ಕನ್ನಡ ಕಿರುತೆಯ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟು ತಮ್ಮ ನಟನೆಯಿಂದಲೇ ಗಮನ ಸೆಳೆದು, ಇದೀಗ ಚಂದನವನದಲ್ಲಿ ಮಿಂಚುತ್ತಿರುವ ಚೆಲುವೆ ಮೇಘಾ ಶೆಟ್ಟಿ.
ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಗುರುತಿಸಿಕೊಂಡರು. ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು.
ಸೀರಿಯಲ್ ಸೂಪರ್ ಹಿಟ್ ಆಗುತ್ತಿದ್ದಂತೆ, ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡರು ಮೇಘಾ, ಧಾರಾವಾಹಿಯಲ್ಲಿರುವಾಗಲೇ ಗೋಲ್ಡನ್ ಸ್ಟಾರ್ ಜೊತೆ ತ್ರಿಬಲ್ ರೈಡ್ ಸಿನಿಮಾದಲ್ಲಿ ಅವಕಾಶ ಪಡೆದರು.
ಟ್ರಿಪಲ್ ರೈಡಿಂಗ್, ದಿಲ್ ಪಸಂದ್, ಕೈವಾ, ಆಫ್ಟರ್ ಆಪರೇಶನ್ ಲಂಡನ್ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಇನ್ನು ಸಾಲು ಸಾಲು ಸಿನಿಮಾಗಳು ನಟಿಯ ಕೈಯಲ್ಲಿದೆ.
ಇದೀಗ ವಿನಯ್ ರಾಜಕುಮಾರ್ ಜೊತೆ ಗ್ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದು, ಇದರ ಜೊತೆ ಚೀತಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತಮಿಳು ಸಿನಿಮಾ ಒಂದರಲ್ಲೂ ನಟಿಸುತ್ತಿದ್ದಾರೆ.
ಮೇಘಾ ಶೆಟ್ಟಿ ನಟಿ ಮಾತ್ರ ಅಲ್ಲ, ಅವರು ನಿರ್ಮಾಪಕಿ ಕೂಡ ಹೌದು, ಕನ್ನಡ ಕಿರುತೆರೆಯಲ್ಲಿ ಹಲವು ಸೀರಿಯಲ್ ಗಳನ್ನು ಮೇಘಾ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.
ಮೇಘಾ ಶೆಟ್ಟಿ ಟ್ರಾವೆಲ್ ಪ್ರಿಯೆಯಾಗಿದ್ದು, ಹೆಚ್ಚಾಗಿ ವಿದೇಶ ಸುತ್ತುತ್ತಿರುತ್ತಾರೆ. ಹಾಗೂ ಸುಂದರವಾದ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಈ ಕನ್ನಡದ ಬ್ಯೂಟಿ ಸ್ವಿಟ್ಜರ್ಲ್ಯಾಂಡಲ್ಲಿ ಇದ್ದು, ಅಲ್ಲಿನ ಸುಂದರವಾದ ತಾಣಗಳನ್ನು ಎಕ್ಸ್ ಪ್ಲೋರ್ ಮಾಡುತ್ತಾ, ತಿಂಡಿಗಳನ್ನು ಸವಿಯುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಚೆಕ್ಡ್ ಶಾರ್ಟ್ ಡ್ರೆಸ್ ಜೊತೆಗೆ ನೆಟ್ಟಿಗರು ತಮ್ಮ ಮೆಚ್ಚಿನ ಅನು ಬಂಗಾರ ಬೋಲ್ಡ್ ಮತ್ತು ಬ್ಯೂಟಿಫುಲ್ ಲುಕ್ ಗೆ ಮನಸೋತಿದ್ದಾರೆ.
ಕನ್ನಡದ ಹುಡುಗಿ ತೆಲುಗಿನಲ್ಲಿ ಸಖತ್ ಫೇಮಸ್, ಯಾರು ಈ ಸುಂದರಿ
Chandana Ananthakrishna: ಚಿನ್ನುಮರಿಯ ಅಂದಕ್ಕೆ ಜಯಂತ್ ಮಾತ್ರ ಅಲ್ಲ… ಫ್ಯಾನ್ಸ್ ಕೂಡ ಫಿದಾ
Miss You Paa..ಅಪ್ಪನಿಲ್ಲದೆ 5 ವರ್ಷ… ಹಳೆ ನೆನಪುಗಳನ್ನು ಮೆಲುಕು ಹಾಕಿದ ಕಾರ್ತಿಕ್ ಮಹೇಶ್
ಗ್ರೀಸ್ ನಲ್ಲಿ ಅಕ್ಕನ ಜೊತೆ ಕಾವ್ಯಾ ಗೌಡ… ಧರಿಸಿದ ಬಟ್ಟೆ, ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ