ಎಲ್ಲೆಡೆ ಮೇಘಾ ಶೆಟ್ಟಿ ಸದ್ದು ಮಾಡುತ್ತಿದ್ದಾರೆ. ತಮ್ಮ ನೋಟ, ಅದ್ಭುತ ಡ್ಯಾನ್ಸ್ ಮೂಲಕ ಇಂಟರ್ನೆಟ್ ಗೆ ಬೆಂಕಿ ಹಚ್ಚಿದ್ದಾರೆ ಚಂದನವನದ ಬೆಡಗಿ.
ಮೇಘಾ ಶೆಟ್ಟಿ ಮತ್ತು ನಟ ವಿನಯ್ ರಾಜಕುಮಾರ್ ‘ಗ್ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಲಿರಿಕಲ್ ಹಾಡು ಬಿಡುಗಡೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.
ಶಿವರಾಜಕುಮಾರ್ ಅವರ ಹಳೆ ಸಿನಿಮಾದ ನನ್ನಾಣೆ ನಾನು ಬೆಂಕಿಯಲ್ಲಿ ತಂಪು ಕಂಡೆನು ಹಾಡು ಇದೀಗ ಹೊಸ ಟಚ್ ಪಡೆದುಕೊಂಡು ಡ್ಯಾನ್ಸ್ ನಂಬರ್ ಆಗಿ ಮೂಡಿ ಬಂದಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬೆಂಕಿ ಹಾಡು ಸಿಕ್ಕಾಪಟ್ಟೆ ಕಿಡಿ ಹಚ್ಚಿದೆ. ಪಡ್ಡೆಗಳಂತೂ ಹಾಡಿಗೆ ಹುಚ್ಚೆದ್ದು ಕುಣಿಯುತ್ತಿದ್ದಾರೆ.
ಮೇಘಾ ಶೆಟ್ಟಿ ಮತ್ತು ವಿನಯ್ ಜಬರ್ ದಸ್ತ್ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸೋಶಿಯಲ್ ಮೀಡೀಯಾ ತುಂಬೆಲ್ಲಾ ಈ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಇದೀಗ ಮೇಘಾ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಕಪ್ಪು ಬಣ್ಣದ ಸಲ್ವಾರ್ ಕಮೀಜ್ ಧರಿಸಿರುವ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಕಪ್ಪು ಸಲ್ವಾರ್ ಜೊತೆ ಗೋಲ್ಡ್ ಬಣ್ಣದ ಕಿವಿಯೋಲೆ, ಮತ್ತೊಂದು ದೊಡ್ಡ ಮೂಗುತ್ತಿ ಧರಿಸಿರುವ ಮೇಘಾ ಶೆಟ್ಟಿ ಸಖತ್ ಸುಂದ್ರಿಯಾಗಿ ಕಾಣಿಸುತ್ತಿದ್ದಾರೆ.
ಮಾವನ ಮಗಳ ಈ ಮುದ್ದಾದ ಲುಕ್ ಗೆ ಪಡ್ಡೆ ಹೈಕ್ಳು ಮನಸೋತಿದ್ದು, ಕೆಂಪು ಹೃದಯಗಳಿಂದ ತುಂಬಿ ಹೋಗಿವೆ.
ಟ್ರಿಪಲ್ ರೈಡಿಂಗ್, ದಿಲ್ ಪಸಂದ್, ಕೈವಾ, ಆಫ್ಟರ್ ಆಪರೇಶನ್ ಲಂಡನ್ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ.
ಇದೀಗ ವಿನಯ್ ರಾಜಕುಮಾರ್ ಜೊತೆ ಗ್ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದು, ಇದರ ಜೊತೆ ಚೀತಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತಮಿಳು ಸಿನಿಮಾ ಒಂದರಲ್ಲೂ ನಟಿಸುತ್ತಿದ್ದಾರೆ.
ಕನ್ನಡದ ಪ್ರಸಿದ್ಧ ಈ ನಟಿಯನ್ನ ಗುರುತಿಸಬಲ್ಲಿರಾ?
ನನ್ನ Kindness ಅನ್ನು, Weakness ಅಂದ್ಕೋಬೇಡಿ...ಜಾನ್ವಿ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?
BBK 12: ಬಿಗ್‌ಬಾಸ್ ಫಿನಾಲೆಯಿಂದ ದೂರ ಉಳಿದ ಐವರು ಸ್ಪರ್ಧಿಗಳು; ಯಾಕೆ?
ಮದುವೆ ಬಳಿಕ ಮೊದಲ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಅನುಶ್ರೀ