ಚಂದನವನದ ಡಬಲ್ ಮೂಗುತ್ತಿ ಸುಂದರಿ ಸಪ್ತಮಿ ಗೌಡ. ತಮ್ಮ ಲುಕ್ ಜೊತೆಗೆ ನಟನೆಯ ಮೂಲಕ ಗಮನ ಸೆಳೆದ ಬೆಡಗಿ.
webstories Oct 13 2025
Author: Pavna Das Image Credits:Instagram
Kannada
ಕಾಂತಾರ ನಾಯಕಿ
ಕಾಂತಾರ ಸಿನಿಮಾ ಮೂಲಕ ರಾತ್ರಿ ಬೆಳಗಾಗುವುದರೊಳಗಾಗಿ ಕನ್ನಡಿಗರ ಮನದಲ್ಲಿ ಮನೆ ಮಾಡಿದ ಫಾರೆಸ್ಟ್ ಗಾರ್ಡ್ ಲೀಲಾ.
Image credits: Instagram
Kannada
ಪ್ರತಿಭಾನ್ವಿತ ನಟಿ
ಕಾಂತಾರ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ, ಪ್ರೇಮಿಯಾಗಿ ಕೊನೆಗೆ ಫಾರೆಸ್ಟ್ ಆಫೀಸರ್ ಆಗಿ ಅದ್ಭುತವಾಗಿ ನಟಿಸಿದ್ದರು ಸಪ್ತಮಿ ಗೌಡ.
Image credits: Instagram
Kannada
ಹೊಸ ಸಿನಿಮಾದಲ್ಲಿ ಇಲ್ಲ
ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ಈ ಸಮಯದಲ್ಲಿ ಸಿನಿರಸಿಕರು ಸಪ್ತಮಿ ಗೌಡರನ್ನು ಮಿಸ್ ಮಾಡುತ್ತಿದ್ದಾರೆ.
Image credits: Instagram
Kannada
ಸೋಶಿಯಲ್ ಮೀಡೀಯಾದಲ್ಲಿ ಆಕ್ಟಿವ್
ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದರೂ ಸಪ್ತಮಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ.
Image credits: Instagram
Kannada
ಸೀರೆಯಲ್ಲಿ ಬೆಡಗಿ
ಇದೀಗ ಸಪ್ತಮಿ ಗೌಡ ಕಪ್ಪು ಮತ್ತು ಹಸಿರು ಬಣ್ಣದ ಜರಿ ಸೀರೆ ಧರಿಸಿದ್ದು, ಜೊತೆಗೆ ಒಂದಷ್ಟು ಆಭರಣ ಧರಿಸಿ ಪೋಸ್ ನೀಡಿದ್ದು, ಸಖತ್ ಮುದ್ದಾಗಿ ಕಾಣಿಸುತ್ತಿದ್ದಾರೆ.
Image credits: Instagram
Kannada
ಸುಂದರಿ ಸಪ್ತಮಿ
ಸೀರೆಯಲ್ಲಿ ನಟಿಯ ಅಂದವನ್ನು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದು, ಸೀರೆಯಿಂದ ನಟಿಯ ಅಂದ ಹೆಚ್ಚಿತೋ ಅಥವಾ ನಟಿಯಿಂದ ಸೀರೆಯ ಅಂದ ಹೆಚ್ಚಿತೋ ಅನ್ನೋದೇ ಗೊತ್ತಾಗದಷ್ಟು ಸೂಪರ್ ಆಗಿ ಕಾಣಿಸ್ತಿದ್ದಾರೆ.
Image credits: Instagram
Kannada
ದಿ ರೈಸ್ ಆಫ್ ಅಶೋಕ
ಸಪ್ತಮಿ ಗೌಡ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಇದೀಗ ನೀನಾಸಂ ಸತೀಶ್ ಜೊತೆ ದಿ ರೈಸ್ ಆಫ್ ಅಶೋಕ ಸಿನಿಮಾದಲ್ಲಿ ನಟಿಸುತಿದ್ದಾರೆ.
Image credits: Instagram
Kannada
ಹಲಗಲಿ ಸಿನಿಮಾದಲ್ಲಿ ಸಪ್ತಮಿ
ಸಪ್ತಮಿ ಇದೀಗ ಹಲಗಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟ ರಾಕ್ಷಸ ಧನಂಜಯ್ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ.
Image credits: Instagram
Kannada
ಸಪ್ತಮಿ ಗೌಡ ಸಿನಿಮಾಗಳು
ಸಪ್ತಮಿ ಗೌಡ ಪಾಪ್ ಕಾರ್ನ್ ಮಂಕಿ ಟೈಗರ್, ಕಾಂತಾರ, ದ ವಾಕ್ಸಿನ್ ವಾರ್, ಯುವ, ತಮ್ಮುಡು, ಶೋಧ ಸಿನಿಮಾದಲ್ಲಿ ನಟಿಸಿದ್ದರು.