ಮಸ್ಕರಾ ಹಚ್ಚುವಾಗ ಕಣ್ರೆಪ್ಪೆಗಳು ಒಂದಕ್ಕೊಂದು ಅಂಟಿಕೊಳ್ಳದಂತೆ ಸುಂದರವಾಗಿ ಕಾಣಲು ಕೆಲವು ಸುಲಭ ವಿಧಾನಗಳಿವೆ.
ಬ್ರಷ್ ಅನ್ನು ಕಣ್ರೆಪ್ಪೆಗಳ ಬುಡದಲ್ಲಿ ಇಟ್ಟು, ಅಕ್ಕಪಕ್ಕಕ್ಕೆ ಲಘುವಾಗಿ ಅಲುಗಾಡಿಸುತ್ತಾ ಮೇಲಕ್ಕೆ ಎಳೆಯಿರಿ. ಈ ರೀತಿ ಮಾಡುವುದರಿಂದ ರೆಪ್ಪೆಗಳು ಹೆಚ್ಚು ದಪ್ಪವಾಗಿ ಕಾಣುತ್ತವೆ.
ಮೊದಲ ಬಾರಿ ಮಸ್ಕರಾ ಹಚ್ಚಿದ ನಂತರ ಬ್ರಷ್ ಬಳಸಿ ಸ್ವಲ್ಪ ಪೌಡರ್ ಅನ್ನು ರೆಪ್ಪೆಗಳಿಗೆ ಹಚ್ಚಿ. ಇದರ ಮೇಲೆ ಮತ್ತೆ ಮಸ್ಕರಾ ಹಚ್ಚಿದರೆ ರೆಪ್ಪೆಗಳಿಗೆ ಒಳ್ಳೆ ವಾಲ್ಯೂಮ್ ಸಿಗುತ್ತದೆ.
ಬ್ರಷ್ ಅನ್ನು ಅಡ್ಡಲಾಗಿ ಇಟ್ಟು ಬಾಚುವ ಬದಲು, ನೇರವಾಗಿ ಹಿಡಿದು ರೆಪ್ಪೆಗಳ ತುದಿಗೆ ಮಾತ್ರ ಹಚ್ಚಿ. ಇದು ಕಣ್ರೆಪ್ಪೆಗಳ ಉದ್ದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮಸ್ಕರಾ ಗಟ್ಟಿಯಾಗಿದ್ದರೆ, ಆ ಬಾಟಲಿಯನ್ನು ಸ್ವಲ್ಪ ಹೊತ್ತು ಉಗುರುಬೆಚ್ಚಗಿನ ನೀರಿನಲ್ಲಿ ಇಡಿ. ಇದರಿಂದ ಮಸ್ಕರಾ ಸ್ಮೂತ್ ಆಗಿ, ಹಚ್ಚಲು ಸುಲಭವಾಗುತ್ತದೆ.
ಮಸ್ಕರಾ ಹಚ್ಚುವ ಮೊದಲು ಲ್ಯಾಶ್ ಕರ್ಲರ್ ಬಳಸಿ ಕಣ್ರೆಪ್ಪೆಗಳನ್ನು ಮೇಲಕ್ಕೆ ಸ್ವಲ್ಪ ಕರ್ಲ್ ಮಾಡಿ. ಇದು ನಿಮ್ಮ ಕಣ್ಣುಗಳಿಗೆ ಇನ್ನಷ್ಟು ಆಕರ್ಷಕ ಲುಕ್ ನೀಡುತ್ತದೆ.
ಬ್ರಷ್‌ಗೆ ಅಂಟಿಕೊಂಡಿರುವ ಹೆಚ್ಚುವರಿ ಮಸ್ಕರಾವನ್ನು ಟಿಶ್ಯೂ ಪೇಪರ್‌ನಲ್ಲಿ ಒರೆಸಿ ತೆಗೆಯಿರಿ. ಆಮೇಲೆ ಬಳಸಿದರೆ ಕಣ್ರೆಪ್ಪೆಗಳು ಒಂದಕ್ಕೊಂದು ಅಂಟಿಕೊಳ್ಳುವುದನ್ನು ತಪ್ಪಿಸಬಹುದು.
ಕೆಳಗಿನ ಕಣ್ರೆಪ್ಪೆಗಳಿಗೆ ಮಸ್ಕರಾ ಹಚ್ಚುವಾಗ ಚರ್ಮಕ್ಕೆ ತಾಗದಂತೆ ಕಣ್ಣಿನ ಕೆಳಗೆ ಒಂದು ಸ್ಪೂನ್ ಇಟ್ಟುಕೊಳ್ಳಿ. ಇದು ಮೇಕಪ್ ಅನ್ನು ಕ್ಲೀನ್ ಆಗಿ ಇಡಲು ಸಹಾಯ ಮಾಡುತ್ತದೆ.
ಮನೆಯಲ್ಲೇ ರೇಷ್ಮೆ ಸೀರೆ ವಾಶ್ ಮಾಡಲು 5 ಟಿಪ್ಸ್ ಬಳಸಿ, ಹೊಸದರಂತೆ ಹೊಳೆಯುತ್ತೆ
ವಯಸ್ಸು 30 ಆದ್ರೂ ಟೀನೇಜ್ ಗರ್ಲ್‌ನಂತೆ ಕಾಣಿಸಬೇಕಾ?ಈ ಡ್ರೆಸ್ ಸೆಲೆಕ್ಟ್ ಧರಿಸಿ
ತೆಳ್ಳಗೆ, ಎತ್ತರವಾಗಿ, ಬಳಕೋ ಬಳ್ಳಿಯಂತೆ ಕಾಣಲು ಸುಂದರವಾದ ಈ ಸೀರೆಗಳನ್ನು ಧರಿಸಿ
ಮೂಗು ಚುಚ್ಚಿಸಿಕೊಳ್ಳೋ ಭಯವೇ? ನೋ ಪಿಯರ್ಸಿಂಗ್ ನೋಸ್ ರಿಂಗ್ಸ್ ಭಯವಿಲ್ಲದೆ ಬಳಸಿ!