ಕುಡುಕರಿಂದಲೇ ತುಂಬಿದ್ದ ಕೇರಳದ ಗ್ರಾಮವೊಂದು ಇಂದು ಚಟ ಮುಕ್ತವಾಗಿದೆ. ಇದಕ್ಕೆ ಕಾರಣವಾಗಿದ್ದು, ಮದ್ಯವರ್ಜನ ಶಿಬಿರವಲ್ಲ, ಬದಲಾಗಿ ಚೆಸ್ ಆಟ. ಆಶ್ಚರ್ಯವಾದರು ಇದು ನಿಜ ಈ ಆಸಕ್ತಿಕರ ಸ್ಟೋರಿ ಓದಿ

ಒಮ್ಮೆ ಕುಡಿತಕ್ಕೆ ದಾಸರಾದರೆ ಅದರಿಂದ ಹೊರಬರುವುದು ಬಹಳ ಕಷ್ಟದ ಕೆಲಸ. ಅನೇಕರು ಕುಡಿದು ಕುಡಿದೇ ಜೀವನವನ್ನು ಕೊನೆಗೊಳಿಸಿಬಿಡುತ್ತಾರೆ. ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದಲ್ಲಿ ಕುಡುಕರಿಗೇನು ಕಡಿಮೆ ಇಲ್ಲ. ಆದರೆ ಇಲ್ಲಿನ ಗ್ರಾಮವೊಂದು ಈಗ ಕುಡಿತವನ್ನು ಬಿಟ್ಟು ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಂಡ ಕಾರಣಕ್ಕೆ ಫೇಮಸ್ ಆಗಿದೆ. ಕೇರಳದ ಗ್ರಾಮವೊಂದರ ಬಹುತೇಕ ಕುಡಿತಕ್ಕೆ ದಾಸರಾಗಿದ್ದ ಗ್ರಾಮದ ಜನ ಕುಡಿತದ ಚಟವನ್ನು ಬಿಟ್ಟು ಬೇರೊಂದು ಹವ್ಯಾಸಕ್ಕೆ ದಾಸರಾಗಿದ್ದಾರೆ. ಹಾಗಂತ ಇದು ಕೆಟ್ಟ ಹವ್ಯಾಸವಲ್ಲ, ಈ ದೊಡ್ಡ ಸಾಹಸದ ಹಿಂದಿರುವುದು ಓರ್ವ ಚೆಸ್ ಮಾಸ್ಟರ್ ಹೌದು. ಅಚ್ಚರಿ ಎನಿಸಿದರೂ ಸತ್ಯ. ಚೆಸ್ ಮ್ಯಾನ್(Chess Man) ಎಂದೇ ಅಲ್ಲಿ ಸ್ಥಳೀಯವಾಗಿ ಖ್ಯಾತಿ ಪಡೆದಿರುವ ವ್ಯಕ್ತಿಯೊಬ್ಬರ ಮಹತ್ಕಾರ್ಯದಿಂದ ಇದು ಸಾಧ್ಯವಾಗಿದ್ದು ಅಲ್ಲಿನ ಜನ ಈ ಕಾರಣಕ್ಕೆ ಆ ವ್ಯಕ್ತಿಗೆ ಧನ್ಯವಾದ ಹೇಳುತ್ತಾರೆ.

ಕುಡುಕರ ಮನಪರಿವರ್ತನೆ ಮಾಡಿದ ಚೆಸ್ ಮ್ಯಾನ್

ಟ್ರಾವೆಲ್ ವ್ಲಾಗರ್ ಶೆನಾಜ್ (Travel vlogger Shenaz)ಎಂಬುವವರು ಈ ಪ್ರೇರಣೆ ನೀಡುವ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಅಂದಹಾಗೆ ಚೆಸ್ ಮೂಲಕ ತಮಗಂಟಿದ ಮದ್ಯದ ಚಟವನ್ನು ಜಯಿಸಿದ ಕೇರಳದ ಮರೋಟಿಚಲ್ (Marottichal)ಗ್ರಾಮದ ಕತೆ ಇದು. ಕುಡಿತಕ್ಕೆ ದಾಸರಾಗಿ ಇಹವನ್ನೇ ಮರೆತಿದ್ದ ಇಲ್ಲಿನ ಜನ ಚೆಸ್ ಮ್ಯಾನ್ ಎಂದು ಕರೆಯಲ್ಪಡುವ ವ್ಯಕ್ತಿಯ ನೇತೃತ್ವದಲ್ಲಿ ತಮ್ಮ ಮಾನಸಿಕ ಗಮನವನ್ನು ಕುಡಿತದಿಂದ ಆಟದತ್ತ ಬದಲಾಯಿಸಿಕೊಂಡರು. ಹಾಗೂ ಇಂದು ಗ್ರಾಮದ ಶೇಕಡಾ 90 ರಷ್ಟು ಗ್ರಾಮಸ್ಥರು ನಿಯಮಿತವಾಗಿ ಚೆಸ್ ಆಡುತ್ತಾರೆ ಮತ್ತು ವರ್ಷಗಳಿಂದ ಇಲ್ಲಿ ಯಾರೂ ಮದ್ಯವನ್ನು ಮುಟ್ಟಿಯೇ ಇಲ್ಲವೆಂದು ಸ್ವತಃ ಗ್ರಾಮದ ಜನರೇ ಹೇಳಿಕೊಳ್ಳುತ್ತಾರೆ.

ಗ್ರಾಮ ಚಿತ್ರಣವನ್ನೇ ಬದಲಿಸಿತು ಚೆಸ್:

ಶೆನಾಜ್ ತಮ್ಮ ಹಲವು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಈಗ ಭಾರಿ ವೈರಲ್ ಆಗುತ್ತಿದೆ. ತಮ್ಮ ಲಿಂಕ್ಡಿನ್ ಪೋಸ್ಟ್‌ನಲ್ಲಿ ಅವರು ಹೀಗೆ ಬರೆದಿದ್ದಾರೆ. ಒಬ್ಬ ವ್ಯಕ್ತಿ ಅವರಿಗೆ ಚೆಸ್‌ನ್ನು ಪರಿಚಯಿಸುವವರೆಗೆ ಈ ಹಳ್ಳಿಯಲ್ಲಿ, ಎಲ್ಲರೂ ಒಂದು ಕಾಲದಲ್ಲಿ ಕುಡಿತಕ್ಕೆ ದಾಸರಾಗಿದ್ದರು(Alcohol Addiction). ಇದು ಸಿನಿಮಾದಂತೆ ತೋರುತ್ತಿದೆಯೇ? ಆದರೆ ಇದು ನಿಜ. ಈ ಭಾರತೀಯ ಹಳ್ಳಿಯು ತನ್ನ ಕಥೆಯನ್ನು ಪುನಃ ಬರೆದಿದೆ. ಮದ್ಯವರ್ಜನ ಅಥವಾ ಮನಪರಿವರ್ತನೆಯ ಶಿಬಿರದಿಂದ ಅಲ್ಲ ಕೇವಲ, ಆದರೆ ಆನೆ, ಕುದುರೆ ಪದಾತಿದಳ ಹಾಗೂ ರಾಣಿಯಿಂದಾಗಿ. ಆ ಗ್ರಾಮದ ಜನ ಅವರನ್ನು 'ಚೆಸ್ ಮ್ಯಾನ್' ಎಂದು ಕರೆಯುತ್ತಾರೆ. ಈ ವ್ಯಕ್ತಿ ಅಲ್ಲಿನ ಜನರ ವ್ಯಸನವನ್ನು ಏಕಾಗ್ರತೆಯಾಗಿ, ಕೋಪವನ್ನು ತರ್ಕವಾಗಿ ಮತ್ತು ಹತಾಶೆಯನ್ನು ಶಿಸ್ತಾಗಿ ಪರಿವರ್ತಿಸಿದ ವ್ಯಕ್ತಿ ಎಂದು ಶೆನಾಜ್ ಬರೆದುಕೊಂಡಿದ್ದಾರೆ.

ವರ್ಷದಿಂದ ಮದ್ಯ ಮುಟ್ಟದ ಜನ:

ಇಂದು ಆ ಹಳ್ಳಿಯ 90% ಜನರು ಚೆಸ್ ಆಡುತ್ತಾರೆ. ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ಮಲಗುವ ಮುನ್ನವೂ ಸಹ ಅವರು ಚೆಸ್ ಆಡುತ್ತಿದ್ದು, ಅಲ್ಲಿನ ಮಕ್ಕಳು ಗಣಿತದಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಿದ್ದಾರೆ. ವಯಸ್ಕರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದಾರೆ. ಅದರಲ್ಲು ಮುಖ್ಯವಾಗಿ ವರ್ಷಗಳಿಮದ ಅಲ್ಲಿ ಯಾರೂ ಮದ್ಯವನ್ನು ಮುಟ್ಟಿಲ್ಲ. ಇದು ಕೇವಲ ವ್ಯಸನದ ವಿರುದ್ಧದ ಗೆಲುವು ಅಲ್ಲ ಇದು ಸಂಕಲ್ಪ ಶಕ್ತಿಗೆ ಸಿಕ್ಕ ಗೆಲುವಿನ ಸಾಕ್ಷಿಯಾಗಿದೆ. ಸಮುದಾಯವೊಂದು ಆರೋಗ್ಯಕರ ಹವ್ಯಾಸವನ್ನು ಕಂಡುಕೊಂಡಾಗ ಪರಿವರ್ತನೆ ಶುರುವಾಗುತ್ತದೆ. ಇದು ನನ್ನ ಭಾರತ ಎಂದು ಅವರು ಬರೆದುಕೊಂಡಿದ್ದಾರೆ.

ಬದುಕು ಬದಲಿಸಿದ ಚೆಸ್ ಬಗ್ಗೆ ಜನರ ಮಾತು:

ವೀಡಿಯೋದಲ್ಲಿ ಶೆಹನಾಜ್ ಅವರು ಹಲವು ಗ್ರಾಮಸ್ಥರನ್ನು ಮಾತನಾಡಿಸಿದ್ದು, ಅವರು ಕುಡಿತದಿಂದ ಹೊರಗೆ ಬರುವುದಕ್ಕೆ ಚೆಸ್ ನಮಗೆ ಹೇಗೆ ಸಹಾಯ ಮಾಡಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಈ ಚೆಸ್ ಆಟವೂ ಆ ಗ್ರಾಮದ ಪುರುಷರು, ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಸೇರಿದಂತೆ ಎಲ್ಲರಿಗೂ ಪ್ರಯೋಜನವನ್ನು ನೀಡಿದೆ, ಅವರ ಮನಸ್ಸನ್ನು ಚುರುಕುಗೊಳಿಸಿದೆ, ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ಗಮನವನ್ನು ಸುಧಾರಿಸಿದೆ. ಸರಳವಾದ ಚೆಸ್ ಆಟವು ಇಡೀ ಹಳ್ಳಿಯನ್ನು ಹೇಗೆ ಆರೋಗ್ಯಕರವಾಗಿ ಪರಿವರ್ತಿಸಿತು ಮತ್ತು ಕೆಟ್ಟ ಚಟವನ್ನು ಜಯಿಸಲು ಸಹಾಯ ಮಾಡಿತು ಎಂಬುದು ಈಗ ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ.

 

View post on Instagram