ಕನ್ನಡ ಕಿರುತೆರೆಯ ಗಾರ್ಜಿಯಸ್ ಬ್ಯೂಟಿ ದೀಪಿಕಾ ದಾಸ್, ತಮ್ಮ ಸ್ಟೈಲ್ ನಿಂದಲೇ ಎಲ್ಲರನ್ನು ಸೆಳೆಯುತ್ತಾರೆ.
ದೀಪಿಕಾ ದಾಸ್ ಕನ್ನಡಿಗರಿಗೆ ಪರಿಚಿತರಾಗಿದ್ದೆ ನಾಗಿಣಿಯಾಗಿ, ಅವರ ನಾಗಿಣಿ ರೂಪವನ್ನು ಜನ ಮೆಚ್ಚಿಕೊಂಡಿದ್ದರು.
ಇನ್ನು ಬಿಗ್ ಬಾಸ್ ಸೀಸನ್ 7ರಲ್ಲಿ ಕಠಿಣ ಸ್ಪರ್ಧೆ, ತಮ್ಮ ನೇರವಾದ ಮಾತು, ಚಾಲೆಂಜ್ ಗಳನ್ನು ಸ್ವೀಕರಿಸುವ ರೀತಿಯಿಂದ ಲೇಡಿ ಬಾಸ್ ಆಗಿ ಜನಪ್ರಿಯತೆ ಪಡೆದರು.
ದೀಪಿಕಾ ದಾಸ್ ತಮ್ಮ ಫಿಟ್ನೆಸ್ ಬಗ್ಗೆ ತುಂಬಾನೆ ಗಮನ ಹರಿಸುತ್ತಾರೆ. ಹಾಗಾಗಿ ಇವರ ಫಿಟ್ ಆಗಿರುವ ದೇಹ ಸಿರಿ ನೋಡಿ ವಾರೆ ವಾ ಅನ್ನುತ್ತಾರೆ ಜನ.
ಈಕೆ ಮಾಡರ್ನ್ ಡ್ರೆಸ್ ಆದ್ರೂ ಸರಿ, ಟ್ರೆಡಿಶನಲ್ ಡ್ರೆಸ್ ಆದರೂ ಸರಿ ಅದನ್ನು ಕ್ಯಾರಿ ಮಾಡುವ ರೀತಿಗೆ ಅಭಿಮಾನಿಗಳು ಮನ ಸೋತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ದೀಪಿಕಾ ದಾಸ್ ತಮ್ಮ ಹೊಸ ಫೋಟೊ ಶೂಟ್ ಮೂಲಕ ಇದೀಗ ಮತ್ತೆ ಸದ್ದು ಮಾಡ್ತಿದ್ದಾರೆ.
ದೀಪಿಕಾ ದಾಸ್ ಸ್ಲೀವ್ ಲೆಸ್ , ಡೀಪ್ ನೆಕ್, ಥೈ ಹೈ ಸ್ಲಿಟ್ ಬಾಡಿ ಕೋನ್ ಡ್ರೆಸ್ ಧರಿಸಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ತಮ್ಮ ಬೋಲ್ಡ್ ಅವತಾರಗಳ ಮೂಲಕ ಈಗಾಗಲೇ ನಟಿ ಇಂಟರ್ನೆಟ್ಟಲ್ಲಿ ಕಿಚ್ಚು ಹಚ್ಚಿದ್ದಾರೆ ಅಂದ್ರೆ ತಪ್ಪಲ್ಲ.
ಇನ್ನು ಅಭಿಮಾನಿಗಳು ನಟಿಯ ಫೋಟೊಗಳನ್ನು ಮೆಚ್ಚಿ ಫೈರ್ ಇಮೋಜಿಗಳನ್ನು ಕಾಮೆಂಟ್ ಮಾಡಿದ್ದು, ಸಖತ್ ಹಾಟ್ ಆಗಿ ಕಾಣಿಸ್ತಿದ್ದಾರೆ ದೀಪಿಕಾ ದಾಸ್.
ಕೆಲವು ಸಮಯದ ಹಿಂದೆ ಸ್ವಲ್ಪ ಮೈಕೈ ತುಂಬಿಕೊಂಡಿದ್ದ ದೀಪಿಕಾ ದಾಸ್ ಇದೀಗ ಮತ್ತೆ ಬಳುಕುವ ಬಳ್ಳಿಯಂತಾಗಿದ್ದು, ಅಭಿಮಾನಿಗಳು ದೀಪಿಕಾ ಲುಕ್ ಅನ್ನು ಮೆಚ್ಚಿಕೊಂಡಿದ್ದಾರೆ.
ಹೇಗಿದೆ ಅಮ್ಮ -ಮಗನ ಮುದ್ದಾದ ಜೋಡಿ
ಮೂಗುತಿ ಸುಂದರಿಯಾದ ಭವ್ಯಾ ಗೌಡ... ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ
ಶ್ವೇತ ಸುಂದರಿಯಾದ ಸಂಗೀತ ಶೃಂಗೇರಿ…. ಹೊಸ ಸಿನಿಮಾಕ್ಕೆ ರೆಡಿಯಾದ್ರ?
ಆಫ್ರಿಕಾದ ಬುಡಕಟ್ಟು ಜನಾಂಗದ ಜೊತೆ ಇಶಿತಾ ವರ್ಷ… ವೈರಲ್ ಆಗ್ತಿವೆ ಫೋಟೊಸ್