Small Screen

ಸುಪ್ರೀತಾ ಸತ್ಯನಾರಾಯಣ್

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದ ಸೀತಾ ವಲ್ಲಭ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಸುಪ್ರೀತಾ ಸತ್ಯನಾರಾಯಣ್ . 

Image credits: social media

ಜಗನ್ ಜೊತೆ ಸ್ಕ್ರೀನ್ ಶೇರ್

ಬಾಲ್ಯದ ಪ್ರೀತಿಯನ್ನು ದೊಡ್ಡವರಾದ ಮೇಲೆ ಹುಡುಕುವ ಎರಡು ಜೀವನಗಳ ಕಥೆ ಹೊಂದಿರುವ ಈ ಸೀರಿಯಲ್‌ನಲ್ಲಿ ಜಗನ್ ಜೊತೆ ಸುಪ್ರೀತಾ ಸ್ಕ್ರೀನ್ ಶೇರ್ ಮಾಡಿದ್ದರು. 

Image credits: social media

ಮೈಸೂರು ಹುಡುಗಿ

ಅರಮನೆ ನಗರಿ ಮೈಸೂರಿನಲ್ಲಿ ಹುಟ್ಟಿ ಬೆಳೆದಿರುವ ಸುಪ್ರೀತಾ, ಇಂಜಿನಿಯರಿಂಗ್ ಪದವಿ ಪಡೆದಿದ್ದು, ಪ್ರತಿಷ್ಟಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ನಟಿಯಾಗುವ ಹಂಬಲದಿಂದ ಕೆಲಸ ಬಿಟ್ಟಿದ್ದರು.

Image credits: social media

ಕನ್ನಡದ ಜೊತೆಗೆ ತೆಲುಗು

ಸೀತಾವಲ್ಲಭದ ಬಳಿಕ ಇವರು ತೆಲುಗಿನ ಸಾವಿತ್ರಮ್ಮಗಾರು ಅಬ್ಬಾಯಿ, ಒಂಟರಿ ಗುಲಾಬಿ ಸೀರಿಯಲ್ ನಲ್ಲಿ ನಟಿಸಿದ್ದಾರೆ. ಜೊತೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಸರಸು ಸೀರಿಯಲ್ ನಲ್ಲೂ ನಟಿಸಿದ್ದಾರೆ. 

Image credits: social media

ಜಾಹೀರಾತುಗಳಲ್ಲಿ ನಟನೆ

ಕೇವಲ ಸೀರಿಯಲ್ ಮಾತ್ರವಲ್ಲ ಹಲವಾರು ಪ್ರಿಂಟ್ ಮತ್ತು ಟೆಲಿವಿಶನ್ ಜಾಹೀರಾತುಗಳಲ್ಲಿ ಸಹ ಸುಪ್ರೀತಾ ನಟಿಸಿದ್ದಾರೆ. 

Image credits: social media

ಮೋಸ್ಟ್ ಡಿಸೈರೇಲ್ ಮಹಿಳೆ

ಅಷ್ಟೇ ಅಲ್ಲ ಸುಪ್ರೀತಾ 2018 ರಲ್ಲಿ ಟೈಮ್ಸ್ ಆಫ್ ಇಂಡಿಯಾ ನಡೆಸಿದ ಕನ್ನಡ ಟೆಲಿವಿಷನ್ ನ Most desirable women ಪಟ್ಟಿಯಲ್ಲಿ ಅಗ್ರ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. 

Image credits: social media

ಹವ್ಯಾಸ

ನಟನೆ ಮಾತ್ರವಲ್ಲದೇ, ಸೂಪರ್ ಆಗಿ ಡ್ಯಾನ್ಸಿಂಗ್ ಮಾಡುವ ಸುಪ್ರಿತಾಗೆ ಹಾಡು ಹೇಳುವ ಹವ್ಯಾಸ ಕೂಡ ಇದೆಯಂತೆ. ಅಷ್ಟೇ ಅಲ್ಲ ಇವರು ಬಿಡುವಿದ್ದಾಗ ಪೈಂಟಿಂಗ್ ಕೂಡ ಮಾಡುತ್ತಾರೆ. 

Image credits: social media

ಚಲನಚಿತ್ರಗಳಲ್ಲಿ ನಾಯಕಿ

ಕಿರುತೆರೆಯಿಂದ ಹಿರಿತೆರೆಗೆ ಭಡ್ತಿ ಪಡೆದಿರುವ ಸುಪ್ರೀತಾ ರುಗ್ಣ, ಲಾಂಗ್ ಡ್ರೈವ್, ಮೆಲೋಡಿ ಡ್ರಾಮಾ, ಶಾಲಿವಾಹನ ಶಕೆ, ಚಿತ್ರಗಳಲ್ಲಿ ನಟಿಸಿದ್ದಾರೆ. 

Image credits: social media

ಮೆಲೋಡಿ ಡ್ರಾಮಾ ರಿಲೀಸ್

ಸುಪ್ರೀತಾ ಸತ್ಯನಾರಾಯಣ್ ನಟಿಸಿರುವ ಮೆಲೋಡಿ ಡ್ರಾಮಾ ಸದ್ಯದಲ್ಲೆ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಹಾಡುಗಳು ಸದ್ದು ಮಾಡುತ್ತಿವೆ. ಚಿತ್ರದಲ್ಲಿ ಅನು ಪ್ರಭಾಕರ್, ರಾಜೇಶ್ ನಟರಂಗ ಅಭಿನಯಿಸಿದ್ದಾರೆ.

Image credits: social media

ರಾಧಿಕಾ ಸೀರಿಯಲ್‌ನಿಂದ ಹೊರ ಬಂದಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟಿ ಕಾವ್ಯ ಶಾಸ್ತ್ರಿ

ರಾಮಚಾರಿ ಬೆಡಗಿ ಚಾರು ಕುರಿತು ಇಂಟ್ರೆಸ್ಟಿಂಗ್ ಕಹಾನಿ

ಮಗಳಿಗೆ ಕಿವಿ ಚುಚ್ಚಿಸಿದ ನಟ ಚಂದು ಗೌಡ; ಹೇಗಿದ್ದಾಳೆ ಮುದ್ದು ಗೊಂಬೆ!

ಭಾಗ್ಯಲಕ್ಷ್ಮೀ ಸೀರಿಯಲ್ ಪೂಜಾ, ನಿಜ ಜೀವನದಲ್ಲೂ ಹೀಗೇನಾ?