ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ. ಅವರ ಮಾತು, ನಗು ಎಲ್ಲವನ್ನೂ ಜನ ಇಷ್ಟ ಪಡ್ತಾರೆ. ಅನುಶ್ರೀ ಇರೋ ಕಾರ್ಯಕ್ರಮದಲ್ಲಿ ನಗು, ಜೋಶ್, ತಮಾಷೆಗೆ ಬರ ಇರಲ್ಲ. ಹಾಗಾಗಿಯೇ ಅನುಶ್ರೀ ಏನು ಮಾಡಿದ್ರೂ ಸುದ್ದಿಯಾಗುತ್ತೆ,
tv-talk Mar 14 2025
Author: Pavna Das Image Credits:Instagram
Kannada
ಲಂಡನ್ ನಲ್ಲಿ ಅನುಶ್ರೀ
ಅನುಶ್ರೀ ತಮ್ಮ ಕೆಲಸದಿಂದ ಬ್ರೇಕ್ ತೆಗೆದುಕೊಂಡು ಲಂಡನ್ ಗೆ ತೆರಳಿದ್ದಾರೆ. ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡ್ತಿದ್ದಾರೆ. ಗಾಯಕಿ ಐಶ್ವರ್ಯ ರಂಗರಾಜನ್ ಜೊತೆ ಡ್ಯಾನ್ಸ್ ರೀಲ್ಸ್ ಕೂಡ ಮಾಡಿದ್ದರು.
Image credits: Instagram
Kannada
ಸುಂದರ ಫೋಟೊಗಳಲ್ಲಿ ಮಿಂಚಿಂಗ್
ಇದೀಗ ಅನುಶ್ರೀ ಲಂಡನ್ ನಲ್ಲಿ ಕ್ಲಿಕ್ ಮಾಡಿರುವ ಸುಂದರ ಫೋಟೊಗಳನ್ನು ಶೇರ್ ಮಾಡಿದ್ದು, ಅದರ ಜೊತೆಗೆ ಸುಂದರ ತಾಣ, ಅಲ್ಲೊಂದು ಸುಂದರ ಕ್ಷಣ !!!! London is Lovely ಎಂದು ಬರೆದುಕೊಂಡಿದ್ದಾರೆ.
Image credits: Instagram
Kannada
ರಾಜ್ ಬಿ ಶೆಟ್ಟಿ ಕಾಮೆಂಟ್
ಅನುಶ್ರೀ ಫೋಟೊಗಳಿಗೆ ಸಿಕ್ಕಾಪಟ್ಟೆ ಲೈಕ್ಸ್, ಕಾಮೆಂಟ್ಸ್ ಬಂದಿದ್ದು, ನಟ ರಾಜ್ ಬಿ ಶೆಟ್ಟಿ ಕೂಡ ಓ ಕುಸುಮಕ್ಕಾ ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಅನುಶ್ರೀ ನಗುವನ್ನು ಹಾಡಿ ಹೊಗಳಿದ್ದಾರೆ.
Image credits: Instagram
Kannada
ಅನುಶ್ರೀ ನಗುವಿನಲ್ಲಿ ಅಪ್ಪು
ಸುಂದರ ತಾಣ, ಅಲ್ಲೊಂದು ಸುಂದರ ಕ್ಷಣ, ನಿಮ್ಮ ಆ ಸುಂದರ ನಗು ನಮ್ಮಂತ fans ಗೆ ಹೂವಿನ ಬಾಣ, ಲಂಡನ್ ಕ್ವೀನ್, ನಿಮ್ಮ ನಗುವಿನಲ್ಲಿ ಅಪ್ಪು ಸರ್ ಕಾಣಿಸ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
Image credits: Instagram
Kannada
ಮದುವೆಯಾಗಬೇಡಿ ಎಂದ ಅಭಿಮಾನಿ
ಅನುಶ್ರೀ ಮದುವೆಯಾಗೋದು ಯಾವಾಗ ಎಂದು ಕೇಳುವವರ ನಡುವೆ ಇಲ್ಲೊಬ್ಬರು ಫ್ಯಾನ್ ಮೇಡಂ ನೀವು ಮದುವೆ ಆಗ್ಬೇಡಿ, ಹೀಗೆ ಆರಾಮಾಗಿ ಇದ್ದು ಬಿಡಿ, ಮದುವೆ ಆದ್ರೆ ಕಮೀಟ್ ಮೆಂಟ್ ಜಾಸ್ತಿ ಎಂದಿದ್ದಾರೆ.
Image credits: Instagram
Kannada
ಮದುವೆ ಬಗ್ಗೆ ಅನೌನ್ಸ್ ಮಾಡ್ತಾರ?
ಅಂದ ಹಾಗೇ ಅಪ್ಪು ಫ್ಯಾನ್ ಆಗಿರುವ ಅನುಶ್ರೀ, ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನವೇ ತಮ್ಮ ಮದುವೆ ಬಗ್ಗೆ ಹಾಗೂ ಮದುವೆಯಾಗಲಿರುವ ಹುಡುಗನ ಬಗ್ಗೆ ತಿಳಿಸುವರೇ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.