Woman
ಟೆಕ್ಸಾಸ್‌ನ ಬೋರ್ನ್‌ನ ಮಹಿಳೆಯೊಬ್ಬರು ಜೇನುನೊಣಗಳನ್ನು ಹೊಟ್ಟೆಯ ಮೇಲಿಟ್ಟುಕೊಂಡು ಪೋಟೋಶೂಟ್ ಮಾಡಿಸಿಕೊಂಡರು.
ಜೇನುಸಾಕಣೆ ಮಾಡುವ ಮಹಿಳೆ ಜೇನುಗೂಡಿನ ಪಕ್ಕದಲ್ಲಿ ನಿಂತಿದ್ದಳು, ಜೇನುನೊಣಗಳ ಹಿಂಡು ಅವಳ ಹೊಟ್ಟೆಯ ಮೇಲೆ ಕುಳಿತಿತ್ತು.
ಜೇನುನೊಣಗಳು ಹೊಟ್ಟೆಯ ಮೇಲೆ ಕುಳಿತುಕೊಳ್ಳಲು ಮಹಿಳೆ ರಾಣಿ ಜೀನನ್ನು ತನ್ನ ಹೊಟ್ಟೆಗೆ ಕಟ್ಟಿಕೊಂಡಳು. ಇದರಿಂದ ಸಹಜವಾಗಿಯೇ ಉಳಿದ ಜೇನುನೊಣ ಹೊಟ್ಟೆಯ ಮೇಲೆ ಕುಳಿತವು.
ಫೋಟೋಶೂಟ್‌ಗೆ ಮಹಿಳೆ ಮೊದಲೇ ವೈದ್ಯರಿಂದ ಅನುಮತಿ ಪಡೆದಿದ್ದಳು. ಸರಿಸುಮಾರು 10 ಸಾವಿರ ಜೇನುನೊಣಗಳು ಮಹಿಳೆಯ ಹೊಟ್ಟೆಯ ಮೇಲೆ ಕುಳಿತಿತ್ತು.
ಬೆಥನಿ ಎಂಬ ಮಹಿಳೆ ಸಾವಿರಾರು ಜೇನುನೊಣಗಳು ತಮ್ಮ ಹೊಟ್ಟೆಯ ಮೇಲೆ ಕುಳಿತುಕೊಳ್ಳುವ ರೀತಿ ಫೋಟೋಶೂಟ್ ಮಾಡಿಸಿಕೊಂಡರು. ಅಚ್ಚರಿಯ ವಿಚಾರವೆಂದರೆ ಇದು ಆಕೆಗೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟು ಮಾಡಲ್ಲಿಲ್ಲ.
ಜೇನುನೊಣಗಳಿಗೆ ಅಲರ್ಜಿಯನ್ನು ಹೊಂದಿದ್ದರೂ ಮಹಿಳೆ ಆಸಕ್ತಿಯಿಂದ ಫೋಟೋಗಳನ್ನು ತೆಗೆಸಿಕೊಂಡರು. 38 ವರ್ಷದ ಬೆಥನಿ ತನ್ನ ಪತಿ ಪೆರ್ರಿ ಮತ್ತು ಮಕ್ಕಳೊಂದಿಗೆ ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ,