Travel
ನೀರಿಲ್ಲದೆ ಭೂಮಿಯ ಮೇಲಿನ ಜೀವನವನ್ನು ಊಹಿಸಲು ಸಾಧ್ಯವಿಲ್ಲ ಅಲ್ವಾ?. ನೀರಿಲ್ಲದೆ, ನಮ್ಮ ಇಡೀ ದಿನಚರಿಯೂ ಹಾಳಾಗುತ್ತೆ. ನದಿಗಳೇ ಕುಡಿಯುವ ನೀರಿನ ಮೂಲಕವಾಗಿದೆ. ಆದರೆ ನದಿಗಳೇ ಇಲ್ಲಾಂದ್ರೆ ಹೇಗೆ?
ವಿಶ್ವದ ಮಹಾನ್ ನಾಗರಿಕತೆಗಳು ನದಿಗಳ ದಡದಲ್ಲಿ ಅಭಿವೃದ್ಧಿ ಹೊಂದಿದವು. ಆದರೆ ನದಿಗಳಿಲ್ಲದೇ ಅಭಿವೃದ್ಧಿ ಹೊಂದಿದ ದೇಶ ಒಂದಿದೆ. ಆ ದೇಶ ಯಾವುದು? ಅಲ್ಲಿ ನೀರಿನ ಅಗತ್ಯ ಹೇಗೆ ಪೂರೈಸುತ್ತಾರೆ? ನೋಡೋಣ.
ಸೌದಿ ಅರೇಬಿಯಾ ವಿಶ್ವ ಭೂಪಟದಲ್ಲಿ ಒಂದೇ ಒಂದು ನದಿ ಅಥವಾ ಸರೋವರವಿಲ್ಲದ ದೇಶವಾಗಿದೆ. ಆದರೆ ಇದು ಶ್ರೀಮಂತ ದೇಶವಾಗಿದೆ. ಇವರು ಕುಡಿಯುವ ನೀರಿಗೆ ಏನು ಮಾಡ್ತಾರೆ?
ಸೌದಿ ಅರೇಬಿಯಾದಲ್ಲಿ, ಮಳೆ ಬರೋದೆ ಕಡಿಮೆ, ಅಂದರೆ ವರ್ಷಕ್ಕೆ ಒಂದರಿಂದ ಎರಡು ದಿನಗಳು ಮಾತ್ರ ಇಲ್ಲಿ ಮಳೆಯಾಗುತ್ತವೆ. ಮಳೆಯ ಕೊರತೆಯಿಂದಾಗಿ, ಅಂತರ್ಜಲವೂ ಇಲ್ಲಿ ಸೊರಗಿದೆ.
ಸೌದಿ ಅರೇಬಿಯಾ ನೀರಿಗಾಗಿ ಸಾಕಷ್ಟು ಖರ್ಚು ಮಾಡಲು ಮುಖ್ಯ ಕಾರಣ ಇದೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ, ಸೌದಿ ಅರೇಬಿಯಾ ಪ್ರತಿವರ್ಷ ತನ್ನ ಜಿಡಿಪಿಯ ಎರಡು ಪ್ರತಿಶತವನ್ನು ನೀರಿಗಾಗಿ ಖರ್ಚು ಮಾಡುತ್ತದೆ.
ಸೌದಿ ಅರೇಬಿಯಾ ಹೆಚ್ಚಾಗಿ ಅಂತರ್ಜಲದ ಮೇಲೆ ಅವಲಂಬಿತವಾಗಿದೆ. ಅಲ್ಲಿನ ಜನರು ನೀರಿಗಾಗಿ ಬಾವಿಗಳನ್ನು ಬಳಸುತ್ತಾರೆ. ಆದರೆ, ಇಡೀ ಜನಸಂಖ್ಯೆಗೆ ನೀರನ್ನು ಒದಗಿಸಲು ಅಂತರ್ಜಲ ಸಾಕಾಗಲ್ಲ.
ಅಂತರ್ಜಲ ನೀರು ಖಾಲಿಯಾಗುವ ಸಾಧ್ಯತೆ ಇರೋದರಿಂದ ಸೌದಿ ಅರೇಬಿಯಾದಲ್ಲಿ, ಸಮುದ್ರದ ನೀರನ್ನು ಕುಡಿಯಲು ಯೋಗ್ಯವಾಗಿಸಿ ಬಳಸಲಾಗುತ್ತದೆ. ಆದರೆ, ಈ ಪ್ರಕ್ರಿಯೆಯು ತುಂಬಾ ದುಬಾರಿಯಾಗಿದೆ.
ಸೌದಿ ಅರೇಬಿಯಾ ಯಾವುದೇ ನದಿ ಇಲ್ಲದಿದ್ದರೂ ಎರಡು ಬದಿಗಳಿಂದ ಸಮುದ್ರದಿಂದ ಆವೃತವಾಗಿದೆ. ಇದು ಪಶ್ಚಿಮದಲ್ಲಿ ಕೆಂಪು ಸಮುದ್ರ ಮತ್ತು ಪೂರ್ವದಲ್ಲಿ ಪರ್ಷಿಯನ್ ಕೊಲ್ಲಿಯಿಂದ ಸುತ್ತುವರೆದಿದೆ.