪಡೆದದ್ದು
ಈಗ ಫಲಿಸಿದೆ. ಎಲ್ಲರಿಗೂ ನಿಮ್ಮ ಬಗ್ಗೆ ಹೆಚ್ಚಿನ
ಪ್ರೀತಿ ಉಕ್ಕಿದ. ಖುಷಿಯ ದಿನ ಇದಾಗಿದೆ.

ಹೊಸ ವರ್ಷ ಆರಂಭವಾಗುವ ಈ ವಾರ ನಿಮ್ಮ ರಾಶಿಯ ಫಲವೇನು?...

ಸಿಂಹ
ಕಡತಗಳ ತಪಾಸಣೆಯಲ್ಲಿ ತುಂಬ ಹಳೆಯ
ಸಂಗಾತಿಯ ಪತ್ರವು ಸಿಗಲಿದೆ. ಅದರಿಂದ
ನಿಮಗೆ ಒಳ್ಳೆಯದೇ ಆಗುತ್ತದೆ. ಶುಭವಿದೆ

ಕನ್ಯಾ
ಮರೆಗುಳಿತನವು ಈ ದಿನ ಭಾರಿ ಹೊಡೆತ
ಕೊಡಲಿದೆ. ನಿಮ್ಮದಲ್ಲದ ತಪ್ಪಿಗೂ ಬೆಲೆ
ತೆರಬೇಕಾದ ಪರಿಸ್ಥಿತಿ ಬರಲಿದೆ. ಜೋಪಾನ.

ತುಲಾ 
ಬಹು ದೊಡ್ಡ ಕೆಲಸವೊಂದಕ್ಕೆ ಕೈ ಹಾಕಲಿದ್ದೀರಿ.
ನೀವು ಬದಲಾವಣೆಯ ನಿರೀಕ್ಷೆಯಲ್ಲಿದ್ದರೆ
ಆತುರಪಡದಿದ್ದರೆ ಒಳಿತಾಗುವುದು ಖಚಿತ.

ವೃಶ್ಚಿಕ
ಇಂದು ಹೆಚ್ಚು ಮೌನವಾಗಿದ್ದರೆ ಕ್ಷೇಮ.
ನಿಮಗಾಗದವರು ನಿಮ್ಮಲ್ಲಿಗೇ ಬರಲಿದ್ದಾರೆ.
ಯಾವುದೇ ತೊಂದರೆಗಳಿಲ್ಲ. ಒಳಿತಾಗಲಿದೆ. 

ಧನುಸ್ಸು
ಅನಿರೀಕ್ಷಿತ ವೆಚ್ಚಗಳು ಉದ್ಭವಿಸಬಹುದು.
ಖರ್ಚಿಗೆ ಕಡಿವಾಣ ಹಾಕಬೇಕು. ಆರೋಗ್ಯ
ತಪಾಸಣೆಯನ್ನೂ ಮಾಡಿಸಲೇಬೇಕು.

ಮಕರ
ಸ್ನೇಹಿತರ ಕಷ್ಟಕ್ಕೆ ನೆರವಾಗಲಿದ್ದೀರಿ. ಸಲ್ಲದ ನೆಪ
ಹೇಳಿಕೊಂಡು ಮಾಡಬೇಕಾದ ಕಾರ್ಯ
ಗಳನ್ನು ಮುಂದೂಡುವುದು ತರವಲ್ಲ.

ಕುಂಭ
ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
ಎಲ್ಲರೊಂದಿಗೆ ಸೌಹಾರ್ದಯುತವಾಗಿರಲು
ಪ್ರಯತ್ನಿಸಿ. ಸಾಧ್ಯವಾದಷ್ಟು ತಾಳ್ಮೆಯಿರಲಿ.

ಮೀನ 
ಗುರಿ ಸಾಧನೆಯತ್ತ ಹೆಚ್ಚಿನ ಆಸಕ್ತಿ ವಹಿಸುವ
ದಿನವಿದು. ಕ್ರಯ-ವಿಕ್ರಯದ ಮಾತುಕತೆ
ನಡೆಯಲಿದೆ. ಆಯವ್ಯಯದಲ್ಲಿ ಏರುಪೇರು.

PREV
click me!

Recommended Stories

ನಾಳೆ ಡಿಸೆಂಬರ್ 23 ರಂದು ಆದಿತ್ಯ ಮಂಗಲ ಯೋಗ, 5 ರಾಶಿಗೆ ಅದೃಷ್ಟ, ಸಂಪತ್ತು
2026 ರಲ್ಲಿ ಮದುವೆಯಾಗುವ ರಾಶಿ ಇವು, ನಿಮ್ಮ ರಾಶಿಗಿದೆಯೇ ಮದುವೆಯ ಭಾಗ್ಯ