ಆಸ್ಟ್ರೇಲಿಯಾ ಸೇರಿದಂತೆ ಹಲವಾರು ದೇಶಗಳು ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಚೀನಾ, ಉತ್ತರ ಕೊರಿಯಾ ಮತ್ತು ಇರಾನ್‌ನಂತಹ ದೇಶಗಳು ಕಠಿಣ ನಿಯಂತ್ರಣಗಳನ್ನು ಹೊಂದಿವೆ.
ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ತಮ್ಮ ದೇಶದಲ್ಲಿ ಸಾಮಾಜಿಕ ಮಾಧ್ಯಮ ಬಳಕೆಗೆ ಕಾನೂನು ಜಾರಿಗೊಳಿಸಿದೆ. ಈಗ 16 ವರ್ಷದೊಳಗಿನ ಮಕ್ಕಳು ಅಲ್ಲಿ ಸಾಮಾಜಿಕ ಜಾಲತಾಣ ಬಳಸುವಂತಿಲ್ಲ
ಚೀನಾ
ಚೀನಾ ಸಾಮಾಜಿಕ ಮಾಧ್ಯಮದ ಮೇಲೆ ಬಹಳ ಕಠಿಣ ನಿಯಂತ್ರಣವನ್ನು ಹೊಂದಿದೆ. ಫೇಸ್‌ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಅಂದರೆ X ಹಾಗೂ ಯೂಟ್ಯೂಬ್‌ಗೆ ನಿಷೇಧ ಹೇರಲಾಗಿದೆ.
ಉತ್ತರ ಕೊರಿಯಾ
ಉತ್ತರ ಕೊರಿಯಾದಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ಪ್ರವೇಶವನ್ನು ನಿಷೇಧಿಸಲಾಗಿದೆ. ಕೆಲವು ಗಣ್ಯ ಗುಂಪುಗಳು ಸರ್ಕಾರದ ಅನುಮತಿ ಇದ್ದವರೂ ಮಾತ್ರ ಇಲ್ಲಿ ಸೋಶಿಯಲ್ ಮೀಡಿಯಾ ಬಳಸಬಹುದು.
ಸೌದಿ ಅರೇಬಿಯಾ
ಸೌದಿ ಅರೇಬಿಯಾದಲ್ಲಿಯೂ ಸೋಶಿಯಲ್ ಮೀಡಿಯಾದ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಅಲ್ಲಿನ ಸರ್ಕಾರ, ರಾಜಮನೆತನ ಹಾಗೂ ಧರ್ಮ ವಿರೋಧಿ ಪೋಸ್ಟ್ ಮಾಡಿದ್ದಲ್ಲಿ ಬಂಧನ ಮತ್ತು ಜೈಲು ಶಿಕ್ಷೆಯಾಗಬಹುದು
ರಷ್ಯಾ
ರಷ್ಯಾ ಕೂಡ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ 2022ರಿಂದಲೂ ಇದು ಜಾರಿಯಲ್ಲಿದೆ
ಯುಎಇ
ಯುಎಇಯಲ್ಲಿಯೂ ಸೋಶಿಯಲ್ ಮೀಡಿಯಾ ಖಾತೆಗಳನ್ನು ಶಿಸ್ತುಬದ್ಧವಾಗಿ ಗಮನಿಸಲಾಗುತ್ತಿದ್ದು, ಸರ್ಕಾರ ವಿರೋಧಿ, ವದಂತಿಗಳ ಹಬ್ಬಿಸುವುದು ಅಥವಾ ಇಸ್ಲಾಂ ವಿರುದ್ಧ ಪೋಸ್ಟ್ ಮಾಡಿದಲ್ಲಿ ಕಂಬಿ ಹಿಂದೆ ಕೂರುವುದು ಪಕ್ಕಾ ಆಗಲಿದೆ.
ಇರಾನ್
ಇರಾನ್‌ನಲ್ಲಿ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಿಷೇಧಿಸಲಾಗಿದೆ