)
ಸರ್ಕಾರಿ ಕೆಲಸ ಕೊಡಿಸುತ್ತಾಳಂತೆ ಕಾಂಗ್ರೆಸ್ ನಾಯಕಿ! ಲಕ್ಷ ಲಕ್ಷ ಪಂಗನಾಮ ಹಾಕಿದವಳಿಗೆ ಬಿತ್ತು ಗೂಸಾ!
ಕಾಂಗ್ರೆಸ್ ಪಕ್ಷದ ನಾಯಕಿಯೊಬ್ಬಳು ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿ, ಜನರ ಕೈಯಲ್ಲಿ ಗೂಸಾ ತಿಂದಿದ್ದಾಳೆ. ಏನಿದು ವಂಚನೆ ಪ್ರಕರಣ? ಎಲ್ಲಿ ನಡೆದಿದ್ದು? ನೋಡೋಣ ಬನ್ನಿ
ಬೆಂಗಳೂರು: ಆಕೆ ಕಾಂಗ್ರೆಸ್ ಪಕ್ಷದ ನಾಯಕಿ. ಸಿಎಂ, ಡಿಸಿಎಂಯಿಂದ ಹಿಡಿದು ಕೆಲ ಸಚಿವರುಗಳ ಜೊತೆ ಒಳ್ಳೆಯ ಭಾಂಧವ್ಯ ಹೊಂದಿರುವವಳು. ಇಂಥವರು ಇವತ್ತು ಟೌನ್ ಹಾಲ್ನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿದ್ರು. ಎಲ್ಲಾ ಸಿದ್ದತೆಗಳಾಗ್ತಿತ್ತು, ಆದ್ರೆ ಇದೇ ಟೈಂಗೆ ಅಲ್ಲಿ ಎಂಟ್ರಿ ಕೊಟ್ಟ ಒಂದು ಲೇಡಿ ಗ್ಯಾಂಗ್ ಆ ನಾಯಕಿ ಮೇಲೆ ಎರಗಿ ಬೇಕ್ಬೇಕಾದಾಗೆ ಹಲ್ಲೆ ಮಾಡೋದಕ್ಕೆ ಮುಂದಾಗಿದ್ರು. ಆದ್ರೆ ಅಷ್ಟರಲ್ಲೆ ಅಲ್ಲೇ ಇದ್ದ ನಾಯಕಿ ಬೆಂಬಲಿಗರು ಗೂಸ ಕೊಡಲು ಹೋದವರಿಗೇ ಪೆಟ್ಟು ಕೊಟ್ಟು ಕಳಿಸಿದ್ರು.
ಇನ್ನೂ ಒದೆ ತಿಂದವರದ್ದು ಒಂದೇ ಚೀರಾಟ. ಮೋಸಗಾತಿ ನಮ್ಮ ದುಡ್ಡು ನಮಗೆ ವಾಪಸ್ ಕೊಡು ಅಂತ. ಅಷ್ಟಕ್ಕೂ ಯಾರು ಆ ಕಾಂಗ್ರೆಸ್ ನಾಯಕಿ? ಆಕೆ ಮಾಡಿರೋ ಮೋಸವಾದ್ರೂ ಏನು? ಇವತ್ತು ಟೌನ್ ಹಾಲ್ನಲ್ಲಿ ನಡೆದಿದ್ದಾದ್ರೂ ಏನು ಅನ್ನೋದೇ ಇವತ್ತಿನ ಎಫ್.ಐ.ಆರ್