ಅನುಪಮಾದಲ್ಲಿ ಆಧ್ಯಾ ಕಳೆದ 6 ತಿಂಗಳಿನಿಂದ ಕಾಣೆಯಾಗಿದ್ದಾಳೆ. ಅನುಜ್ ಆಧ್ಯಾ ಸತ್ತಿದ್ದಾಳೆಂದುಕೊಂಡಿದ್ದು, ಹುಚ್ಚನಂತಾಗಿದ್ದಾನೆ.
ಇಲ್ಲಿ ಸಿಗುತ್ತಾಳೆ ಆಧ್ಯಾ
ಅನುಪಮಾ ಆಧ್ಯಾಳನ್ನು ಹುಡುಕುತ್ತಿದ್ದಾಳೆ. ಆರು ತಿಂಗಳ ಹಿಂದೆ ಮಕ್ಕಳ ಕಲ್ಯಾಣ ಸಂಸ್ಥೆಯಲ್ಲಿದ್ದ ಆಧ್ಯಾಳನ್ನು ಒಂದು ಕುಟಂಬ ದತ್ತು ಪಡೆದಿದೆ.
ಬದಲಾಗಿದೆ ಆಧ್ಯಾಳ ಪರಿಚಯ
ಅಧ್ಯಾಳನ್ನು ಅಪಹರಿಸಿದವರು, ಪ್ರಿಯಾಳೆಂದು ಹೆಸರು ಬದಲಾಯಿಸಿ, ಭಾರತದಿಂದಲೇ ಕರೆದುಕೊಂಡು ಹೋಗಿತ್ತು ಕುಟಂಬ. ಇದೀಗ ಸ್ವದೇಶಕ್ಕೆ ಮರಳುತ್ತಿದ್ದಾಳೆ.
ಅನುಪಮಾ-ಆಧ್ಯಾ ಭೇಟಿ
ಭಾರತಕ್ಕೆ ಬಂದಾಗ ಅಮ್ಮನೊಂದಿಗೆ ದೇವಸ್ಥಾನಕ್ಕೆ ಹೋಗುತ್ತಾಳೆ ಆಧ್ಯಾ. ಆಗ ಅನುಪಮಾಳನ್ನು ಭೇಟಿಯಾಗುತ್ತಾಳೆ. ಪರಿಚಯ ಮಾತ್ರ ಸಿಗೋಲ್ಲ. ಹೊಸ ಅಮ್ಮನೊಂದಿಗೇ ಜೀವನ ನಡೆಸಲು ಮುಂದಾಗುತ್ತಾಳೆ.
ಅನುಜ್‌ಗೆ ಬೇಸರ
ಆಧ್ಯಾ ಕಾರಿನಲ್ಲಿರುತ್ತಾಳೆ. ಈ ವೇಳೆ ಅನುಜ್ ಕಣ್ಣು ಅವಳ ಮೇಲೆ ಬೀಳುತ್ತದೆ. ಮಾತನಾಡಿಸಲು ಹೋಗಬೇಕೆನ್ನುವಾಗ ಕಾರು ಮೂವ್ ಆಗುತ್ತೆ. ಕಾರಿನ ಹಿಂದೆಯೇ ಹುಚ್ಚನಂತೆ ಓಡುತ್ತಾನೆ ಅನುಜ್.
ಅನುಜ್-ಅನುಪಮಾ ಶತ್ರು
ಆಧ್ಯಾಳ ಹೊಸ ತಾಯಿ ಅನುಜ್ ಮತ್ತು ಅನುಪಮಾಳ ಹೊಸ ಶತ್ರುವಾಗುವ ಸೂಚನೆ ಈಗಾಗಲೇ ಸಿಕ್ಕಿದೆ. ಆಧ್ಯಾಳ ಹೊಸ ತಾಯಿ ಶ್ರುತಿ. ಅನುಜ್‌ನನ್ನು ತನ್ನಿಷ್ಟದಂತೆ ಬಳಸಿಕೊಳ್ಳಬಹುದು.
ಮಂದೇನಾಗಬಹುದು ಸೀರಿಯಲ್?
ಮತ್ತೊಂದೆಡೆ, ವನರಾಜ್ ಕೂಡ ಅನುಪಮಾಳನ್ನು ಹಾಳು ಮಾಡಲು ಬಯಸುತ್ತಾನೆ. ಹೀಗಾಗಿ ಶ್ರುತಿ ವನರಾಜ್ ಜೊತೆ ಕೈಜೋಡಿಸಬಹುದು. ಹಾಗಾದರೆ ಇಬ್ಬರೂ ಸೇರಿ ಅನುಜ್ ಮತ್ತು ಅನುಪಮಾಳ ಸಂಸಾರ ಒಡೆಯುತ್ತಾರಾ?