Small Screen

ಜೊತೆ ಜೊತೆಯಲಿ ಸೀರಿಯಲ್ ನ ಮೀರಾ ಹೆಗ್ಡೆ

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ ಜೊತೆಜೊತೆಯಲಿ ನೋಡಿರೋರಿಗೆ ಮೀರಾ ಹೆಗ್ಡೆ ಪಾತ್ರದಲ್ಲಿ ಮಿಂಚುತ್ತಿರುವ ಮಾನಸ ಮನೋಹರ್ ಯಾರು ಅಂತ ಹೇಳಬೇಕಾಗಿಲ್ಲ. 

ಮಾಡೆಲ್ ಮಾನಸ ಮನೋಹರ್

ಮಾಡೆಲ್ ಆಗಿ ಕರಿಯರ್ ಆರಂಭಿಸಿದ ಮಾನಸ ಮನೋಹರ್ ಸದ್ಯ ನಿರೂಪಕಿ, ನಟಿಯಾಗಿ ಕಿರುತೆರೆಯಲ್ಲಿ ಸ್ಟೈಲಿಶ್ ಪಿಎ ಆಗಿ ಮಿಂಚುತ್ತಿದ್ದಾರೆ ಇವರು. 

ಸಹೋದರ ಮದುವೆ ಸಂಭ್ರಮ

ಇದೀಗ ಮಾನಸ ತಮ್ಮ ಸಹೋದರನ ಮದುವೆ ಸಮಾರಂಭದಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಮದುವೆ ವಿವಿಧ ಕಾರ್ಯಕ್ರಮದ ಫೋಟೋ ಶೇರ್ ಮಾಡುತ್ತಿದ್ದಾರೆ. 

ಮದುವೆ ಶಾಸ್ತ್ರದಲ್ಲಿ ಬ್ಯುಸಿ

ಅಣ್ಣನ ಮದುವೆಯ ಚಪ್ಪರ ಶಾಸ್ತ್ರ, ಅರಿಶಿನ ಶಾಸ್ತ್ರ, ಮೆಹೆಂದಿ, ಬಳೆ ಶಾಸ್ತ್ರ, ಮದುವೆ, ಸಂಗೀತ ಕಾರ್ಯಕ್ರಮ ಹೀಗೆ ಹಲವಾರು ಶಾಸ್ತ್ರಗಳನ್ನು ಸಂಪ್ರದಾಯಬದ್ಧವಾಗಿ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. 

ಸಾಂಪ್ರದಾಯಿಕ ಉಡುಗೆಯಲ್ಲಿ ಮಾನಸ

ಅರಿಶಿನ ಶಾಸ್ತ್ರಕ್ಕೆ ಮೆರೂನ್ ಸಲ್ವಾರ್, ಬಳೆ ಶಾಸ್ತ್ರಕ್ಕೆ ನೀಲಿ ಬಣ್ಣದ ಡ್ರೆಸ್, ಸಂಗೀತ ಕಾರ್ಯಕ್ರಮಕ್ಕೆ ನಸು ಗುಲಾಲಿ ಬಣ್ಣದ ಲೆಹೆಂಗಾ ಧರಿಸಿದ್ದು, ಮದುವೆ ದಿನ ಕ್ರೀಂ ಕಲರ್ ಸೀರೆಗೆ ಬ್ರೌನ್ ಬ್ಲೌಸ್ ಧರಿಸಿದ್ದಾರೆ. 

ವಧುವಿನ ಸಿಂಗಾರದಲ್ಲಿ ನಟಿ

ಮದುವೆ ಸಮಾರಂಭಕ್ಕೆ ಅಪ್ಪಟ ಕನ್ನಡತಿಯಂತೆ ಸೀರೆಯುಟ್ಟಿರುವ ಮಾನಸ ಮನೋಹರ್, ಪಂಚೆ, ಶರ್ಟ್ ನಲ್ಲಿ ಮಿಂಚುತ್ತಿರುವ ಪತಿ ಜೊತೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

ಸೀರಿಯಲ್ ನಲ್ಲಿ ಬ್ಯುಸಿ

ಸದ್ಯ ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ಬ್ಯುಸಿಯಾಗಿರುವ ಮಾನಸ 2014ನೇ ಸಾಲಿನ ಮಿಸ್ ಕರ್ನಾಟಕ ವಿನ್ನರ್ ಆಗಿದ್ದು, ಜೊತೆಗೆ ಮೋಸ್ಟ್ ಡಿಸೈರಬಲ್ ವುಮೆನ್-ಬೆಂಗಳೂರು ಎಂಬ ಅವಾರ್ಡ್ ಕೂಡ ಪಡೆದಿದ್ದಾರೆ. .

ಗೃಹಪ್ರವೇಶದಂದು ಸಭ್ಯಸಾಚಿ ಸೀರೆಯಲ್ಲಿ ವಧುವಿನಂತೆ ಮಿಂಚಿದ ಕಾವ್ಯ ಗೌಡ

ಕಿರುತೆರೆಯಲ್ಲಿ ಮಿಂಚುತ್ತಿರುವ ಇವರು ಪ್ರೊಫೆಶನಲ್ ಡ್ಯಾನ್ಸರ್ ಕೂಡ ಹೌದು..

ನೀವು ಅಂದ್ಕೊಂಡ ಹಾಗಿಲ್ಲ ಪುಟ್ಟಕ್ಕನ ಹಿರಿ ಮಗಳು; ಸಖತ್ ಸ್ಟೈಲಿಶ್ ಸಹನಾ