ಕನ್ನಡ ಕಿರುತೆರೆ ವಾಹಿನಿಯ ಜನಪ್ರಿಯ ನಿರೂಪಕಿ ಅನುಶ್ರೀ. ಮಂಗಳೂರಿನ ಸುಂದರಿ ಅನು ಇಲ್ಲದೆ ರಿಯಾಲಿಟಿ ಶೋ ನೋಡಲು ಬೋರೋ ಬೋರು!
Image credits: our own
ಆಂಕರ್ ಮಾತ್ರವಲ್ಲ....
ಆಂಕರ್ ಆಗಿ ಗುರುತಿಸಿಕೊಂಡಿರು ಅನುಶ್ರೀ ಭೂಮಿತಾಯಿ, ಮುರಳಿ ಮೀಟ್ಸ್ ಮೀರಾ, ಬೆಳ್ಳಿ ಕಿರಣ, ಟ್ಯೂಬ್ ಲೈಟ್, ರಿಂಗ್ ಮಾಸ್ಟರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
Image credits: our own
ಅನು ಯೂಟ್ಯೂಬ್ ಪವರ್!
ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್‌ಗೆ ಸಜ್ಜಾಗಿರುವ ಕನ್ನಡ ಸಿನಿಮಾಗಳು ಮತ್ತು ಓಟಿಟಿ ಸಿನಿಮಾಗಳ ಬಗ್ಗೆ ಸಂದರ್ಶನ ನಡೆಸುತ್ತಾರೆ. ಅನು ಚಾನಲ್‌ನಲ್ಲಿ ಬಂದ್ರೆ ಸಿನಿಮಾ ಹಿಟ್ ಅನ್ನೋ ಲೆಕ್ಕಾಚಾರ ಶುರು.
Image credits: our own
ಸಂಭಾವನೆ ಎಷ್ಟು?
ಹಲವು ವರ್ಷಗಳಿಂದ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಅನುಶ್ರೀ ಸಂಭಾವನೆ ಎಷ್ಟು ಎಂದು ಈಗಾಗಲೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿದೆ. ಒಂದು ಎಪಿಸೋಡ್‌ಗೆ ಲಕ್ಷಗಟ್ಟಲೆ ಪಡೆಯುತ್ತಾರಂತೆ.
Image credits: our own
ಖಾಸಗಿ ಕಾರ್ಯಕ್ರಮದಲ್ಲೂ ಅನುನೇ!
ಹೌದು! ಸಿನಿಮಾ ಈವೆಂಟ್‌ಗಳು ಯಾವುದೇ ಇದ್ದರೂ ಅನುಶ್ರೀ ಬೇಕೇ ಬೇಕು. ಈ ರೀತಿ ಕಾರ್ಯಕ್ರಮಗಳಿಗೂ ಅನುಶ್ರೀ ಸಿಕ್ಕಾಪಟ್ಟೆ ಸಂಭಾವನೆ ಪಡೆಯುತ್ತಾರೆ. ಅತಿ ಹೆಚ್ಚು ಟ್ಯಾಕ್ಸ್ ಕಟ್ಟುವ ಸುಂದರಿ ಎಂದು ರೇಗಿಸುತ್ತಾರೆ.
Image credits: our own
ಐಷಾರಾಮಿ ಜೀವನ!
ಅನು ನೋಡಲು ಸಿಕ್ಕಾಪಟ್ಟೆ ಸಿಂಪಲ್ ಆದರೆ ಓಡಾಡುವುದು ದುಬಾರಿ ಕಾರಿನಲ್ಲಿ, ತಮ್ಮದೇ ಸ್ವಂತ ಮನೆ ಮಾಡಿಕೊಂಡಿದ್ದಾರೆ. ಪ್ರತಿ ಕಾರ್ಯಕ್ರಮಕ್ಕೂ ಅನು ಧರಿಸುವ ಉಡುಪುಗಳು ಎಕ್ಸ್‌ಕ್ಲೂಸಿವ್ ಆಗಿರುವ ಡಿಸೈನರ್‌ವೇರ್.
Image credits: our own
ಅನುಶ್ರೀ ಮದುವೆ!
ಮದುವೆಯಾಗಲು ಮನಸ್ಸು ಮಾಡಿದ್ದೀನಿ ಎಂದು ಅನುಶ್ರೀ ಹೇಳಿದ್ದೆ ತಡ ಆಕೆಯ ಆಸ್ತಿ, ಸಂಭಾವನೆ ಪ್ರತಿಯೊಂದ ಲೆಕ್ಕಾಚಾರ ಶುರುವಾಗಿದೆ. ಆದರೆ ಇದುವರೆಗೂ ಅನುಶ್ರೀ ಕರೆಕ್ಟ್ ಮಾಹಿತಿಯನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ.