ಕನ್ನಡತಿ ಸೀರಿಯಲ್ ನಲ್ಲಿ ಅಮ್ಮಮ್ಮನಾಗಿ ಗುರುತಿಸಿಕೊಂಡ ನಟಿ ಚಿತ್ಕಳಾ ಬಿರಾದಾರ್ ಕನ್ನಡದ ಜನಪ್ರಿಯ ಕಿರುತೆರೆ ನಟಿಯರಲ್ಲಿ ಒಬ್ಬರು.
tv-talk Jan 16 2025
Author: Pavna Das Image Credits:Instagram
Kannada
ಅಮೃತಧಾರೆ
ಇದೀಗ ಚಿತ್ಕಳಾ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
Image credits: Instagram
Kannada
ಗೌತಮ್ ದಿವಾನ್ ತಾಯಿ
ಅಮೃತಧಾರೆಯಲ್ಲಿ ಗೌತಮ್ ದಿವಾನ್ ತಾಯಿ ಭಾಗ್ಯ ಆಗಿ ಚಿತ್ಕಳಾ ನಟಿಸುತ್ತಿದ್ದು, ಸದ್ಯಕ್ಕೆ ಮತಿಭ್ರಮಣೆಗೊಳಗಾದ ತಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
Image credits: Instagram
Kannada
ತಂಡದ ಜೊತೆ ಚಿತ್ಕಳಾ
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚಿತ್ಕಳಾ ತಮ್ಮ ಅಮೃತಧಾರೆ ತಂಡದ ಸಹ ಕಲಾವಿದರಾದ ರಾಜೇಶ್, ವನಿತಾ ವಾಸು, ಸಿಹಿಕಹಿ ಚಂದ್ರು, ಜೊತೆಗಿನ ಫೋಟೊಗಳನ್ನು ಶೇರ್ ಮಾಡಿದ್ದು, ಸಂತಸವನ್ನು ಹಂಚಿಕೊಂಡಿದ್ದಾರೆ.
Image credits: Instagram
Kannada
ಅನುಭವಿ ಕಲಾವಿದರು
ಫೋಟೋಗಳ ಜೊತೆಗೆ ಚಿತ್ಕಳಾ ಕ್ಯಾಪ್ಶನ್ ಕೂಡ ಬರೆದಿದ್ದು, ಇವರೆಲ್ಲಾ ನನಗಿಂತ ಅನುಭವಿ ಹಾಗು ನುರಿತ ಕಲಾವಿದರು . ಇವರೊಡನೆ ನಿಂತು ಭಾಗ್ಯಾ ಆಗಿ ನಟನೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದಿದ್ದಾರೆ.
Image credits: Instagram
Kannada
ಪ್ರೀತಿ ಅಭಿಮಾನಕ್ಕೆ ಧನ್ಯವಾದ
ಈ ನಟರನ್ನು ನೋಡಿ ನಾನು ಕಲಿಯೋದು, ಅನುಸರಿಸೊದು ತುಂಬಾನೇ ಇದೆ . ಇಂತವರ ಒಡನಾಟ ಹಾಗು ನಿಮ್ಮೆಲ್ಲರ ಪ್ರೀತಿ / ಅಭಿಮಾನ ದಕ್ಕಿದ ನಾನೇ ಧನ್ಯಳು ಎಂದು ಚಿತ್ಕಳಾ ಬರೆದುಕೊಂಡಿದ್ದಾರೆ.
Image credits: Instagram
Kannada
ಪವರ್ ಹೌಸ್ ಎಂದಿದ್ದು ಯಾರಿಗೆ?
ಚಿತ್ಕಳಾ ಬಿರಾದಾರ್ ಅವರು ಛಾಯಾ ಸಿಂಗ್, ಕರಣ್ ಹಾಗೂ ಅಮೃತಾ ನಾಯ್ಕ್ ಜೊತೆಗಿನ ಫೋಟೊ ಶೇರ್ ಮಾಡಿ, ಈ ಯಂಗ್ ಉತ್ಸಾಹಿ ಪವರ್ ಹೌಸ್ ಗಳ ಜೊತೆ ಕೆಲಸ ಮಾಡುವುದು ಸಂತೋಷ ಹಾಗೂ ಆನಂದದಿಂದ ಕೂಡಿರುತ್ತೆ ಎಂದಿದ್ದಾರೆ.