Kannada

ಪ್ರತಿ ಮನೆಯಲ್ಲೂ ಸಾಮಾನ್ಯ ಸಮಸ್ಯೆ

ತರಕಾರಿಗಳನ್ನು ಎಷ್ಟೇ ಚೆನ್ನಾಗಿ ಶುಚಿಗೊಳಿಸಿ ಫ್ರಿಡ್ಜ್‌ನಲ್ಲಿಟ್ಟರೂ ಮರುದಿನ ಹಾಳಾಗಿರುತ್ತವೆ. ಇದು ಪ್ರತಿ ಮನೆಯಲ್ಲೂ ಸಾಮಾನ್ಯ ಸಮಸ್ಯೆ. ಆದರೆ ತರಕಾರಿಗಳು ಹಲವು ದಿನಗಳವರೆಗೆ ಹಾಳಾಗದಂತೆ ಇರಲು ಈ ಸಲಹೆ ಪಾಲಿಸಿ.   

Kannada

ಕೊತ್ತಂಬರಿ ಸೊಪ್ಪು

ಒಣ ಅಥವಾ ಹಾಳಾದ ಕೊತ್ತಂಬರಿ ಸೊಪ್ಪಿನ ತದಿಯನ್ನು ಕತ್ತರಿಸಿ. ಹಾಳಾದ ಎಲೆಗಳನ್ನು ತೆಗೆದು ಬಾಕ್ಸ್‌ನಲ್ಲಿ ಕಿಚನ್ ಟಿಶ್ಯೂ ಹಾಕಿ ಕೊತ್ತಂಬರಿ ಸೊಪ್ಪನ್ನು ಇರಿಸಿ.  

Kannada

ಬಾಳೆಹಣ್ಣು

ಕಾಗದದಲ್ಲಿ ಚೆನ್ನಾಗಿ ಪ್ಯಾಕ್ ಮಾಡಿ. ನಂತರ ಒಂದು ಬಾಕ್ಸ್‌ನಲ್ಲಿಟ್ಟು ಬೇಕಾದರೆ ಫ್ರಿಡ್ಜ್‌ನಲ್ಲಿ ಸುಲಭವಾಗಿ ಸಂಗ್ರಹಿಸಬಹುದು. 

Kannada

ಶುಂಠಿ

ಶುಂಠಿಯನ್ನು ಚೂರುಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆಯಿರಿ. ನಂತರ ಬಾಟಲಿಯಲ್ಲಿ ನೀರು ತುಂಬಿಸಿ ಸಿಪ್ಪೆ ತೆಗೆಯದೆ ಶುಂಠಿಯನ್ನು ಹಾಕಿಡಿ.

Kannada

ಪಡವಲಕಾಯಿ

ಪಡವಲಕಾಯಿಯನ್ನು ತುಂಡುಗಳಾಗಿ ಕತ್ತರಿಸಿ ಕ್ಲಿಂಗ್ ಫಿಲ್ಮ್‌ (Cling film )ನಿಂದ ಪ್ರತಿ ತುಂಡನ್ನು ಸುತ್ತಿ. ನಂತರ  ಬಾಕ್ಸ್‌ನಲ್ಲಿಡಿ.

Kannada

ಬೀನ್ಸ್

ಬೀನ್ಸ್‌ನ ಎರಡೂ ತುದಿಗಳನ್ನು ಕತ್ತರಿಸಿ ಬೇಕಾದರೆ ತೊಳೆಯಿರಿ. ಒಣಗಿದ ನಂತರ ಕಿಚನ್ ಟಿಶ್ಯೂನಲ್ಲಿ ಸುತ್ತಿ ಬಾಕ್ಸ್‌ನಲ್ಲಿಡಿ.

Kannada

ಟೊಮೆಟೊ

ಪಾತ್ರೆಯಲ್ಲಿ ನೀರು, ಅರಿಶಿನ, ಉಪ್ಪು ಮತ್ತು ವಿನೆಗರ್ ಹಾಕಿ ಟೊಮೆಟೊಗಳನ್ನು ಹಾಕಿ. 10 ನಿಮಿಷದ ನಂತರ ತೆಗೆದು ಪ್ಯಾಕ್ ಮಾಡಿ ಬಾಕ್ಸ್‌ನಲ್ಲಿಡಿ.

Kannada

ಹಸಿಮೆಣಸಿನಕಾಯಿ

ತೊಳೆದು ಒಣಗಿಸಿ. ಹಸಿಮೆಣಸಿನಕಾಯಿಯ ತೊಟ್ಟುಗಳನ್ನು ತೆಗೆದು ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಬಾಕ್ಸ್‌ನಲ್ಲಿಡಿ.

ಶಿಲ್ಪಾ ಶೆಟ್ಟಿಯ ತೆಳ್ಳಗಿನ ಸೊಂಟ, ಸುಂದರ ಮುಖದ ಹಿಂದಿನ ರಹಸ್ಯ ಬಯಲು! 6 ಸರಳ ಯೋಗ ಭಂಗಿಗಳನ್ನು ನೀವೂ ಪ್ರಯತ್ನಿಸಿ!

Sania Mirza: ಮತ್ತೆ ಸುದ್ದಿಯಲ್ಲಿದ್ದಾರೆ ಭಾರತದ ಮೊದಲ ಮಹಿಳಾ ಟೆನ್ನಿಸ್ ಆಟಗಾರ್ತಿ!

ಈ ದೇಶದಲ್ಲಿದೆ ಜಗತ್ತಿನ ಅತ್ಯಂತ ದೊಡ್ಡದಾದ ಮಹಿಳಾ ಸೇನೆ

ಕರಿಬೇವಿನ ಸೊಪ್ಪು ಹಾಳಾಗದಂತೆ ಇಡುವ ಸುಲಭದ ಮಾರ್ಗವಿದು