Small Screen
ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ ನಟಿ ಕಾವ್ಯಾ ಗೌಡ. ಸದ್ಯ ಮದುವೆಯಾದ ನಂತರ ನಟನೆಯಿಂದ ದೂರವೇ ಉಳಿದಿರುವ ನಟಿ, ತಮ್ಮ ಅದ್ಧೂರಿ ಲೈಫ್ ಸ್ಟೈಲ್ ನಿಂದಾನೇ ಫೇಮಸ್ ಆಗಿದ್ದಾರೆ.
ಕಾವ್ಯಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ತಮ್ಮ ಫ್ಯಾಮಿಲಿ ಫೋಟೊ, ಹಬ್ಬಗಳ ಆಚರಣೆಯ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಕಾವ್ಯಾ ಗೌಡ ಮನೆಯಲ್ಲೂ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದ್ದು, ವರ್ಷದ ಕೊನೆಯ ಹಬ್ಬವನ್ನು ನಟಿ ತಮ್ಮ ಪತಿ ಸೋಮಶೇಖರ್ ಹಾಗೂ ಮುದ್ದಿನ ಮಗಳು ಸಿಯಾ ಜೊತೆ ಸಂಭ್ರಮದಿಂದ ಆಚರಿಸಿದ್ದಾರೆ.
ನಟಿ ಕಾವ್ಯಾಗೆ ಈ ವರ್ಷದ ಕ್ರಿಸ್ಮಸ್ ಎಕ್ಸ್ಟ್ರಾ ಮ್ಯಾಜಿಕಲ್ ಆಗಿತ್ತಂತೆ, ಯಾಕಂದ್ರೆ ಈ ವರ್ಷ ಪುಟಾಣಿ ಸಿಯಾ ಜೊತೆ ಹಬ್ಬವನ್ನು ಹೆಚ್ಚಿನ ಸಂಭ್ರಮ, ಸಡಗರದಿಂದ ಆಚರಿಸಿದ್ದಾರೆ.
ನಿನ್ನ ಕಣ್ಣುಗಳ ಹೊಳಪು ನೋಡುವುದು ಮತ್ತು ಈ ಅಮೂಲ್ಯ ಕ್ಷಣಗಳನ್ನು ಹಂಚಿಕೊಳ್ಳುವುದೇ ಸಂಭ್ರಮ. ನೀನು ನನ್ನ ಪಾಲಿನ ದೊಡ್ಡ ಉಡುಗೊರೆ, ಪ್ರತಿ ಹಬ್ಬದ ಲೈಟ್ ನೀನು ಎಂದು ಬರೆದುಕೊಂಡಿದ್ದಾರೆ.
ಸಿಯಾ, ನಾವು ಈ ಪ್ರೀತಿಯ ನೆನಪುಗಳನ್ನು ಒಟ್ಟಿಗೆ ಸಂಭ್ರಮಿಸುತ್ತಿದ್ದೇವೆ., ಒಂದು ದಿನ ನೀನು ಹಿಂತಿರುಗಿ ನೋಡಿದಾಗ, ಈ ಎಲ್ಲಾ ನೆನಪುಗಳು ನಿನಗೆ ನಾವು ನಿನ್ನನ್ನು ಎಷ್ಟು ಪ್ರೀತಿ ಮಾಡಿದ್ದೇವು ಅನ್ನೋದನ್ನು ತೋರಿಸುತ್ತೆ.
ಈ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸುತ್ತೇನೆ. ನೀನು ನನ್ನವಳು ಎಂಬ ಹೆಮ್ಮೆ ನನಗಿದೆ. ನಮ್ಮ ಮೊದಲ ಕ್ರಿಸ್ಮಸ್ ಸಂಭ್ರಮದಿಂದ ಆಚರಿಸುವ ಮೂಲಕ ಮುಂದಿನ ಮ್ಯಾಜಿಕಲ್ ಕ್ರಿಸ್ಮಸ್ ಗೆ ನಾಂದಿ ಹಾಡುವ.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕಾವ್ಯಾ ತಮ್ಮ ಮನೆಯಲ್ಲಿ ಪೂರ್ತಿಯಾಗಿ ವಿದ್ಯುತ್ ದೀಪದಿಂದ ಅಲಂಕರಿಸಿದ್ದು, ಜೊತೆ ಕಿಸ್ಮಸ್ ಟ್ರೀ, ಸ್ನೋ ಮ್ಯಾನ್, ಉಡುಗೊರೆಯ ಮೂಲಕ ಡೆಕೊರೇಟ್ ಮಾಡಿದ್ದಾರೆ.
ಕಾವ್ಯಾ ಮತ್ತು ಸೋಮಶೇಖರ್ ಇಬ್ಬರೂ ವೈಟ್ ಮತ್ತು ವೈಟ್ ಟೀ ಶರ್ಟ್ ಪ್ಯಾಂಟಲ್ಲಿ ಮಿಂಚಿದರೆ, ಪುಟ್ಟ ಸಿಯಾ ಕೆಂಪು ಬಣ್ಣದ ಫ್ರಾಕ್ ಧರಿಸಿದ್ದು, ಸಂಭ್ರಮವನ್ನು ಎಂಜಾಯ್ ಮಾಡುವ ಮೂಲಕ ಹಬ್ಬಕ್ಕೆ ಮೆರುಗು ತಂದಿದ್ದಾರೆ.
ಕಾವ್ಯಾ ಗೌಡ ಮತ್ತು ಸೋಮಶೇಖರ್ ದಂಪತಿಗಳಿಗೆ ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 22 ರಂದು, ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಟಾಪನೆ ದಿನ ಹೆಣ್ಣುಮಗು ಜನಿಸಿದ್ದು, ಹಾಗಾಗಿ ಮಗಳಿಗೆ ಸಿಯಾ ಎಂದು ನಾಮಕರಣ ಮಾಡಿದ್ದರು.