Asianet Suvarna News Asianet Suvarna News

ಮಹಿಳಾ ಕ್ರಿಕೆಟ್ ಕೋಚ್ ಆಯ್ಕೆ: ಪೊವಾರ್ ಮುಂದುವರಿಕೆಗೆ ನೋ ಎಂದ ರಾಯ್

ವೆಸ್ಟ್ ಇಂಡೀಸ್’ನಲ್ಲಿ ನಡೆದ ಮಹಿಳಾ ವಿಶ್ವಕಪ್ ಟಿ20 ಸೆಮಿಫೈನಲ್‌ನಲ್ಲಿ ಮಿಥಾಲಿಯನ್ನು ಹೊರಗಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. 

CoA chief Vinod Rai overrules Diana Edulji request to extend Ramesh Powar contract as Indian womens team coach
Author
New Delhi, First Published Dec 11, 2018, 1:12 PM IST

ನವದೆಹಲಿ[ಡಿ.11]: ‘ಭಾರತ ಮಹಿಳಾ ತಂಡದ ಕೋಚ್ ಆಯ್ಕೆ ಪ್ರಕ್ರಿಯೆ ರದ್ದುಗೊಳಿಸಿ, ನ್ಯೂಜಿಲೆಂಡ್ ಸರಣಿವರೆಗೂ ರಮೇಶ್ ಪೊವಾರ್ ಅವರನ್ನೇ ಕೋಚ್ ಆಗಿ ಮುಂದುವರಿಸಬೇಕೆಂದು ಸುಪ್ರೀಂಕೋರ್ಟ್ ರಚಿಸಿರುವ ಆಡಳಿತ ಮಂಡಳಿಯ ಸದಸ್ಯೆ ಡಯಾನಾ ಎಡುಲ್ಜಿ, ಮಂಡಳಿಯ ಮುಖ್ಯಸ್ಥ ವಿನೋದ್ ರಾಯ್‌ಗೆ ಪತ್ರ ಬರೆದಿದ್ದಾರೆ. 

ಕೋಚ್‌ ಪೊವಾರ್‌ ಪರ ಹರ್ಮನ್‌, ಸ್ಮೃತಿ ಬ್ಯಾಟಿಂಗ್‌

ಎಡುಲ್ಜಿ ಸಲಹೆಯನ್ನು ತಿರಸ್ಕರಿಸಿರುವ ರಾಯ್, ಕೋಚ್ ಆಯ್ಕೆಗಾಗಿ ಈಗಾಗಲೇ ಬಿಸಿಸಿಐ ಅರ್ಜಿ ಕರೆದಿದೆ. ಹಾಗಾಗಿ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. 

ಕೋಚ್‌ ಪವಾರ್‌ಗೆ ಬಿಸಿಸಿಐ ಗೇಟ್‌ಪಾಸ್‌! ಹೊಸ ಅರ್ಜಿ ಆಹ್ವಾನ

ವೆಸ್ಟ್ ಇಂಡೀಸ್’ನಲ್ಲಿ ನಡೆದ ಮಹಿಳಾ ವಿಶ್ವಕಪ್ ಟಿ20 ಸೆಮಿಫೈನಲ್‌ನಲ್ಲಿ ಮಿಥಾಲಿಯನ್ನು ಹೊರಗಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕಡೆಯ ದಿನವಾಗಿದೆ. ಕನ್ನಡಿಗ ವೆಂಕಟೇಶ್ ಪ್ರಸಾದ್, ಮನೋಜ್ ಪ್ರಭಾಕರ್, ಹರ್ಷೆಲ್ ಗಿಬ್ಸ್ ಸೇರಿದಂತೆ ಕೋಚ್ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. 

ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಕನ್ನಡಿಗನೇ ಕೋಚ್..?

 

Follow Us:
Download App:
  • android
  • ios