Small Screen

ಅಮೃತಧಾರೆ ಭೂಮಿಕಾ

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯ ಭೂಮಿಕಾ ಪಾತ್ರ ಅಪಾರ ಪ್ರಮಾಣದಲ್ಲಿ ಜನಮನ ಗೆದ್ದಂತಹ ಪಾತ್ರವಾಗಿದೆ. 
 

Image credits: our own

ಛಾಯಾ ಸಿಂಗ್

ಭೂಮಿಕಾ ಎನ್ನುವ ಪ್ರಬುದ್ಧ ಪಾತ್ರಕ್ಕೆ ನಟಿ ಛಾಯಾ ಸಿಂಗ್ ಜೀವ ತುಂಬುತ್ತಿದ್ದು, ಈ ಪಾತ್ರ, ಭೂಮಿಕಾ ಸ್ಟೈಲ್, ಸೀರೆ, ನಗು, ಅಭಿನಯ, ಮಾತು ಎಲ್ಲವೂ ಜನರಿಗೆ ತುಂಬಾನೆ ಇಷ್ಟ. 
 

Image credits: our own

ಭೂಮಿಕಾ ಸೀರೆ

ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ಭೂಮಿಕಾ, ಪ್ರತಿಯೊಂದು ಎಪಿಸೋಡ್ ನಲ್ಲೂ ಉಡುವಂತಹ ಸೀರೆ ಸಹ ಭೂಮಿಕಾ ಜೊತೆ ಜನಪ್ರಿಯತೆ ಪಡೆದಿದೆ. ನಿಮಗೆ ಭೂಮಿಕಾ ಯಾವ ಲುಕ್ ಇಷ್ಟ ಆಯ್ತು? 
 

Image credits: our own

ಸಿಂಪಲ್ ಸೀರೆ

ಭೂಮಿಕಾ ಉಡೋದೆಲ್ಲಾ ಸಿಂಪಲ್ ಸೀರೆ, ಆದರೆ ಅದನ್ನ ಕ್ಯಾರಿ ಮಾಡೊ ರೀತಿ ಮಾತ್ರ ತುಂಬಾನೆ ಸ್ಪೆಷಲ್. ಹಾಗಾಗಿ ಸಿಂಪಲ್ ಸೀರೆಯಲ್ಲಿ ಸರಳ ಸುಂದರಿಯಾಗಿ ಕಾಣಿಸ್ತಾರೆ ಭೂಮಿಕಾ. 
 

Image credits: our own

ಸೀರೆಯಿಂದ ಭೂಮಿಕಾ ಅಂದ

ಭೂಮಿಕಾಳನ್ನು ತೆರೆ ಮೇಲೆ ಸೀರೆಯಲ್ಲಿ ನೋಡುತ್ತಿದ್ದರೆ, ಸೀರೆಯಿಂದ ಭೂಮಿಕಾ ಅಂದ ಹೆಚ್ಚಿತೋ ಅಥವಾ ಭೂಮಿಕಾಳಿಂದ ಸೀರೆಯ ಅಂದ ಹೆಚ್ಚಾಗಿದ್ಯೋ ಅನ್ನೋದೆ ತಿಳಿಯೋದಿಲ್ಲ. 
 

Image credits: our own

ಮ್ಯಾಚಿಂಗ್ ಬಳೆಗಳು

ಯಾವುದೇ ಸೀರೆ ಉಟ್ಟರೂ ಸಹ ಅದಕ್ಕೆ ಮ್ಯಾಚ್ ಮಾಡಿಕೊಂಡು ಭೂಮಿಕಾ ಹಾಕುವಂತಹ ಗಾಜಿನ ಬಳೆಗಳು ಸಹ ಭೂಮಿ ಲುಕ್ ಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತೆ. 
 

Image credits: our own

ಸಿಲ್ಕ್ ಸೀರೆ

ಇತ್ತೀಚಿನ ಎಪಿಸೋಡ್ ನಲ್ಲಿ ಭೂಮಿಕಾ ಗೋಲ್ಡನ್ ಬಣ್ಣದ ಸಿಲ್ಕ್ ಸೀರೆಯುಟ್ಟಿದ್ದು, ಬಂಗಾರದ ಬೊಂಬೆಯಂತೆ ಕಾಣಿಸುತ್ತಿದ್ದದ್ದು ನಿಜಾ. 
 

Image credits: our own

ಅಪ್ಪಟ ಗೃಹಿಣಿ

ಭೂಮಿಕಾಳದ್ದು ಸೀರಿಯಲ್ ನಲ್ಲಿ ಅಪ್ಪಟ ಗೃಹಿಣಿಯ ಪಾತ್ರ ಅಲ್ಲದೇ ಇರಬಹುದು, ಆಕೆ ಕಾಲೇಜು ಲೆಕ್ಚರರ್ ಹೌದು, ಆದರೆ ಸೀರೆಯುಟ್ಟು, ಗಂಡನ ಬೇಕು ಬೇಡಗಳನ್ನು ನೋಡಿಕೊಳ್ಳುವ ಅಪ್ಪಟ ಗೃಹಿಣಿಯೇ ಇವರು. 
 

Image credits: our own

ಕಾಟನ್ ಸೀರೆಯಲ್ಲೂ ಸುಂದರಿ

ಭೂಮಿಕಾ ಯಾವಾಗ್ಲೂ ಅಬ್ಬರದ ಸೀರೆ ಏನೂ ಉಡೋದಿಲ್ಲ, ಕೆಲವೊಮ್ಮೆ ಕಾಟನ್ ಸೀರೆಯುಟ್ಟರೂ ಸಹ, ಅವರ ಸಿಂಪ್ಲಿಸಿಟಿ, ಆ ಸೀರೆ ಲುಕ್ ವೀಕ್ಷಕರಿಗೆ ತುಂಬಾನೇ ಹಿಡಿಸಿಬಿಟ್ಟಿದೆ. 
 

Image credits: our own

ಬ್ಲೌಸ್ ಡಿಸೈನ್ ಕೂಡ ಸೂಪರ್

ಭೂಮಿಕಾ ತಮ್ಮ ಪಾತ್ರಕ್ಕೆ ಡಿಸೈನರ್ ಬ್ಲೌಸ್ ಧರಿಸೋದಿಲ್ಲ, ಹೆಚ್ಚಾಗಿ ಒಂದೇ ಥರಾ ಬ್ರಾಡ್ ಬ್ಯಾಕ್ ನೆಕ್ ಇರುವಂತಹ ಸಿಂಪಲ್ ಬ್ಲೌಸ್ ಧರಿಸುತ್ತಿದ್ದು, ಇದು ಆಕೆಯ ಪಾತ್ರದ ಗತ್ತನ್ನು ಹೆಚ್ಚಿಸುತ್ತೆ. 
 

Image credits: our own

ದೊಡ್ಮನೆಯಲ್ಲಿ ಗೌತಮಿ‌ ಜಾದವ್ ಉಡ್ತಿರೋ‌ ಸೀರೆ ಬೆಲೆ‌ ಬಲು ದುಬಾರಿ!

ನಟ ಜಗನ್ನಾಥ್ -ರಕ್ಷಿತಾ ದಂಪತಿ ಜೋಡಿಗಳ ಮುದ್ದಾದ ಫೋಟೊ

ಸರಳ ಸುಂದರಿ ಚೈತ್ರಾ ಕುಂದಾಪುರ; ಇದ್ಯಾವುದು ದುಬಾರಿ ಸೀರೆ ಅಲ್ವೇ ಅಲ್ಲ

ವಧುವಿನಂತೆ ಸಿಂಗಾರಗೊಂಡ ಬಿಗ್ ಬಾಸ್ ಖ್ಯಾತಿಯ ಸಿರಿಜಾ