Kannada

ರೈಲು ಮಿಸ್ಸಾದ್ರೆ ಟಿಕೆಟ್‌ನೊಂದಿಗೆ ಬೇರೆ ರೈಲಿನಲ್ಲಿ ಪ್ರಯಾಣಿಸಬಹುದೇ?

Kannada

ರೈಲು ತಪ್ಪಿದರೆ ಅದೇ ಟಿಕೆಟ್‌ನಲ್ಲಿ ಬೇರೆ ರೈಲು ಹಿಡಿಯಬಹುದೇ?

ನಿಮ್ಮ ಬಳಿ ಇರುವ ಟಿಕೆಟ್‌ನ ರೈಲು ತಪ್ಪಿದ ನಂತರ, ಅದೇ ಟಿಕೆಟ್‌ನೊಂದಿಗೆ ಬೇರೆ ರೈಲಿನಲ್ಲಿ ಪ್ರಯಾಣಿಸಬಹುದು ಎಂದು ನೀವು ಭಾವಿಸಿದರೆ, ಅದು ಸಂಪೂರ್ಣವಾಗಿ ತಪ್ಪು. ರೂಲ್ಸ್ ಏನು ಗೊತ್ತಾ?

Image credits: Getty
Kannada

ರಿಸರ್ವೇಶನ್ ಟಿಕೆಟ್‌ಗೆ ಸಂಬಂಧಿಸಿದಂತೆ ರೈಲ್ವೆ ನಿಯಮವೇನು?

ರೈಲ್ವೆ ನಿಯಮಗಳ ಪ್ರಕಾರ, ರಿಸರ್ವೇಶನ್ ಟಿಕೆಟ್ ಅದೇ ರೈಲು ಮತ್ತು ಅದೇ ದಿನಾಂಕಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ಅದೇ ಟಿಕೆಟ್‌ನಲ್ಲಿ ಬೇರೆ ರೈಲಿನಲ್ಲಿ ಪ್ರಯಾಣಿಸಿ ಸಿಕ್ಕಿಬಿದ್ದರೆ ದಂಡ ವಿಧಿಸಬಹುದು.

Image credits: Getty
Kannada

ಹಾಗಾದರೆ ಬೇರೆ ರೈಲಿನಲ್ಲಿ ಪ್ರಯಾಣಿಸುವುದು ಹೇಗೆ?

ನಿಮ್ಮ ರೈಲು ತಪ್ಪಿಹೋಗಿದ್ದರೆ ಮತ್ತು ನೀವು ಅದೇ ದಿನ ಪ್ರಯಾಣಿಸಬೇಕಾಗಿದ್ದರೆ, ಜನರಲ್ ಟಿಕೆಟ್ ತೆಗೆದುಕೊಳ್ಳುವುದು ಒಂದೇ ಆಯ್ಕೆಯಾಗಿದೆ. ಆದರೆ ಅದರಿಂದ ನೀವು ಜನರಲ್ ಕೋಚ್‌ಗಳಿರುವ ರೈಲುಗಳಲ್ಲಿ ಮಾತ್ರ ಪ್ರಯಾಣಿಸಬಹುದು.

Image credits: Getty
Kannada

ಸೂಪರ್‌ಫಾಸ್ಟ್ ರೈಲುಗಳಲ್ಲಿ ಜನರಲ್ ಟಿಕೆಟ್ ಮಾನ್ಯವಾಗಿಲ್ಲ

ವಂದೇ ಭಾರತ್, ರಾಜಧಾನಿ, ಶತಾಬ್ದಿ ಅಥವಾ ಅನೇಕ ಸೂಪರ್‌ಫಾಸ್ಟ್ ರೈಲುಗಳಲ್ಲಿ ಜನರಲ್ ಟಿಕೆಟ್‌ಗಳು ಮಾನ್ಯವಾಗಿರುವುದಿಲ್ಲ. ಆದ್ದರಿಂದ, ರೈಲು ಹತ್ತುವ ಮೊದಲು ಅದರ ವರ್ಗವನ್ನು ಪರೀಕ್ಷಿಸಲು ಮರೆಯದಿರಿ.

Image credits: Getty
Kannada

ತಪ್ಪು ರೈಲಿನಲ್ಲಿ ಪ್ರಯಾಣಿಸಿದರೆ ಏನಾಗುತ್ತದೆ?

ಯಾವುದೇ ಪ್ರಯಾಣಿಕರು ರಿಸರ್ವ್ ಟಿಕೆಟ್‌ನೊಂದಿಗೆ ಬೇರೆ ರೈಲಿನಲ್ಲಿ ಅಥವಾ ಜನರಲ್ ಕೋಚ್ ಇಲ್ಲದ ರೈಲಿನಲ್ಲಿ ಜನರಲ್ ಟಿಕೆಟ್‌ನೊಂದಿಗೆ ಪ್ರಯಾಣಿಸಿದರೆ, ಟಿಕೆಟ್ ತಪಾಸಣೆ ವೇಳೆ ದಂಡ ವಿಧಿಸಬಹುದು, ಕ್ರಮ ಕೈಗೊಳ್ಳಬಹುದು.

Image credits: Getty
Kannada

ರೈಲು ತಪ್ಪಿದರೆ ಮರುಪಾವತಿ ಪಡೆಯುವುದು ಹೇಗೆ?

ನೀವು ಬೇರೆ ರೈಲಿನಲ್ಲಿ ಪ್ರಯಾಣಿಸಲು ಬಯಸದಿದ್ದರೆ & ನಿಮ್ಮ ಟಿಕೆಟ್ ಹಣವನ್ನು ಮರಳಿ ಪಡೆಯಲು ಬಯಸಿದರೆ, ರೈಲ್ವೆಯು ಇದಕ್ಕಾಗಿ ಸುಲಭವಾದ ಮಾರ್ಗವನ್ನು ಒದಗಿಸಿದೆ. ನೀವು ಟಿಕೆಟ್ ಡೆಪಾಸಿಟ್ ರಶೀದಿ(TDR) ಫೈಲ್ ಮಾಡಬೇಕು.

Image credits: Getty
Kannada

ಟಿಡಿಆರ್ ಫೈಲ್ ಮಾಡುವುದು ಹೇಗೆ?

  • IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಲಾಗಿನ್ ಮಾಡಿ.
  • ಬುಕಿಂಗ್ ಅಥವಾ ಟಿಕೆಟ್‌ಗೆ ಹೋಗಿ.
  • FILE TDR ಮೇಲೆ ಕ್ಲಿಕ್ ಮಾಡಿ.
  • ರೈಲು ತಪ್ಪಿದ ಕಾರಣವನ್ನು ಆಯ್ಕೆಮಾಡಿ
  • ಹೀಗೆ ನಿಮ್ಮ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
Image credits: Getty
Kannada

ಹಣವನ್ನು ಯಾವಾಗ ಮರಳಿ ಪಡೆಯುತ್ತೀರಿ?

TDR ಸಲ್ಲಿಸಿದ ನಂತರ, ರೈಲ್ವೆಯು ಮರುಪಾವತಿಯನ್ನು ಪರಿಶೀಲಿಸುತ್ತದೆ. ನಿಯಮಗಳ ಪ್ರಕಾರ ನೀವು ಮರುಪಾವತಿಗೆ ಅರ್ಹರಾಗಿದ್ದರೆ, ಟಿಕೆಟ್ ಹಣವನ್ನು ಸಾಮಾನ್ಯವಾಗಿ 60 ದಿನಗಳಲ್ಲಿ ಬುಕಿಂಗ್ ಖಾತೆಗೆ ಹಿಂತಿರುಗಿಸಲಾಗುತ್ತದೆ.

Image credits: Getty

ಯಾವುದೇ ಪಾಸ್‌ಪೋರ್ಟ್ ಇಲ್ಲದೆ ಜಗತ್ತು ಸುತ್ತಬಲ್ಲ ಟಾಪ್- 3 ವ್ಯಕ್ತಿಗಳಿವರು!

Long Weekend in 2026: ಮುಂದಿನ ವರ್ಷದ ಟ್ರಾವೆಲ್ ಪ್ಲ್ಯಾನಿಂಗ್ ಇವತ್ತೆ ಶುರು ಹಚ್ಕೊಳಿ

ಉತ್ತರ ಗೋವಾ vs ದಕ್ಷಿಣ ಯಾವುದು ಉತ್ತಮ? ನ್ಯೂ ಇಯರ್‌ಗೆ ಹೋಗೋರು ತಿಳ್ಕೊಳ್ಳಿ!

ಬೆಂಗಳೂರಿನ Most Unique Restaurants... ಬೇರೆ ದೇಶದಲ್ಲಿದ್ದೀರೇನೋ ಅನಿಸುತ್ತೆ