ಕನ್ನಡದ ಪ್ರತಿಭಾನ್ವಿತ ನಟಿ ಚೈತ್ರಾ ಆಚಾರ್ ಸದ್ಯ ತಮಿಳು ಸಿನಿಮಾದಲ್ಲೂ ಮಿಂಚುತ್ತಿದ್ದಾರೆ.
ತಮಿಳಿನಲ್ಲಿ ಶರತ್ ಕುಮಾರ್, ಸಿದ್ಧಾರ್ಥ್, ದೇವಯಾನಿ ಜೊತೆ 3BHK ಸಿನಿಮಾದಲ್ಲಿ ಚೈತ್ರಾ ಆಚಾರ್ ನಟಿಸಿದ್ದರು.
3BHK…ಸಿನಿಮಾ ಇದೀಗ ಎಲ್ಲೆಡೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಜನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಈ ಸಿನಿಮಾವು ಮಧ್ಯಮ ವರ್ಗದ ಕುಟುಂಬವೊಂದು ತಮ್ಮದೇ ಆದ ಮನೆ ನಿರ್ಮಾಣ ಮಾಡುವ ಕನಸನ್ನು ಹೊತ್ತುಕೊಂಡಿರುವ ಕಥೆಯಾಗಿದೆ.
ಈ ಸಿನಿಮಾದಲ್ಲಿ ಚೈತ್ರಾ ಆಚಾರ್ ಸಿದ್ಧಾರ್ಥ್ ಗೆ ನಾಯಕಿಯಾಗಿ ನಟಿಸಿದ್ದಾರೆ.
ಇದೀಗ 3BHK…ಚಿತ್ರತಂಡ ಯಶಸ್ಸಿನ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.
ಚೈತ್ರಾ ಪಾರ್ಟಿಯ ಸುಂದರ ಫೋಟೊಗಳನ್ನು ಶೇರ್ ಮಾಡಿ ಎ ನೈಟ್ ಟು ರಿಮೆಂಬರ್, ಹೋಮ್ ಅವೇ ಫ್ರಮ್ ಹೋಮ್ ಎಂದು ಬರೆದುಕೊಂಡಿದ್ದಾರೆ.
3BHK…ಚಿತ್ರತಂಡ ತಮ್ಮ ಸಂಭ್ರಮವನ್ನು ಕೇಕ್ ಕತ್ತರಿಸಿ ಮತ್ತಷ್ಟು ಹೆಚ್ಚಿಸಿದ್ದಾರೆ.
ಚೈತ್ರಾ ಪಾರ್ಟಿಗೆ ತಕ್ಕಂತೆ ಕಪ್ಪು ಡ್ರೆಸ್ ಧರಿಸಿ, ಎಲ್ಲಾ ತಾರೆಯರ ಜೊತೆ ಸೆಲ್ಫಿ ಕ್ಲಿಕ್ ಮಾಡಿ ಎಂಜಾಯ್ ಮಾಡಿದ್ದಾರೆ.
ನಟಿ ಚೈತ್ರಾ ಆಚಾರ್ ಕನ್ನಡ ಸಿನಿಮಾದಲ್ಲೂ ಬ್ಯುಸಿಯಾಗಿದ್ದು, ಉತ್ತರಕಾಂಡ, ಮಾರ್ನಮಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
'ತಾರಕ್ ಮೆಹ್ತಾ' ದಿಂದ ಜೇಠಾಲಾಲ್ ಕಾಣೆ!
'ಅಣ್ಣಯ್ಯ' ಧಾರಾವಾಹಿ ಪಿಂಕಿ ಪಾತ್ರಧಾರಿ ಸಹನಾ ಶೆಟ್ಟಿ ರಿಯಲ್ ಗಂಡ ಯಾರು?
ರೀಲ್ ಅಲ್ಲ… ರಿಯಲ್ ಹೆಂಡ್ತಿ ಜೊತೆ ರೊಮ್ಯಾಂಟಿಕ್ ಮೂಡಲ್ಲಿ ಆಸೆ ಸೀರಿಯಲ್ ಸೂರ್ಯ
ಕರ್ಣನ ಬ್ಯೂಟಿ ನಿಧಿ ಸಲ್ವಾರ್ ಮಾತ್ರವಲ್ಲ ಸೀರೆಯಲ್ಲೂ ಕ್ಯೂಟಿ