ಕನ್ನಡ ಕಿರುತೆರೆಯ ಮೂಲಕ ಮನೆಮಾತಾದ ನಟಿ ತನಿಷಾ ಕುಪ್ಪಂಡ, ಕಿರುತೆರೆಯಲ್ಲಿ ವಿಲನ್ ಆಗಿ ಗುರುತಿಸಿಕೊಂಡರು.
ತನಿಷಾಗೆ ಹೆಚ್ಚಿನ ಜನಪ್ರಿಯತೆ ಸಿಕ್ಕಿದ್ದು, ಬಿಗ್ ಬಾಸ್ ಸೀಸನ್ 10ರ ಮೂಲಕ. ಟಫ್ ಸ್ಪರ್ಧಿಯಾಗಿ ಗುರುತಿಸಿಕೊಂಡರು.
ದೊಡ್ಮನೆಯಲ್ಲಿ ತಮ್ಮ ನೇರವಾದ ಮಾತು, ಸ್ಪರ್ಧೆಯ ಮೂಲಕ ಅಭಿಮಾನಿಗಳಿಂದ ಬೆಂಕಿ ಅಂತಾನೆ ಕರೆಸಿಕೊಂಡರು.
ದೊಡ್ಮನೆಯಿಂದ ಹೊರ ಬಂದಮೇಲೆ ತನಿಷಾ ಸಿನಿಮಾಗಳಲ್ಲಿ ಹಾಗೂ ತಮ್ಮ ಜ್ಯುವೆಲ್ಲರಿ ಬ್ಯುಸಿನೆಸ್ ನಲ್ಲಿ ಬ್ಯುಸಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ತನಿಷಾ ಹೆಚ್ಚಾಗಿ ತಮ್ಮ ಹೊಸ ಹೊಸ ಫೋಟೊ ಶೂಟ್ ಮಾಡಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ.
ಇದೀಗ ತನಿಷಾ ಅವರ ತಾಯಿ ಲೀಲಾ ಅವರ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ನಟಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಪ್ರೀತಿಯ ಅಮ್ಮ, ನಿಮ್ಮ ಜನ್ಮ ದಿನ ನನಗೆ ಯಾವಾಗಲೂ ಕುಶಿ ತರುವ ವಿಷಯ .. ಮುಂದೆ ನನ್ನ ಬದುಕಿನಲ್ಲಿ ಮಗಳು ಇರುವಳೋ ಇಲ್ಲವೋ ಗೊತ್ತಿಲ್ಲ, ಆದರೆ ನನ್ನ ಮಗಳು ನೀನೆ ಅಮ್ಮ ಎಂದ ನಟಿ.
ಅಷ್ಟೇ ಅಲ್ಲ happy ಬರ್ತ್ಡೇ to ದಿ love of my life. ಯಾವಾಗಲೂ ಸಂತೋಷವಾಗಿರು ನನ್ನ ಮುದ್ದು ಅಮ್ಮ ಲೀಲು. I love you mom ಎಂದು ಬರೆದುಕೊಂಡಿದ್ದಾರೆ.
ತನಿಷಾ ತಮ್ಮ ತಾಯಿಯ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಮನೆಯಲ್ಲಿಯೇ ಸಹೋದರನ ಜೊತೆ ಆಚರಿಸಿಕೊಂಡಿದ್ದಾರೆ.
ತನಿಷಾ ಶೇರ್ ಮಾಡಿರುವ ಫೋಟೊಗಳನ್ನು ನೋಡಿ, ಸ್ನೇಹಿತರು, ನಟರು ಹಾಗೂ ಅಭಿಮಾನಿಗಳು ಸಹ ನಟಿಯ ತಾಯಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಬಾರ್‌ನಲ್ಲಿ ಬ್ಯೂಟಿಯಾದ ನಿವೇದಿತಾ, ಈಕೆಯ ಅಂದಕ್ಕೆ ಸಾಟಿ ಉಂಟಾ?
ಥೈಲ್ಯಾಂಡಲ್ಲಿ ಅಂತರಪಟ ನಟಿ ತನ್ವಿಯಾ ಬಾಲರಾಜ್
'ಅಣ್ಣಯ್ಯʼ ಧಾರಾವಾಹಿ ಹೀರೋ-ಹೀರೋಯಿನ್ ರಿಯಲ್ ಆಗಿ ಲವ್ ಮಾಡ್ತಿದ್ದಾರಾ?
ʼರಿಯಲ್ ಆಗಿ ನಂಗೆ ಬ್ರೇಕಪ್ ಆಗಿದೆʼ-ಅಣ್ಣಯ್ಯ ಧಾರಾವಾಹಿ ವಿಕಾಶ್ ಉತ್ಯಯ್ಯ