ಕನ್ನಡದ ನ್ಯೂಸ್ ಆಂಕರ್ ಆಗಿ ಜನಪ್ರಿಯತೆ ಪಡೆದು, ಕನ್ನಡ ಕಿರುತೆರೆಯ ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿ, ಬಿಗ್ ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿ ಮಿಂಚಿದರು.
ಬಿಗ್ ಬಾಸ್ ಸೀಸನ್ 12ರಲ್ಲಿ ತಮ್ಮ ಮಾತು, ಚಾಲೆಂಜ್ ಮೂಲಕ ತಿಂಗಳುಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ನಂತರ ಹೊರ ಬಂದಿದ್ದರು.
ಜಾಹ್ನವಿಯವರು ತಮ್ಮ ಕರಿಯರ್ ಆರಂಭಿಸಿದ್ದು ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿ. ನಂತರ ಕಿರುತೆರೆಗೆ ಎಂಟ್ರಿ ಕೊಟ್ಟರು.
ಇದೀಗ ಒಂದೆರಡು ಸಿನಿಮಾಗಳಲ್ಲಿ ಜಾಹ್ನವಿ ನಟಿಯಾಗಿ ಮಿಂಚಿದ್ದಾರೆ. ಲೇಡೀಸ್ ಫಸ್ಟ್, ಅಧಿಪತ್ರ, ಪರಾರಿ ಸಿನಿಮಾದಲ್ಲೂ ನಟಿಸಿದ್ದಾರೆ.
ಬಿಗ್ ಬಾಸ್ ಗೆ ಹೋಗಿ ಬಂದ ಮೇಲೆ ಜಾಹ್ನವಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಹೊಸ ಹೊಸ ಫೋಟೋ ರೀಲ್ಸ್ ಶೇರ್ ಮಾಡುತ್ತಿರುತ್ತಾರೆ.
ಇತ್ತೀಚಿನ ದಿನಗಳಲ್ಲಿ ಡ್ಯಾನ್ಸ್ ಕಲಿಯುತ್ತಿರುವಂತಿದೆ, ಹಾಗಾಗಿ ಹೆಚ್ಚಾಗಿ ಬೇರೆ ಬೇರೆ ಹಾಡುಗಳಿಗೆ ಡ್ಯಾನ್ಸ್ ಮಾಡಿ ರೀಲ್ಸ್ ಶೇರ್ ಮಾಡುತ್ತಿರುತ್ತಾರೆ.
ಇದೀ ಬ್ಲೂ ಡೆನಿಮ್ ಮತ್ತು ಬಿಳಿ ಬಣ್ಣದ ಶರ್ಟ್ ಧರಿಸಿ ಫೋಟೊಗಳನ್ನು ಶೇರ್ ಮಾಡಿದ್ದು, ಅದರ ಜೊತೆಗೆ ಬರೆದಿರುವ ಕ್ಯಾಪ್ಶನ್ ಭಾರಿ ಸದ್ದು ಮಾಡುತ್ತಿದೆ.
Don’t mistake my kindness for weakness ಎಂದು ಕ್ಯಾಪ್ಶನ್ ಹಾಕಿದ್ದಾರೆ. ಆ ಮೂಲಕ ಯಾರಿಗೋ ವಾರ್ನ್ ಮಾಡಿದಂತಿದೆ.
ಬೋಲ್ಡ್ ಲುಕ್ ನಲ್ಲಿ ಪೋಸ್ ಕೊಟ್ಟು ಯಾಕೆ, ಈ ರೀತಿ ಕ್ಯಾಪ್ಶನ್ ಹಾಕಿದ್ರು ಗೊತ್ತಿಲ್ಲ. ಆದರೆ ಜಾಹ್ನವಿ ಲುಕ್ ಮಾತ್ರ ಜನ ಮೆಚ್ಚಿಕೊಂಡಿದ್ದಾರೆ.
BBK 12: ಬಿಗ್‌ಬಾಸ್ ಫಿನಾಲೆಯಿಂದ ದೂರ ಉಳಿದ ಐವರು ಸ್ಪರ್ಧಿಗಳು; ಯಾಕೆ?
ಮದುವೆ ಬಳಿಕ ಮೊದಲ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಅನುಶ್ರೀ
90's Kids ಶಾಲಾ ದಿನಗಳಲ್ಲಿ ನೋಡ್ತಿದ್ದ ಧಾರಾವಾಹಿಗಳಿವು... ನಿಮ್ ಫೇವರಿಟ್ ಯಾವ್ದು?
ಗಿಲ್ಲಿ ನಟನನ್ನು ಕೈಬಿಟ್ಟು ಗೋಲ್ಡ್ ಬೆನ್ನುಬಿದ್ದ ಬಿಗ್ ಬಾಸ್ ಡಾಗ್ ಸತೀಶ್!