ಬ್ರಹ್ಮಗಂಟು ಧಾರಾವಾಹಿಯಲ್ಲಿ ನರಸಿಂಹನ ಪಾತ್ರದಲ್ಲಿ ವೀಕ್ಷಕರ ಮನಸ್ಸು ಗೆದ್ದ ನಟ ಭರತ್ ನಾಯ್ಕ್. ತಮ್ಮ ಅಭಿನಯದ ಮೂಲಕವೇ ಜನಮನಗೆದ್ದ ಪಾತ್ರ ಅದು.
tv-talk Mar 06 2025
Author: Pavna Das Image Credits:Instagram
Kannada
ಭರತ್ ನಾಯ್ಕ್
ಭರತ್ ನಾಯ್ಕ್ ರಂಗಭೂಮಿ ಕಲಾವಿದರಾಗಿದ್ದು, ಅದ್ಭುತ ಗಾಯಕರೂ ಕೂಡ ಹೌದು. ಇವರ ಗಾಯನಕ್ಕೆ ಮಾರು ಹೋಗದವರು ಇಲ್ಲ.
Image credits: Instagram
Kannada
ಮ್ಯೂಸಿಕ್ ಬ್ಯಾಂಡ್
ಭರತ್ ನಾಯ್ಕ್ ತಮ್ಮದೇ ಆದ ಮ್ಯೂಸಿಕ್ ಬ್ಯಾಂಡ್ ಹೊಂದಿದ್ದು, ಹಲವಾರು ಕಡೆ ಕಾರ್ಯಕ್ರಮಗಳನ್ನು ನೀಡಿ ಜನಮನ ಸೆಳೆದಿದ್ದಾರೆ.
Image credits: Instagram
Kannada
ಇವರ ಗಾಯನಕ್ಕೆ ಹೆಂಗಳೆಯರು ಫಿದಾ
ಭರತ್ ನಾಯ್ಕ್ ಗಾಯನಕ್ಕೆ ಹೆಂಗಳೆಯರು ಫಿದಾ ಆಗಿದ್ದು, ಇವರ ಹಾಡು ಕೇಳಿ, ನಿಂತಲ್ಲೇ ಹೆಜ್ಜೆ ಹಾಕೋ ಅಭಿಮಾನಿಗಳ ಸಂಖ್ಯೆ ಸಿಕ್ಕಾಪಟ್ಟೆ ಇದೆ.
Image credits: Instagram
Kannada
ಪತ್ನಿಯ ಹುಟ್ಟುಹಬ್ಬ
ಇದೀಗ ಭರತ್ ಪತ್ನಿ ಪ್ರತಿಭ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ವಿಶೇಷವಾಗಿ ಫೋಟೊಗಳನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
Image credits: Instagram
Kannada
ನನಗೆ ಸಿಕ್ಕ ಬೆಸ್ಟ್ ಗಿಫ್ಟ್
ನನಗೆ ತಿಳಿದಿರುವ ಅತ್ಯಂತ ಅದ್ಭುತ ಮಹಿಳೆಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಪ್ರೀತಿ ನಾನು ಪಡೆದ ಅತ್ಯುತ್ತಮ ಉಡುಗೊರೆ ಎಂದು ಸೋಶಿಯಲ್ ಮೀಡೀಯಾದಲ್ಲಿ ಬರೆದುಕೊಂಡಿದ್ದಾರೆ.
Image credits: Instagram
Kannada
ಹೆಂಡ್ತಿ ಜೊತೆ ಟ್ರಾವೆಲ್
ಭರತ್ ಸೀರಿಯಲ್ ನಿಂದ ಬ್ರೇಕ್ ಸಿಕ್ಕಾಗಲೆಲ್ಲಾ, ಹೆಂಡ್ತಿ ಜೊತೆ ದೇಶ ವಿದೇಶ ಸುತ್ತುತ್ತಲೇ ಇರುತ್ತಾರೆ. ಇಬ್ಬರು ಟ್ರಾವೆಲ್ ಪ್ರಿಯರು ಕೂಡ ಹೌದು.
Image credits: Instagram
Kannada
ರೊಮ್ಯಾಂಟಿಕ್ ಫೋಟೊಗಳು
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಭರತ್, ಹೆಚ್ಚಾಗಿ ಹೆಂಡ್ತಿ ಜೊತೆಗಿನ ರೊಮ್ಯಾಂಟಿಕ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಬರ್ತ್ ಡೇಯಂದು ಕೂಡ ಸ್ಪೆಷಲ್ ಫೋಟೊ ಹಂಚಿಕೊಂಡಿದ್ದಾರೆ.