Small Screen
ಕನ್ನಡ ಕಿರುತೆರೆಯಲ್ಲಿ ನಾಯಕಿಯಾಗಿ ನಟಿಸಿ, ಕನ್ನಡಿಗರ ಮನಗೆದ್ದು, ಇದೀಗ ಅತಿಥಿ ಪಾತ್ರಗಳಲ್ಲಿ ಮಿಂಚುತ್ತಿರುವ ನಟಿ ಶ್ವೇತಾ ಆರ್ ಪ್ರಸಾದ್ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ.
ಶ್ವೇತಾ ಪ್ರಸಾದ್ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶ್ವೇತಾ ಪ್ರಸಾದ್ ಬರ್ತ್ ಡೇ ಪಾರ್ಟಿಯಲ್ಲಿ ಬ್ಲ್ಯಾಕ್ ಶಾರ್ಟ್ ಡ್ರೆಸ್, ಬ್ಲ್ಯಾಕ್ ಕೇಕ್, ಬ್ಲ್ಯಾಕ್ ಬಲೂನ್ ಡೆಕೋರೆಶನ್ ನಡುವೆ ಬ್ಲ್ಯಾಕ್ ಬ್ಯೂಟಿಯಾಗಿ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ.
ಶ್ವೇತಾ ಮೂಲತಃ ಶಿವಮೊಗ್ಗದ ಹುಡುಗಿಯಾಗಿದ್ದು, ಇಂಜಿನೀಯರಿಂಗ್ ಪದವಿ ಪಡೆದಿದ್ದಾರೆ. ಇಂದು ಅಂದರೆ ಡಿಸೆಂಬರ್ 28ರಂದು ತಮ್ಮ 32ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.
ಶ್ವೇತಾ ಅವರ ವಿವಾಹ ಕನ್ನಡದ ಜನಪ್ರಿಯ ಆರ್ ಜೆ ಆಗಿರುವ ಪ್ರದೀಪ್ ಜೊತೆಗೆ ನಡೆದಿದ್ದು, ಈ ಜೋಡಿ ಹತ್ತು ವರ್ಷಗಳ ಸುಂದರವಾದ ವೈವಾಹಿಕ ಜೀವನ ಪೂರೈಸಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾದ `ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದ ನಟಿ ಶ್ವೇತಾ ಪ್ರಸಾದ್ ಮೊದಲ ಸೀರಿಯಲ್ ನಲ್ಲಿ ಮನಗೆದ್ದಿದ್ದರು.
ಶ್ವೇತಾ ಪ್ರಸಾದ್ ಕಿರುತೆರೆಯ ಜನಪ್ರಿಯ ‘ರಾಧಾ ರಮಣ’ ಧಾರಾವಾಹಿಯಲ್ಲಿ ರಾಧಾ ಆಗಿ ನಟಿಸಿದ್ದರು. ಆ ಪಾತ್ರ ಎಷ್ಟು ಜನಪ್ರಿಯತೆ ಗಳಿಸಿದ್ದು ಅಂದ್ರೆ, ನಟಿಯನ್ನೂ ಇಂದಿಗೂ ಜನ ರಾಧಾ ಮಿಸ್ ಅಂತಾನೆ ಕರೆಯುತ್ತಾರೆ.
ನಿರ್ಮಾಪಕಿ ಶೃತಿ ನಾಯ್ಡು ಶ್ವೇತಾರನ್ನು ತಮ್ಮ ಸೀರಿಯಲ್ ಗೆ ಆಯ್ಕೆ ಮಾಡಿದಾಗ, ಶ್ವೇತಾ ನೋ ಎಂದಿದ್ದರಂತೆ. ನಂತರ ಪತಿ ಪ್ರದೀಪ್ ಬೆಂಬಲದಿಂದ ನಟನೆಯಲ್ಲಿ ತೊಡಗಿಸಿಕೊಂಡರು ಈ ನಟಿ.
ಕಳ್ಬೆಟ್ಟದ ದರೋಡೆಕೋರರು, ಪದವಿ ಪೂರ್ವ, ಕಾಟೇರ ಮೊದಲಾದ ಸಿನಿಮಾಗಳಲ್ಲೂ ಸಹ ಶ್ವೇತಾ ಪ್ರಸಾದ್ ನಟಿಸುವ ಮೂಲಕ ಬಾಲಿವುಡ್
ಇಲ್ಲಿವರೆಗೆ ನಟಿಯಾಗಿ ಗುರುತಿಸಿಕೊಂಡಿರುವ ಶ್ವೇತಾ ಇತ್ತೀಚೆಗೆ ನಿರ್ಮಾಪಕಿಯಾಗಿಯು ಭರ್ತಿ ಪಡೆದಿದ್ದಾರೆ. ಮಾರ್ಯಾದೆ ಪ್ರಶ್ನೆ ಸಿನಿಮಾ ನಿರ್ಮಾಣ ಮಾಡಿದ್ದು ಶ್ವೇತಾ ಪ್ರಸಾದ್.