ರಾಜನೀತಿ, ಪ್ರಜಾನೀತಿ, ಹಣಕಾಸು, ವ್ಯವಹಾರ, ಸ್ನೇಹ ಹಾಗೂ ಪ್ರೇಮ ಎಲ್ಲದರ ಬಗ್ಗೆ ಕೂಡ ಚಾಣಕ್ಯ ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಅರ್ಥಶಾಸ್ತ್ರ ಎಂಬ ಸಂಸ್ಕೃತ ಗ್ರಂಥದಲ್ಲಿ ಅರ್ಥಶಾಸ್ತ್ರದ ಜೊತೆಗೆ, ಕೌಟಿಲ್ಯರು ರಾಜಕೀಯ, ರಾಜನೀತಿ, ಮಿಲಿಟರಿ ಸ್ಟ್ರಾಟಜಿಯನ್ನು ಕೂಡ ಉಲ್ಲೇಖಿಸಿದ್ದಾರೆ.
ಚಾಣಕ್ಯ ಎಂಬ ಹೆಸರು ಕೇಳಿದರೆ ಸಾಕು ಒಬ್ಬ ಬುದ್ಧಿವಂತ ವ್ಯಕ್ತಿಯ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಅಷ್ಟರಮಟ್ಟಿಗೆ ಚಾಣಾಕ್ಯನೆಂಬ ಹಿಂದೆ ಆಗಿಹೋದ ವ್ಯಕ್ತಿ ಮಹಾ ಪ್ರಸಿದ್ಧ. ಅವರ ಕಾವ್ಯ ನಾಮ (Pen Name) ಕೌಟಿಲ್ಯ ಎಂದಾಗಿತ್ತು. ಆದರೆ ಈ ಕೌಟಿಲ್ಯನ ಮೂಲ ಹೆಸರು ವಿಷ್ಣುಗುಪ್ತ. ಒಂದೇ ವಾಕ್ಯದಲ್ಲಿ ಹೇಳಬೇಕು ಎಂದರೆ, ವಿಷ್ಣುಗುಪ್ತನೆಂಬ ಬ್ರಾಹ್ಣಣನೊಬ್ಬನು ಕೌಟಿಲ್ಯ ಎಂಬ ಕಾವ್ಯನಾಮದ ಮೂಲಕ ಬರೆದು ಚಾಣಕ್ಯ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದಾನೆ. ಚಾಣಕ್ಯ ಎಂದರೆ ಸಾಕು, ಅದು ಬುದ್ಧಿವಂತಿಕೆ ಎಂಬ ಪದಕ್ಕೆ ಇನ್ನೊಂದು ಹೆಸರು ಎಂದೇ ಅರ್ಥೈಸಲ್ಪಡುತ್ತದೆ.
ಹಾಗಿದ್ದರೆ ಈ ಚಾಣುಕ್ಯ ಅಂಥದ್ದೇನನ್ನು ಬರೆದಿದ್ದಾರೆ? ಅವರು ಹೇಳಿದ್ದನ್ನು ಇಂದಿಗೂ ಕೂಡ ಜನರು ಅನುಸರಿಸಲು ಕಾರಣವೇನು? ಹೌದು, ಚಾಣಕ್ಯ ಪ್ರತಿಯೊಂದೂ ವಿಷಯದ ಬಗ್ಗೆ ಬರೆದಿದ್ದಾರೆ. ಹಲವಾರು ಗ್ರಂಥಗಳಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಬರೆದು ಬುದ್ಧಿವಂತರಲ್ಲಿ ಮಹಾ ಬುದ್ದಿವಂತ ಎಂಬ ಬಿರುದು ಪಡೆದಿದ್ದಾರೆ. ಚಾಣಕ್ಯ ಬರೆದ ಗ್ರಂಥಗಳಲ್ಲಿ 'ಅರ್ಥಶಾಸ್ತ್ರ' ಹಾಗೂ 'ನೀತಿ ಶಾಸ್ತ್ರ' ತುಂಬಾ ಮುಖ್ಯವಾದ ಹಾಗೂ ಪ್ರಸಿದ್ಧವಾದ ಗ್ರಂಥವಾಗಿದೆ.
ಗಂಡ-ಹೆಂಡ್ತಿ ಜೊತೆಯಾಗಿ ಮಲಗೋ ಮಂಚದ ಕೆಳಗೆ ಈ ವಸ್ತುಗಳನ್ನು ಇರಿಸಬಾರದು!
ರಾಜನೀತಿ, ಪ್ರಜಾನೀತಿ, ಹಣಕಾಸು, ವ್ಯವಹಾರ, ಸ್ನೇಹ ಹಾಗೂ ಪ್ರೇಮ ಎಲ್ಲದರ ಬಗ್ಗೆ ಕೂಡ ಚಾಣಕ್ಯ ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಅರ್ಥಶಾಸ್ತ್ರ (Arthashastra) ಎಂಬ ಸಂಸ್ಕೃತ ಗ್ರಂಥದಲ್ಲಿ ಅರ್ಥಶಾಸ್ತ್ರದ ಜೊತೆಗೆ, ಕೌಟಿಲ್ಯರು ರಾಜಕೀಯ, ರಾಜನೀತಿ, ಮಿಲಿಟರಿ ಸ್ಟ್ರಾಟಜಿಯನ್ನು ಕೂಡ ಉಲ್ಲೇಖಿಸಿದ್ದಾರೆ.
ಚಾಣುಕ್ಯ ಸ್ತ್ರೀಯರ ಬಗ್ಗೆ ಬರೆದಿದ್ದಾರೆ, ಪುರುಷರ ಬಗ್ಗೆ ಬರೆದಿದ್ದಾರೆ. ನಾವಿಲ್ಲಿ ಅವರು ಸ್ತ್ರೀಯರ ಬಗ್ಗೆ ಕೆಲವು ಸಾಲುಗಳನ್ನು ನೋಡೋಣ. ಆಚಾರ್ಯರು ಎಂದೂ ಕರೆಯಲ್ಪಡುತ್ತಿದ್ದ ಚಾಣಕ್ಯರು 'ಸ್ತ್ರೀ ಒಬ್ಬನನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ. ಒಬ್ಬನೊಡನೆ ಮಾತನಾಡುತ್ತ ಇದ್ದರೆ ಇನ್ನೊಬ್ಬನನ್ನು ನೋಡುತ್ತಾ ಇರುತ್ತಾಳೆ. ಮತ್ತೊಬ್ಬನನ್ನು ಹೃದಯದಲ್ಲಿ ಚಿಂತಿಸುತ್ತಾಳೆ' ಎಂದಿದ್ದಾರೆ. ಇದು ಹೆಂಗಸರ ಬಗ್ಗೆ ಆಡಿದ ಕೆಟ್ಟ ಮಾತು ಎನಿಸಿದರೂ, ಚಾಣಕ್ಯ ಹೇಳಿರುವುದರಲ್ಲಿ ಸತ್ಯವಿದೆ ಎಂದು ಎಲ್ಲರೂ ಭಾವಿಸುತ್ತಾರೆ.
ನಾಭಿಗೆ ಪ್ರತಿದಿನ ಹಿಂಗು ಹಚ್ಚಿ ಆಯುರ್ವೇದ ಮಾತ್ರವಲ್ಲ, ಜ್ಯೋತಿಷ್ಯ ಪ್ರಯೋಜನವನ್ನೂ ಪಡೆಯಿರಿ
ಚಾಣಕ್ಯನ ಇನ್ನೊಂದು ಮಾತನ್ನು ಹೇಳಿದ್ದಾರೆ. 'ಬುದ್ಧಿಶಾಲಿಯಾದವನು ಅಷ್ಟೇನೂ ರೂಪಸಿ ಅಲ್ಲದಿದ್ದರೂ, ಅಂಗವಿಕಲೆಯಾದರೂ ಉತ್ತಮ ಮನೆತನದ ಕನ್ಯೆಯನ್ನೇ ವಿವಾಹವಾಗಬೇಕು. ಆದರೆ, ತನಗಿಂತ ಕೆಳಮಟ್ಟದ ಕುಟುಂಬದ ಕನ್ಯೆಯನ್ನು ಸುಂದರಿಯಾದರೂ ವಿವಾಹ ಆಗಬಾರದು. ಸಾಮಾಜಿಕವಾಗಿ ಸಮಾನ ಸ್ತರದಲ್ಲಿ ಇರುವವರ ನಡುವೆ ಮಾತ್ರ ವಿವಾಹ ಸಂಬಂಧ ಯೋಗ್ಯವಾದದ್ದು' ಎಂದಿದ್ದಾರೆ ಆಚಾರ್ಯ ಚಾಣಕ್ಯ.
ಜೂನ್ ತಿಂಗಳ ಅದೃಷ್ಟದ ರಾಶಿಗಳು ಇವು, ಹಣ, ಕಾರು, ಆಸ್ತಿ ಪಕ್ಕಾ
ಅಷ್ಟೇ ಅಲ್ಲ, ದುಷ್ಟಳಾದ ಹೆಂಡತಿ, ತೋರಿಕೆಯ ಸ್ನೇಹಿತ, ವಾಚಾಳಿ ಸೇವಕ ಮತ್ತು ಹಾವಿರುವ ಮನೆಯಲ್ಲಿ ವಾಸ ಇವೆಲ್ಲವೂ ಸಾವಿಗೆ ಸಮಾನ ಎಂದಿದ್ದಾರೆ ಚಾಣಕ್ಯರು. ದುಷ್ಟ ಹೆಂಡತಿ ಮನೆಯಲ್ಲಿ ಇದ್ದರೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಚಾಣಕ್ಯರು ನಿರ್ಧಾರದ ಧ್ವನಿಯಲ್ಲಿ ಹೇಳಿದ್ದಾರೆ. ಪವಿತ್ರಳು, ಪತಿವ್ರತೆ ಹಾಗೂ ತನ್ನ ಪತಿಗೆ ಇಷ್ಟವಾಗುವಂತೆ ನಡೆದುಕೊಳ್ಳುವವಳೇ ನಿಜವಾದ ಸತಿ ಎಂದಿದ್ದಾರೆ ಚಾಣಕ್ಯರು.
ಬುಧ ಶುಕ್ರ ಸಂಯೋಗ ಈ 5 ರಾಶಿಗೆ ಬಂಪರ್ ಲಾಭ ಜೂನ್ ತಿಂಗಳು ಕೈ ಹಿಡಿಯಲಿದೆ ಅದೃಷ್ಟ
ಮುಂದುವರೆದು ಚಾಣಕ್ಯರು, ಪತ್ನಿಯ ಮನಸ್ಸು ನೋಯಿಸದೇ ಆಕೆಯಿಂದ ಪಡೆಯುವ ಸುಖವೇ ನಿಜವಾದ ಸುಖ. ಆಕೆ ನೀಡುವ ಊಟವೇ ಮೃಷ್ಟಾನ್ನ. ಅತಿಯಾಗಿ ಆಕೆಯಿಂದ ಸುಖವನ್ನು ಅಪೇಕ್ಷಿಸುವುದು ಅಪಾಯಕಾರಿ. ಅದೇ ರೀತಿ ಅಧ್ಯಯನ, ಜಪ, ದಾನ, ಈ ವಿಷಯಗಳ ಬಗ್ಗೆ ಸಾಕು ಸಾಕೆಂಬ ಭಾವನೆಯನ್ನು ಬೆಳೆಸಿಕೊಂಡರೆ, ಮನುಷ್ಯ ಎಂದಿಗೂ ಉನ್ನತಿ ಹೊಂದಲಾರ' ಎಂದಿದ್ದಾರೆ ಚಾಣಾಕ್ಯರು.