ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಯಾಂಡಲ್‌ವುಡ್ ನಟಿ ಅನುಷಾ ರೈ ಸ್ಪರ್ಧಿಸುತ್ತಿದ್ದಾರೆ. ಇದೇ ಮೊದಲು ಅನುಷಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು.
tv-talk Nov 12 2024
Author: Vaishnavi Chandrashekar Image Credits:our own
Kannada
ಆನ್‌ಲೈನ್‌ನಲ್ಲಿ ಸಖತ್ ಆಕ್ಟಿವ್
ಬಹುತೇಕ ಮಂದಿ ಅನುಷಾರನ್ನು ನಟಿಯಾಗಿ ಗುರುತಿಸುವುದಕ್ಕಿಂತ ಹೆಚ್ಚಾಗಿ ಸೋಷಿಯಲ್ ಮೀಡಿಯಾ ಸ್ಟಾರ್ ಎಂದೇ ಗುರುತಿಸುತ್ತಾರೆ. ತಮ್ಮ ಜೀವನದ ಪ್ರತಿ ಅಪ್ಡೇಟ್‌ಗಳನ್ನು ಫಾಲೋವರ್ಸ್ ಜೊತೆ ಹಂಚಿಕೊಳ್ಳುತ್ತಾರೆ.
Image credits: our own
Kannada
ಸೆಲೆಬ್ರಿಟಿಗಳ ಜೊತೆ ಕ್ಲಿಕ್
ಅನುಷಾ ರೈರನ್ನು ಕಂಡರೆ ಸಾಕು ಅಭಿಮಾನಿಗಳು ಮತ್ತು ಫಾಲೋವರ್ಸ್‌ಗಳು ಸೆಲ್ಫಿ ಕ್ಲಿಕ್ ಮಾಡಿಕೊಳ್ಳಲು ಓಡೋಡಿ ಬರುತ್ತಾರೆ. ಆದರೆ ಅನುಷಾ ರೈ ಸಾಮಾನ್ಯರಂತೆ ಬೇರೆ ಸೆಲೆಬ್ರಿಟಿಗಳ ಜೊತೆ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ.
Image credits: our own
Kannada
ತುಮಕೂರು ಹುಡುಗಿ!
ಅನುಷಾ ರೈ ಹುಟ್ಟಿ ಬೆಳೆದಿದ್ದು ತುಮಕೂರಿನಲ್ಲಿ. ಇಂಜಿನಿಯರಿಂಗ್ ಮಾಡಿ ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಕಾಲಿಟ್ಟಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್‌ನಲ್ಲಿ ಪದವಿ ಪಡೆದಿದ್ದಾರೆ.
Image credits: our own
Kannada
ಅನುಷಾ ಮಾಡಲ್!
'ಬೆಸ್ಟ್ ಮಾಡೆಲ್ ಆಫ್ ಕರ್ನಾಟಕ' ಎಂಬ ಕಿರೀಟವನ್ನು ಅನುಷಾ 2016ರಲ್ಲಿ ಮುಡಿಗೇರಿಸಿಕೊಂಡಿದ್ದಾರೆ.
Image credits: our own
Kannada
ಕನ್ನಡ ಸಿನಿಮಾಗಳು!
ಅಣ್ಣಯ್ಯ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಣ್ಣಹಚ್ಚಿದ್ದಾರೆ. 'ಮಹಾನುಭಾವರು' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅನುಷಾ ಎಂಟ್ರಿ ಕೊಟ್ಟ ಮೇಲೆ ತಿಳಿಯಿತ್ತು ಧರ್ಮ ಕೀರ್ತಿರಾಜ್ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು. ಬ್ರೇಕಪ್ ಮಾಡಿಕೊಂಡು ಕೆಲ ವರ್ಷಗಳು ಕಳೆದಿದೆ ಅದರೂ ಸ್ನೇಹಿತರಾಗಿದ್ದಾರೆ.