ಒಂದು ರಾಶಿಗೆ ಯಶಸ್ಸು ಒಲಿಯಲಿದೆ : ಉಳಿದ ರಾಶಿ ಹೇಗಿದೆ..?

Suvarna News   | Asianet News
Published : Dec 13, 2019, 07:13 AM IST
ಒಂದು ರಾಶಿಗೆ ಯಶಸ್ಸು ಒಲಿಯಲಿದೆ : ಉಳಿದ ರಾಶಿ ಹೇಗಿದೆ..?

ಸಾರಾಂಶ

ಡಿಸೆಂಬರ್ 13 ಶುಕ್ರವಾರ, ಶುಭ ಶುಕ್ರವಾರ ನಿಮ್ಮ ದಿನವು ಹೇಗಿದೆ? ಇಂದಿನ ರಾಶಿಗಳ ಫಲಾ ಫಲ

ಮೇಷ
ಮುಂಜಾನೆಯೇ ಗೊಂದಲಕ್ಕೆ ಸಿಲುಕಲಿದ್ದೀರಿ.
ಸಂಜೆ ವೇಳೆಗೆ ಗೊಂದಲಕ್ಕೆ ತೆರೆ ಬೀಳಲಿದೆ.
ನಿರಂತರ ಪ್ರಯತ್ನ ಇದ್ದರೆ ಯಶಸ್ಸು ಸಾಧ್ಯ.

ವೃಷಭ
ಹುಚ್ಚು ಮನಸ್ಸು ಹೇಳಿದ ಹಾಗೆ ಕುಣಿದರೆ
ಸಂಕಷ್ಟ ಶತ ಸಿದ್ಧ. ಹಿರಿಯರ ಮಾತಿಗೆ ಗೌರವ
ನೀಡಿ ಅವರ ಮಾರ್ಗದರ್ಶನದಂತೆ ಸಾಗಿ.

ಒಂದು ರಾಶಿಗೆ ಶುಭದೊಂದಿಗೆ ಲಾಭ : ಉಳಿದ ರಾಶಿಯ ವಾರ ಭವಿಷ್ಯ...

ಮಿಥುನ
ಗುರುಬಲವಿದೆ. ಅಂದುಕೊಂಡ ಕಾರ್ಯಗಳು
ಸುಗಮವಾಗಿ ನೆರವೇರಲಿವೆ. ಎಲ್ಲಾ
ವಿಚಾರಗಳಲ್ಲಿಯೂ ಆಸಕ್ತಿ ತಾಳಲಿದ್ದೀರಿ.

ಕಟಕ
ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಇದು
ಸಕಾಲ. ಆರೋಗ್ಯದಲ್ಲಿ ಚೇತರಿಕೆ ಕಾಣಲಿ
ದ್ದೀರಿ. ಬಂಧುಗಳ ಆಗಮನವಾಗಲಿದೆ.

ಸಿಂಹ
ಎಷ್ಟೇ ಕಷ್ಟ ಬಂದರೂ ಆತ್ಮ ವಿಶ್ವಾಸ
ಕಳೆದುಕೊಳ್ಳುವುದು ಬೇಡ. ನಿಮ್ಮ ಪಾಲಿನ
ಕಾರ್ಯಗಳನ್ನು ನೀವು ಮಾಡಿ ಮುಗಿಸಿ.

ಕನ್ಯಾ
ಪದೇ ಪದೇ ಅದದೇ ತಪ್ಪುಗಳನ್ನು ಮಾಡು
ವುದು ಸರಿಯಲ್ಲ. ದೊಡ್ಡವರ ದೃಷ್ಟಿಯಲ್ಲಿ
ನಿಮ್ಮ ಬಗ್ಗೆ ಸದಭಿಪ್ರಾಯ ಮೂಡಲಿದೆ.

ತುಲಾ 
ಇಂದು ಅಧಿಕಾರ ಕೇಂದ್ರದ ಸುತ್ತಬೇಕಾದ
ಸಂದರ್ಭ ಬರಲಿದೆ. ಹಣಕಾಸಿನ ವಿಚಾರದಲ್ಲಿ
ಸೂಕ್ತ ಮಾಹಿತಿ ಪಡೆದು ಮುಂದೆ ಸಾಗಿ.

ವೃಶ್ಚಿಕ
ಆರೋಗ್ಯದಲ್ಲಿ ಕೊಂಚ ಸಮಸ್ಯೆ
ಉಂಟಾಗಲಿದೆ. ನಿಮ್ಮ ಪ್ರಾಮಾಣಿಕ
ಪ್ರಯತ್ನಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ. 

ಧನುಸ್ಸು
ಎಲ್ಲವೂ ನಿಮ್ಮ ಇಷ್ಟದಂತೆಯೇ ಆಗಬೇಕು
ಎಂದುಕೊಳ್ಳುವುದು ತಪ್ಪು. ಇಂದು
ಪರಿಸ್ಥಿತಿಯ ಕೈಗೊಂಬೆಯಾಗಬೇಕಾದೀತು.

ಮಕರ
ಮನೆಯಲ್ಲಿ ಸಣ್ಣ ಪ್ರಮಾಣದ ಮನಸ್ತಾಪ
ಉಂಟಾಗಲಿದೆ. ಕಚೇರಿಯ ಕೆಲಸ
ಕಾರ್ಯಗಳು ಸುಗಮವಾಗಿ ನೆರವೇರಲಿವೆ.

ಕುಂಭ
ಯಾರೋ ಮಾಡಿದ ತಪ್ಪಿಗೆ ನೀವು ತಲೆ
ತಗ್ಗಿಸಬೇಕಾಗಿ ಬರಬಹುದು. ಅಂಜಿಕೆ ಬಿಟ್ಟು
ಮುಂದೆ ಸಾಗಿ. ಧೈರ್ಯ ಹೆಚ್ಚಾಗಲಿದೆ.

ಮೀನ 
ಸ್ನೇಹಿತರಿಂದ ಸ್ಫೂರ್ತಿಗೊಂಡು ಹೊಸ
ಪ್ರಯತ್ನಕ್ಕೆ ಕೈ ಹಾಕಲಿದ್ದೀರಿ. ಹಣಕ್ಕೆ ಆಸೆಪಟ್ಟು
ಪೇಚಿಗೆ ಸಿಲುಕುವ ಸಾಧ್ಯತೆ. ಎಚ್ಚರವಿರಲಿ.

PREV
click me!

Recommended Stories

ಎರಡು ಶಕ್ತಿಶಾಲಿ ರಾಜಯೋಗಗಳೊಂದಿಗೆ ನಾಳೆಯಿಂದ ಈ ಆರು ರಾಶಿ ಮುಟ್ಟಿದ್ದೆಲ್ಲವೂ ಚಿನ್ನ
New Year Mars Transit: ಮೀನ ರಾಶಿಗೆ ಮಂಗಳನ ಪ್ರವೇಶ: ಐದು ರಾಶಿಗೆ ಭಾಗ್ಯೋದಯ- ಆಸೆ ಈಡೇರುವ ಕಾಲ