ಕನ್ನಡತಿ ಸೀರಿಯಲ್ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದ ನಟಿ ರಂಜನಿ ರಾಘವನ್ ಇದೀಗ ಉಜ್ಜಯಿನಿಯಲ್ಲಿ ಮಹಾಕಾಲೇಶ್ವರ ದರ್ಶನ ಮಾಡುತ್ತಿದ್ದಾರೆ. ಈ ಕುರಿತಂತೆ ಫೋಟೋ, ವೀಡಿಯೋಗಳನ್ನು ಶೇರ್ ಮಾಡಿದ್ದಾರೆ.
Image credits: social media
ಉಜ್ಜಯಿನಿಯಲ್ಲಿ ರಂಜನಿ
ಈ ಕುರಿತು ಫೋಟೋ ಶೇರ್ ಮಾಡಿದ ರಂಜನಿ ಪುರಾಣ ಪ್ರಸಿದ್ಧ ಉಜ್ಜಯಿನಿಯ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದರ್ಶನ ಮಾಡಿ, ಶಿಪ್ರಾ ನದಿಯ ಆರತಿಯಲ್ಲಿ ಭಾಗಿಯಾಗಿ ಮನಸ್ಸು ಫುಲ್ ಖುಷ್ ಆಗಿದೆ ಎಂದು ಬರೆದು ಕೊಂಡಿದ್ದಾರೆ.
Image credits: social media
ಮೇಘಧೂತ ಕಾವ್ಯ
ಅಲ್ಲದೇ ಕಾಳಿದಾಸನ “ಮೇಘದೂತ” ಕಾವ್ಯದಲ್ಲಿ ಬರೋ ಉಜ್ಜಯಿನಿಯ ವರ್ಣನೆಯನ್ನ ಬೇರೆ ಲೈಟ್ ಆಗಿ ಓದ್ಕೊಂಡು ಹೋದಿದ್ದೆ, ಹಾಗಾಗಿ ಇನ್ನೂ ಥ್ರಿಲ್ ಆಗೋಯ್ತು!
Image credits: social media
ಮಹಾಕಾಲೇಶ್ವರ ದರ್ಶನ
ಮಹಾಕಾಲೇಶ್ವರ ದರ್ಶನ ಮಾಡಿ, ನದಿಯಲ್ಲಿ ಆರತಿ ಬೆಳಗುವ ಮೂಲಕ ದೈವಿಕ ಅನುಭವ ಪಡೆದಿದ್ದಾರೆ.
Image credits: social media
ಥ್ಯಾಂಕ್ಸ್ ಎಂದ ಫ್ಯಾನ್ಸ್
ರಂಜನಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಸಾವಿರಾರು ಜನ ಲೈಕ್ ಮಾಡಿದ್ದು, ನಿಮ್ಮ ಜೊತೆಗೆ ನಮಗೂ ಉಜ್ಜಯಿನಿ ದರ್ಶನ ಮಾಡಿಸಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.
Image credits: social media
ಬಹುಮುಖ ಪ್ರತಿಭೆ
ಇನ್ನು ರಂಜನಿ ರಾಘವನ್ ನಟಿ ಜೊತೆಗೆ ಗಾಯಕಿಯೂ ಆಗಿದ್ದು, ಜೊತೆಗೆ ಸಾಹಿತ್ಯದ ಕಡೆಗೂ ಒಲವು ತೋರಿಸಿದ್ದು, ಈಗಾಗಲೇ ಎರಡು ಪುಸ್ತಕಗಳನ್ನು ಬರೆದಿದ್ದಾರೆ.
Image credits: social media
ಮತ್ತೆ ಸೀರಿಯಲ್‌ಗೆ?
ಸದ್ಯ ತಮ್ಮ ಬರವಣಿಗೆ ಮತ್ತು ನಟನೆಯಿಂದ ದೂರ ಉಳಿದಿರುವ ರಂಜನಿಯವರನ್ನು ಅಭಿಮಾನಿಗಳು ಮತ್ತೆ ಬೇಗ ಸೀರಿಯಲ್‌ಗಳಲ್ಲಿ ಕಾಣಿಸುವಂತೆ, ಜೊತೆಗೆ ಮತ್ತೆ ಪುಸ್ತಕ ಬರೆಯುವಂತೆ ಕೇಳಿಕೊಂಡಿದ್ದಾರೆ.