ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿ ಎಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದು, ಸದ್ಯ ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.
tv-talk Jan 24 2025
Author: Pavna Das Image Credits:Instagram
Kannada
ಪೂಜೆಗಳಲ್ಲಿ ಬ್ಯುಸಿ
ಜೈಲಿನಿಂದ ಬಂದ ತಕ್ಷಣ ಪವಿತ್ರಾ ಗೌಡ ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ಪೂಜೆ ಮಾಡಿಸಿದ್ದರು, ಅಲ್ಲದೇ ತಮ್ಮ ಮನೆಯಲ್ಲೂ ಸಹ ಪವಿತ್ರಾ ಪೂಜೆ ಮಾಡಿದ್ದರು.
Image credits: Instagram
Kannada
ಹೊರರಾಜ್ಯಕ್ಕೆ ತೆರಳಲು ಅನುಮತಿ
ಪವಿತ್ರಾ ಈ ಸಲ ಕೋರ್ಟಿಗೆ ಹೋದಾಗ ಹೊರ ರಾಜ್ಯಕ್ಕೆ ಪ್ರಯಾಣಿಸಲು ಹಾಗೂ ತಮ್ಮ ಬ್ಯುಸಿನೆಸ್ ಮತ್ತೆ ಶುರು ಮಾಡಲು ಅನುಮತಿ ಬೇಕು ಎಂದು ಬೇಡಿಕೆ ಇಟ್ಟಿದ್ದು, ಅದಕ್ಕೆ ಕೋರ್ಟ್ ಸಮ್ಮತಿ ನೀಡಿತ್ತು.
Image credits: Instagram
Kannada
ರೆಡ್ ಕಾರ್ಪೆಟ್
ಪವಿತ್ರಾ ಗೌಡ ಜೈಲಿಗೆ ಸೇರುವ ಮುನ್ನ ತಮ್ಮದೇ ಆದ ರೆಡ್ ಕಾರ್ಪೆಟ್ ಎನ್ನುವ ಡಿಸೈನರ್ ಶೋರೂಮ್ ತೆರೆದಿದ್ದರು. ಸಿನಿ ರಂಗದಲ್ಲೂ ತಾವು ಡಿಸೈನ್ ಮಾಡಿದ ಬಟ್ಟೆಗಳನ್ನು ನೀಡುತ್ತಿದ್ದರು.
Image credits: Instagram
Kannada
ಬ್ಯುಸಿನೆಸ್ ನಡೆಸಿದ ಮಗಳು
ಪವಿತ್ರಾ ಗೌಡ ಜೈಲಲ್ಲಿ ಇರೋವಾಗ ಪುತ್ರಿ ಖುಷಿ ಗೌಡ ಕೆಲವು ತಿಂಗಳು ಕಾಲ ಬ್ಯುಸಿನೆಸ್ ನಡೆಸಿಕೊಂಡು ಬಂದಿದ್ದರು ಎನ್ನುವ ಮಾಹಿತಿ ಕೂಡ ಇದೆ.
Image credits: Instagram
Kannada
ರೀ ಲಾಂಚ್ ಮಾಡಲು ತಯಾರಿ
ಇದೀಗ ಜೈಲಿನಿಂದ ಹೊರ ಬಂದ ಮೇಲೆ ತಮ್ಮ ಬ್ಯುಸಿನೆಸ್ ಮತ್ತೆ ಲಾಂಚ್ ಮಾಡುವ ಬಗ್ಗೆ ಯೋಜನೆ ರೂಪಿಸಿರುವ ಹಾಗಿದೆ. ಅದಕ್ಕಾಗಿ ಎಲ್ಲಾ ತಯಾರಿ ಕೂಡ ನಡೆಸುತ್ತಿದ್ದಾರೆ ಪವಿತ್ರಾ ಗೌಡ.
Image credits: Instagram
Kannada
ಶಿರಡಿ ಸಾಯಿ ಬಾಬಾನ ದರ್ಶನ
ಇದೀಗ ಪವಿತ್ರಾ ಗೌಡ ಶಿರಡಿಗೆ ತೆರಳಿದ್ದು, ಸಾಯಿ ಬಾಬಾನ ದರ್ಶನ ಪಡೆದು ಬಂದಿದ್ದಾರೆ. ಆ ಮೂಲಕ ಹೊಸ ಜೀವನ ಶುರು ಮಾಡುವ ಮುನ್ಸೂಚನೆ ಕೊಟ್ಟಿರುವ ಹಾಗಿದೆ.
Image credits: Instagram
Kannada
ಸೋಶಿಯಲ್ ಮೀಡಿಯಾ ವಿಡಿಯೋ
ಪವಿತ್ರಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದು, ಸಾಯಿ ಬಾಬಾ ಫೋಟೊ ಮುಂದೆ ವಿವಿಧ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ.
Image credits: Instagram
Kannada
ಬ್ಯುಸಿನೆಸ್ ಮತ್ತೆ ಶುರು
ಸಾಯಿ ಬಾಬಾ ದರ್ಶನ ಪಡೆಯುವ ಮೂಲಕ ತಮ್ಮ ಬ್ಯುಸಿನೆಸ್ ಅನ್ನು ಮತ್ತೆ ಶುರು ಮಾಡುವ ಯೋಚನೆ ಇದ್ದರೂ ಇರಬಹುದು. ಯಾವುದಕ್ಕೂ ಕಾದು ನೋಡಬೇಕು.