ಗಟ್ಟಿ ಮೇಳ ಸೀರಿಯಲ್ ನಲ್ಲಿ ವಿಕ್ರಾಂತ್ ವಷಿಷ್ಠ ಪಾತ್ರದಲ್ಲಿ ಮಿಂಚಿದ ನಟ ಅಭಿಷೇಕ್ ರಾಮ್ ದಾಸ್ ಸದ್ಯ ತಮ್ಮ ಬೆಂಗಳೂರು ಬಾಯ್ಸ್ ಸಿನಿಮಾ ಬಿಡುಗಡೆ ಸಂಭ್ರಮದಲ್ಲಿದ್ದಾರೆ.
tv-talk Jul 07 2023
Author: Suvarna News Image Credits:Instagram
Kannada
ಫ್ರೆಂಡ್ ಶಿಪ್ ಸ್ಟೋರಿ
ಬಹುತಾರಾಗಣದ ಈ ಚಿತ್ರವು ಫ್ರೆಂಡ್ ಶಿಪ್ ಬಗ್ಗೆ ಇರೋ ಕತೆಯನ್ನು ಹೊಂದಿದೆ. ಮನರಂಜನಾತ್ಮಕವಾಗಿರೋ ಈ ಚಿತ್ರ ಸದ್ಯ ಸದ್ದು ಮಾಡುತ್ತಿದೆ.
Image credits: Instagram
Kannada
ಗಟ್ಟಿಮೇಳ ತಂಡ
ಅಭಿ ಚಿತ್ರ ನೋಡಲು ಗಟ್ಟಿ ಮೇಳ ತಂಡ ಸಾಥ್ ನೀಡಿದ್ದು, ರಕ್ಷಿತ್ ಮತ್ತು ಪತ್ನಿ ಅನುಷಾ, ಸುಧಾ ನರಸಿಂಹರಾಜು, ಅಶ್ವಿನಿ, ಶರಣ್ಯ, ರಂಜನ್ ಸನತ್, ಗಿರೀಶ್ ಬೆಟ್ಟಪ್ಪ ಭಾಗಿಯಾಗಿದ್ದರು.
Image credits: Instagram
Kannada
ಕಿರುತೆರೆ ಫ್ರೆಂಡ್ಸ್ ಸಾಥ್
ಇನ್ನು ಕಿರುತೆರೆಯ ಇತರ ಫ್ರೆಂಡ್ಸ್ ಕೂಡ ಸಾಥ್ ನೀಡಿದ್ದು, ಪಾರು ಸೀರಿಯಲ್ ನ ಶರತ್ ಪದ್ಮನಾಭನ್, ನಾಗಿಣಿ ಸೀರಿಯಲ್ ನ ದೀಕ್ಷಿತ್ ಶೆಟ್ಟಿ ಕೂಡ ಜೊತೆಯಾಗಿದ್ದರು.
Image credits: Instagram
Kannada
ಅಶ್ವಿನಿ ಜೊತೆ ಅಭಿ
ಗಟ್ಟಿಮೇಳ ಸೀರಿಯಲ್ ನಲ್ಲಿ ವಿಕ್ರಾಂತ್ ನ ಪತ್ನಿ ಆರತಿ ಪಾತ್ರದಲ್ಲಿ ಮೊದಲು ಕಾಣಿಸಿಕೊಂಡಿದ್ದ ಅಶ್ವಿನಿ ಸಹ ಸಿನಿಮಾ ನೋಡಿದ್ದು, ಅಭಿ ಹಾಡಿಗೆ ಜೊತೆಯಾಗಿ ಹೆಜ್ಜೆ ಕೂಡ ಹಾಕಿದ್ದಾರೆ.
Image credits: Instagram
Kannada
ಸಿನಿಮಾ ನೋಡಿ ಎಂದ ಅಶ್ವಿನಿ
ನನ್ನ ಫ್ರೆಂಡ್ ಅಭಿ ಸಿನಿಮಾ Bangalore boys ಫ್ರೆಂಡ್ ಶಿಪ್ ಅಂದ್ರೆ ಹೇಗಿದೆ ಅನ್ನೋದನ್ನು ತಿಳಿಸುತ್ತೆ, ದಯವಿಟ್ಟು ಎಲ್ಲರೂ ಥಿಯೇಟರ್ ಗೆ ಹೋಗಿ ಸಿನೆಮಾ ನೋಡಿ, ಕನ್ನಡ ಚಿತ್ರಗಳಿಗೆ ಸಪೋರ್ಟ್ ಮಾಡಿ ಎಂದಿದ್ದಾರೆ.
Image credits: Instagram
Kannada
ಮೊದಲ ಹೆಂಡ್ತಿ ಜೊತೆ ವಿಕ್ರಾಂತ್
ಅಶ್ವಿನಿ ಜೊತೆ ಅಭಿಯನ್ನು ನೋಡಿರೋ ಗಟ್ಟಿಮೇಳ ಅಭಿಮಾನಿಗಳು ಖುಷಿಯಾಗಿದ್ದು, ಮೊದಲ ಹೆಂಡ್ತಿ ಜೊತೆ ವಿಕ್ರಾಂತ್, ತುಂಬಾ ಮುದ್ದಾದ ಜೋಡಿ ಎಂದು ಕಾಮೆಂಟ್ ಮಾಡಿದ್ದಾರೆ.
Image credits: Instagram
Kannada
ಮತ್ತೆ ಸೀರಿಯಲ್ ಗೆ ಬನ್ನಿ
ಇನ್ನು ಅಭಿದಾಸ್ ಅಭಿಮಾನಿಗಳಂತೂ ಗಟ್ಟಿಮೇಳ ಬಿಟ್ಟು ಎಲ್ಲಿ ಹೋದೆ ಗುರು, ವಾಪಾಸ್ ಬಾ, ವಿಕ್ರಾಂತ್ ನನ್ನು ಮಿಸ್ ಮಾಡ್ತಾ ಇದ್ದೀವಿ ಎಂದು ಹೇಳಿದ್ದಾರೆ.