ಒಂದು ರಾಶಿಗೆ ಹಣ ಕೈ ಸೇರಲಿದೆ : ಉಳಿದ ರಾಶಿ ಹೇಗಿದೆ..?

Published : Dec 24, 2019, 07:08 AM ISTUpdated : Dec 24, 2019, 07:13 AM IST
ಒಂದು ರಾಶಿಗೆ ಹಣ ಕೈ ಸೇರಲಿದೆ : ಉಳಿದ ರಾಶಿ ಹೇಗಿದೆ..?

ಸಾರಾಂಶ

ಮಂಗಳವಾರ ಡಿಸೆಂಬರ್ 24, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ಭವಿಷ್ಯ 

ಒಂದು ರಾಶಿಗೆ ಹಣ ಕೈ ಸೇರಲಿದೆ : ಉಳಿದ ರಾಶಿ ಹೇಗಿದೆ..? 

ಮೇಷ
ಹಿರಿಯರ ಆರೋಗ್ಯದಲ್ಲಿ ಚೇತರಿಕೆ
ಕಾಣಲಿದೆ. ಪರೋಪಕಾರಕ್ಕೆ ಮುಂದಾಗುವಿರಿ.
ಅಂದುಕೊಂಡ ಕಾರ್ಯ ನಡೆಯಲಿದೆ.

ವೃಷಭ
ವಿನಾಕಾರಣ ಕೋಪ ಮಾಡಿಕೊಳ್ಳುವುದನ್ನು
ನಿಲ್ಲಿಸಿ. ಮಕ್ಕಳ ಅಗತ್ಯಗಳನ್ನು ಪೂರೈಸುವಿರಿ.
ಮಹಿಳೆಯರಿಗೆ ಮನೆಯಲ್ಲಿ ಹೆಚ್ಚು ಕೆಲಸ.

ಮಿಥುನ
ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ.
ಅತಿಯಾದ ಮೊಬೈಲ್ ಬಳಕೆಗೆ ಮಿತಿ ಇರಲಿ.
ನಿಮ್ಮ ಕೆಲಸಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಲಿದೆ.

ಕಟಕ
ನಿಮ್ಮ ಸಮಸ್ಯೆಗಳನ್ನು ತಾಯಿಯ ಬಳಿ ಮುಕ್ತ
ವಾಗಿ ಹಂಚಿಕೊಳ್ಳುವಿರಿ. ದಾನ-ಧರ್ಮ
ಮಾಡುವ ಅವಕಾಶವಿದೆ. ಶುಭ ಫಲ.

ಸಿಂಹ
ಹೆಚ್ಚು ಆಯಾಸವಾಗುವ ಕೆಲಸ ಮಾಡಬೇಡಿ.
ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಉಳಿತಾಯದ ಹಣ ಇಂದು ಕೈ ಸೇರಲಿದೆ.

ಕನ್ಯಾ
ಚಿಂತೆಗಳು ಕಡಿಮೆಯಾಗಲಿವೆ. ಕೋಪವನ್ನು
ಕಡಿಮೆ ಮಾಡಿಕೊಳ್ಳುವಿರಿ. ಊಟದಲ್ಲಿ ಮಿತಿ
ಇರಲಿ. ಹಿರಿಯರಿಂದ ಪ್ರಶಂಸೆ ದೊರೆಯಲಿದೆ.

ತುಲಾ 
ಹೊಸ ಮೊಬೈಲ್ ಕೊಳ್ಳುವ ಸಾಧ್ಯತೆ. ಬಸ್
ಪ್ರಯಾಣ ಹೆಚ್ಚಾಗಲಿದೆ. ಶಿಕ್ಷಕರಿಗೆ ಶುಭದಿನ.
ಮನೆಯಲ್ಲಿ ಖರ್ಚು ಹೆಚ್ಚಾಗಲಿದೆ.

ವೃಶ್ಚಿಕ
ಶಾಂತಚಿತ್ತದಿಂದ ಮಾಡಿದ ಕೆಲಸಕ್ಕೆ ಒಳ್ಳೆಯ
ಫಲಿತಾಂಶ ದೊರೆಯಲಿದೆ. ಎಲ್ಲರೊಂದಿಗೂ
ಇಂದು ನಗುಮುಖದಿಂದ ವರ್ತಿಸಿ. 

ಧನುಸ್ಸು
ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ.
ಹೆಚ್ಚು ಸುತ್ತಾಡುವುದನ್ನು ನಿಲ್ಲಿಸಿ. ಅನವಶ್ಯಕ
ವಾಗಿ ಕಾಲಹರಣ ಮಾಡುವುದು ಬೇಡ.

ಗ್ರಹಣ ಸಂಭವಿಸುವ ಈ ವಾರ ನಿಮ್ಮ ಭವಿಷ್ಯ ಹೇಗಿದೆ..?..

ಮಕರ
ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕೆಲಸದಲ್ಲಿ
ಒತ್ತಡ. ಕುಟುಂಬ ಪೂರ್ತಿ ಒಟ್ಟಾಗಿ ಸೇರು
ವಿರಿ. ಶುಭ ಕಾರ್ಯಕ್ಕೆ ಇದು ಸಕಾಲವಲ್ಲ.

ಕುಂಭ
ಕುಟುಂಬದೊಂದಿಗೆ ಹೆಚ್ಚು ಸಮಯ
ಕಳೆಯುವಿರಿ. ನಿಮ್ಮ ಕೆಲಸಕ್ಕೆ ಅಣ್ಣನಿಂದ
ಮೆಚ್ಚುಗೆಯ ಮಾತುಗಳನ್ನು ಕೇಳಲಿದ್ದೀರಿ.

ಮೀನ 
ಕಷ್ಟದಲ್ಲಿ ಇರುವವರಿಗೆ ನೀವು ನೆರವಾಗ
ಲಿದ್ದೀರಿ. ಕೆಲಸದ ಮೇಲೆ ನಿಗಾ ಇರಲಿ.
ಮನಸ್ಸಿಗೆ ಅನ್ನಿಸಿದ್ದೆಲ್ಲಾ ಮಾಡುವುದು ಬೇಡ.

PREV
click me!

Recommended Stories

2026 ರ ಆರಂಭದಲ್ಲಿ ಹಣದ ಮಳೆ ತರುವ ರಾಜಯೋಗ, ಈ ರಾಶಿಚಕ್ರ ಚಿಹ್ನೆಗಳ ಸಂಪತ್ತಿನಲ್ಲಿ ಭಾರಿ ಹೆಚ್ಚಳ
ಸೋತು ಸುಣ್ಣವಾದ್ರು ಎನ್ನುವಷ್ಟರಲ್ಲಿ ಫೀನಿಕ್ಸ್ ಹಕ್ಕಿಯಂತೆ ಎದ್ದು ನಿಲ್ಲುವ ರಾಶಿಗಳಿವು