Small Screen

ಕಾವ್ಯಾ ಗೌಡ ಲುಕ್

ರಾಧಾ ರಮಣ, ಶುಭ ವಿವಾಹ, ಗಾಂಧಾರಿ ಸೀರಿಯಲ್ ನಲ್ಲಿ ನಟಿಸಿದ್ದ ನಟಿ ಕಾವ್ಯ ಗೌಡ, ಸದ್ಯ ಸೀರಿಯಲ್ ನಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. 

ಗೃಹಪ್ರವೇಶ ಸಂಭ್ರಮದಲ್ಲಿ

ಎರಡು ದಿನಗಳಿಂದ ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೆಂಪು ಬಣ್ಣದ ಸಭ್ಯಸಾಚಿ ಬ್ರೈಡಲ್ ಸೀರೆಯನ್ನು ಧರಿಸಿರುವ ಫೋಟೋ ಶೇರ್ ಮಾಡುತ್ತಿದ್ದು, ಈ ಸೀರೆ ನಟಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. 
 

ಸಭ್ಯಸಾಚಿ ಸೀರೆಯಲ್ಲಿ

ಉದ್ಯಮಿ ಸೋಮಶೇಖರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕಾವ್ಯಾ, ಇದೀಗ ತಮ್ಮ ಹೊಸ ಮನೆ ಗೃಹಪ್ರವೇಶ ನೆರವೇರಿಸಿದ್ದು, ಈ ಸಂಭ್ರಮಕ್ಕಾಗಿ ನಟಿ ಸಭ್ಯಸಾಚಿ ಸೀರೆಯುಟ್ಟಿದ್ದರು. 

ಸಾಂಪ್ರದಾಯಿಕ ಲುಕ್ ನಲ್ಲಿ ಕಾವ್ಯ

ನಟಿ ಸಾಂಪ್ರದಾಯಿಕ ಮತ್ತು ಶಾಸ್ತ್ರಬದ್ಧವಾಗಿ ಗುರುಹಿರಿಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಗೃಹಪ್ರವೇಶ ಮಾಡಿಕೊಂಡಿದ್ದು, ಮನೆಯನ್ನು ಸಂಪೂರ್ಣವಾಗಿ ಮರದಿಂದ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. 

ಶುಭ ವಿವಾಹ ನಟಿ

ಕೆಂಪು ಸೀರೆ ಜೊತೆಗೆ ಟೆಂಪಲ್ ಆಭರಣ ತೊಟ್ಟು ಮದುಮಗಳಂತೆ ಸಿಂಗಾರಗೊಂಡ ನಟಿಯ ಫೋಟೋಗಳನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಅಲ್ಲದೇ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಪ್ರತಿಕ್ರಿಯಿಸುತ್ತಿದ್ದಾರೆ.

ಕಾವ್ಯಾ ಗೌಡ ಕೆಂಪು ಸೀರೆ ಫೋಟೋ ವೈರಲ್

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ನನ್ನ ಸೀರೆಯ ಬಣ್ಣವು, ನಿಮ್ಮ ಹೃದಯದ ಬಣ್ಣಕ್ಕೆ ಮ್ಯಾಚ್ ಆಗುತ್ತೆ ಎಂದು ಬರೆದುಕೊಂಡಿದ್ದರು. ಈ ಫೋಟೋಗಳಿಗೆ ಇಲ್ಲಿವರೆಗೂ ಸುಮಾರು ಒಂದೂವರೆ ಲಕ್ಷ ಜನ ರಿಯಾಕ್ಟ್ ಮಾಡಿದ್ದಾರೆ. 

ಸಭ್ಯಸಾಚಿ ಉಡುಗೆಯಲ್ಲಿ ಕಾವ್ಯ

ಜನಪ್ರಿಯ ಫ್ಯಾಷನ್ ಬ್ರ್ಯಾಂಡ್ ಸಭ್ಯಸಾಚಿ ಉಡುಗೆ ಧರಿಸಿರುವ ಕಾವ್ಯಾ ಗೌಡಗೆ, ಮೇಕ್ ಓವರ್ ವಿತ್ ಲಕ್ಷ್ಮೀ ಶೆಟ್ಟಿ ಮೇಕಪ್ ಮಾಡಿದ್ದಾರೆ, ಇವರ ಸ್ಟೈಲ್ ನ್ನು ಸಹೋದರಿ ಫ್ಯಾಷನ್ ಡಿಸೈನರ್ ಆಗಿರುವ ಭವ್ಯ ಗೌಡ ಮಾಡಿದ್ದಾರೆ. 

ಮತ್ತೆ ಕಿರುತೆರೆಗೆ ಬರ್ತಾರಾ ಕಾವ್ಯ

ಪ್ಯಾಟೆ ಮಂಡಿ ಕಾಡಿಗೆ ಬಂದ್ರು ಮೂಲಕ ಕಿರುತೆರೆಗೆ ಪ್ರವೇಶಿಸಿದ ಕಾವ್ಯಾ ಇಲ್ಲಿವರೆಗೆ ಹಲವು ಸೀರಿಯಲ್ ಮತ್ತು ಸಿನಿಮಾದಲ್ಲೂ ಮಿಂಚಿದ್ದರು. ಅಭಿಮಾನಿಗಳಂತೂ ನಟಿ ಮತ್ತೆ ತೆರೆ ಮೇಲೆ ಬರಲು ಕಾಯ್ತಿದ್ದಾರೆ. 

ಕಿರುತೆರೆಯಲ್ಲಿ ಮಿಂಚುತ್ತಿರುವ ಇವರು ಪ್ರೊಫೆಶನಲ್ ಡ್ಯಾನ್ಸರ್ ಕೂಡ ಹೌದು..

ನೀವು ಅಂದ್ಕೊಂಡ ಹಾಗಿಲ್ಲ ಪುಟ್ಟಕ್ಕನ ಹಿರಿ ಮಗಳು; ಸಖತ್ ಸ್ಟೈಲಿಶ್ ಸಹನಾ