ಕನ್ನಡ ಕಿರುತೆರೆ ಹಾಗೂ ಹಿರಿತೆರೆಯ ಮೆಚ್ಚಿನ ನಟಿ ಅಂದ್ರೆ ಅದು ಮೇಘಾ ಶೆಟ್ಟಿ. ಮೊದಲ ಸೀರಿಯಲ್ ಮೂಲಕವೇ ಮನಗೆದ್ದ ಸುಂದರಿ ಮೇಘಾ ಶೆಟ್ಟಿ.
tv-talk Jan 18 2025
Author: Pavna Das Image Credits:Instagram
Kannada
ಅನು ಸಿರಿಮನೆ
ಮೇಘಾ ಶೆಟ್ಟಿ ಹೆಸರಿಗಿಂತ ಹೆಚ್ಚಾಗಿ ಅನು ಸಿರಿಮನೆಯಾಗಿ ಜನರಿಗೆ ಹತ್ತಿರವಾದ ನಟಿ ಇವರು. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸಿ ಜನಮನ ಗೆದ್ದಿದ್ದರು.
Image credits: Instagram
Kannada
ಸಿನಿಮಾಗೆ ಎಂಟ್ರಿ
ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್, ಡಾರ್ಲಿಂಗ್ ಕೃಷ್ಣಾ ಜೊತೆ ದಿಲ್ ಪಸಂದ್ ಹಾಗೂ ಧನ್ವೀರ್ ಗೌಡ ಜೊತೆ ಕೈವಾ ಸಿನಿಮಾಗಳಲ್ಲಿ ನಟಿಸಿದ್ದರು.
Image credits: Instagram
Kannada
ಮತ್ತಷ್ಟು ಸಿನಿಮಾಗಳಲ್ಲಿ ನಟನೆ
ಸಿನಿ ರಸಿಕರು ಸಹ ಈ ಮಂಗಳೂರು ಬೆಡಗಿಯನ್ನು ಮೆಚ್ಚಿಕೊಂಡಿದ್ದು, ಹಾಗಾಗಿ ಮತ್ತಷ್ಟು ಸಿನಿಮಾಗಳಲ್ಲಿ ಮೇಘಾ ನಟಿಸುತ್ತಿದ್ದಾರೆ. ಗ್ರಾಮಾಯಣ, ಆಫ್ಟರ್ ಆಪರೇಶನ್ ಕೆಫೆ ಹಾಗೂ ಚೀತಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
Image credits: Instagram
Kannada
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಮೇಘಾ ತಮ್ಮ ಫೋಟೊ ಶೂಟ್, ವಿಡಿಯೋ, ವರ್ಕೌಟ್, ಜಿಮ್ ವಿಡೀಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
Image credits: Instagram
Kannada
ಸೀರೆಯಲ್ಲಿ ಮೇಘಾ
ಇದೀಗ ಮೇಘಾ ಟ್ರಾನ್ಸಪರೆಂಟ್ ನೇರಳೆ ಬಣ್ಣದ ಸೀರೆಯುಟ್ಟು, ಕುರ್ಚಿ ಮೇಲೆ ಕುಳಿತು ಪೋಸ್ ಕೊಟ್ಟಿರೋ ಫೋಟೊಸ್ ಶೇರ್ ಮಾಡಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಅಭಿಮಾನಿಗಳು ನಟಿಯ ಅಂದವನ್ನು ಹೊಗಳಿದ್ದಾರೆ.
Image credits: Instagram
Kannada
ನಗುವಿನಲ್ಲಿ ಮನ ಸೆಳೆದ ಬೆಡಗಿ
ಮೇಘಾ ಸಿಂಪಲ್ ಆಗಿ ಸೀರೆಯುಟ್ಟಿದ್ದು, ಅದರ ಜೊತೆಗೆ ಓಪನ್ ಹೇರ್ ಬಿಟ್ಕೊಂಡು, ಹೂನಗುವನ್ನು ಚೆಲ್ಲಿದ್ದಾರೆ. ಇವರ ನಗುವಿಗೆ ಮನಸೋತಿರುವ ಜನ ನಿಮ್ಮ ಟ್ರೆಡಿಶನಲ್ ಲುಕ್, ಗ್ರೇಸ್ ಗೆ ಕಳೆದುಹೋಗಿದ್ದೇವೆ ಎಂದಿದ್ದಾರೆ.