Small Screen

ರಾಮಾಚಾರಿಯ ಚಾರು

ಮೊದಲಿಗೆ ಧಿಮಾಕಿನ ಹೆಣ್ಣಾಗಿ, ಇದೀಗ ತನ್ನ ಗಂಡ ರಾಮಾಚಾರಿಯ ಪ್ರೀತಿ ಪಡೆಯಲು ಆತನ ಜೊತೆ ಇರಲು ಎಲ್ಲಾ ಪ್ರಯತ್ನ ಮಾಡುವ ಹೆಣ್ಣು ಚಾರು ಅಂದ್ರೆ ಪ್ರೇಕ್ಷಕರಿಗೆ ತುಂಬಾನೆ ಇಷ್ಟ. 

Image credits: social media

ಮೌನ ಗುಡ್ಡೆಮನೆ

ತನ್ನ ಮೊದಲ ಸೀರಿಯಲ್‌ ಆರಂಭವಾದ ಅಲ್ಪಕಾಲದಲ್ಲೇ ಧೀಮಾಕು, ಪ್ರೀತಿ, ಹಠ, ನೋವು ಎಲ್ಲವನ್ನೂ ಸಲೀಸಾಗಿ ಅಭಿನಯಿಸಿದ ಮಂಗಳೂರು ಬೆಡಗಿ ಮೌನ ಗುಡ್ಡೆಮನೆ (Mouna Guddemane). 

Image credits: social media

ಮಂಗಳೂರು ಬೆಡಗಿ

ಮಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಮೌನ ಗುಡ್ಡೆಮನೆ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಡಿಗ್ರಿ ಮುಗಿಸಿದ್ದಾರೆ. ಆವಾಗ್ಲೇ ಮಾಡೆಲಿಂಗ್ ನಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದರು.

Image credits: social media

ಮಿಸ್ ಟೀನ್ ಮಂಗಳೂರು

ಮಾಡೆಲಿಂಗ್‌ನಲ್ಲೆ ಮೊದಲಿನಿಂದಲೂ ಆಸಕ್ತಿ ಹೊಂದಿರೋ ಮೌನ ತಮ್ಮ ಟೀನೇಜ್‌ನಲ್ಲೇ ಮಿಸ್ ಟೀನ್ ಮಂಗಳೂರು ರನ್ನರ್ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 
 

Image credits: social media

ವಿಶ್ವನಾಥ್‌ ಹಾಡಿಗೆ ಹೆಜ್ಜೆ

ಬಿಗ್‌ಬಾಸ್‌ನ ಸ್ಪರ್ಧಿ ವಿಶ್ವನಾಥ್‌ ಹಾವೇರಿ ಅವರ ವೀಡಿಯೋ ಹಾಡಿನಲ್ಲೂ ಈ ತುಳುನಾಡ ಬೆಡಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಸ್ಟೆಪ್‌ ಹಾಕಿದ್ದಾರೆ. 

Image credits: social media

ತುಳು ಆಲ್ಬಂಗಳಲ್ಲಿ ನಟನೆ

ರಾಮಾಚಾರಿ ಸೀರಿಯಲ್‌ಗೆ ಬರೋ ಮುನ್ನವೇ ಇವರು 'ಅಸೆದ ಕಡಲ್‌', 'ಮನಸಾ' ಮೊದಲಾದ ತುಳು ಆಲ್ಬಂಗಳಲ್ಲಿ ಹಾಗೂ 'ರಾಧಾಕೃಷ್ಣ' ಅನ್ನೋ ಹಿಂದಿ, ಕನ್ನಡ, ತುಳು ಭಾಷೆಯ ಆಲ್ಬಂಗಳಲ್ಲಿ ಇವರು ನಟಿಸಿದ್ದಾರೆ.

Image credits: social media

ತಾಯಿಯ ಬೆಂಬಲ

ತಂದೆ ತುಂಬಾ ಸ್ಟ್ರಿಕ್ಟ್ ಮಿಲಿಟರಿ ಆಫಿಸರ್ ಆಗಿರೋದ್ರಿಂದ, ಯಾವುದಕ್ಕೂ ಆವರ ಬೆಂಬಲ ಸಿಕ್ಕಿದ್ದೆ ಕಡಿಮೆ ಎನ್ನುವ ಮೌನಗೆ, ತಾಯಿಯ ಸ್ಟ್ರೆಂಥ್, ಅವರ ಸಪೋರ್ಟ್ ನಿಂದ ಇಲ್ಲಿವರೆಗೆ ಬರಲು ಸಾಧ್ಯವಾಯ್ತಂತೆ. 

Image credits: social media

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಮೌನ, ಹಲವಾರು ರೀಲ್ಸ್, ಫೋಟೋ ಶೂಟ್ ಮಾಡುತ್ತಾ ಅಭಿಮಾನಿಗಳ ಜೊತೆ ಶೇರ್ ಮಾಡುತ್ತಾರೆ. 

Image credits: social media

ಹುಟ್ಟುಹಬ್ಬ

ರಾಮಾಚಾರಿ ಸೀರಿಯಲ್ ಮೂಲಕ ಮನೆ ಮಾತಾಗಿರುವ ಚಾರು ಆಲಿಯಾಸ್ ಮೌನ ಗುಡ್ಡೆಮನೆ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರಿಗೆ ನಮ್ ಕಡೆಯಿಂದಲೂ ಹ್ಯಾಪಿ ಬರ್ತ್ ಡೇ ವಿಶ್ ಮಾಡೋಣ.

Image credits: social media

ಮಗಳಿಗೆ ಕಿವಿ ಚುಚ್ಚಿಸಿದ ನಟ ಚಂದು ಗೌಡ; ಹೇಗಿದ್ದಾಳೆ ಮುದ್ದು ಗೊಂಬೆ!

ಭಾಗ್ಯಲಕ್ಷ್ಮೀ ಸೀರಿಯಲ್ ಪೂಜಾ, ನಿಜ ಜೀವನದಲ್ಲೂ ಹೀಗೇನಾ?

ತುಂಡೈಕ್ಲು ನಿದ್ದೆಗೆಡಿಸಿದ 'ಕನ್ನಡತಿ' ಧಾರಾವಾಹಿ ನಟಿ ಸಾರಾ!

ಮತ್ತೊಮ್ಮೆ ಬೋಲ್ಡ್ ಫೋಟೋ ಶೂಟ್ ಮೂಲಕ ಕಿಚ್ಚು ಹಚ್ಚಿದ ಸಾನ್ಯಾ ಅಯ್ಯರ್