ಕನ್ನಡ ನಾಡಲ್ಲಿ ಕನ್ನಡಿಗನೇ ಸಾರ್ವಭೌಮ. ರಾಜ್ಯದ ಯಾವ ಮೂಲೆಗೆ ಹೋದರೂ ಕನ್ನಡ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿಯೇ ಇರುತ್ತಾರೆ. ಆದರೆ ಈ ಜಿಲ್ಲೆಗಳಲ್ಲಿ ಮಾತ್ರ ಕಡಿಮೆ.
ಹೌದು ಕರ್ನಾಟಕದ ಈ ಐದು ಜಿಲ್ಲೆಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ತುಂಬಾನೆ ಕಡಿಮೆ. ಆ ಜಿಲ್ಲೆಗಳು ಯಾವುವು? ಯಾಕೆ ಅಲ್ಲಿ ಕನ್ನಡ ಮಾತನಾಡುವವರು ಕಡಿಮೆ ನೋಡೋಣ.
ಅತಿ ಕಡಿಮೆ ಕನ್ನಡ ಮಾತನಾಡುವ ಟಾಪ್ 5 ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡಕ್ಕೆ ಮೊದಲ ಸ್ಥಾನ. ಯಾಕಂದ್ರೆ ಇಲ್ಲಿ ಹೆಚ್ಚಿನ ಜನ ತುಳು, ಕೊಂಕಣಿ, ಬ್ಯಾರಿ, ಮಲಯಾಳಂ ಭಾಷೆ ಮಾತನಾಡುತ್ತಾರೆ.
ಎರಡನೇ ಸ್ಥಾನದಲ್ಲಿ ಕೊಡಗು ಇದೆ. ಕೊಡಗಿನಲ್ಲಿ ಹೆಚ್ಚಾಗಿ ಜನರು ಕೊಡವ ಭಾಷೆ ಮಾತನಾಡುತ್ತಾರೆ. ಇದರ ಜೊತೆಗೆ ಮಲಯಾಲಂ ಮತ್ತು ತುಳು ಮಾತನಾಡುವವರು ಹೆಚ್ಚಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಉಡುಪಿ ಮೂರನೇ ಸ್ಥಾನದಲ್ಲಿದೆ. ಉಡುಪಿಯಕ್ಕಿ ಹೆಚ್ಚಾಗಿ ಜನರು ತುಳು ಭಾಷೆಯನ್ನೆ ಮಾತನಾಡುತ್ತಾರೆ, ಅಲ್ಲದೇ ಕುಂದಾಪುರದಲ್ಲಿ ಕುಂದ ಕನ್ನಡ ಮಾತನಾಡುತ್ತಾರೆ.
ಅತಿ ಕಡಿಮೆ ಮಾತನಾಡುವ ಜಿಲ್ಲೆಗಳ ಲಿಸ್ಟಲ್ಲಿ ಬೆಂಗಳೂರು ನಗರ 4ನೇ ಸ್ಥಾನದಲ್ಲಿದೆ. ಇಲ್ಲಿ ಕನ್ನಡಿಗರು ಬಿಟ್ಟು ಬೇರೆ ಎಲ್ಲಾ ಭಾಷೆ ಮಾತನಾಡುವವರ ಸಂಖ್ಯೆ ತುಂಬಾನೆ ಹೆಚ್ಚಾಗಿದೆ.
ಇನ್ನು ಐದನೇ ಸ್ಥಾನದಲ್ಲಿ ಕೋಲಾರ ಇದೆ. ತಮಿಳುನಾಡು ಮತ್ತು ಆಂಧ್ರ ಗಡಿ ಭಾಗ ಆಗಿರುವುದರಿಂದ ಇಲ್ಲಿ, ತೆಲುಗು-ತಮಿಳು ಮಾತನಾಡುವವರ ಸಂಖ್ಯೆ ಹೆಚ್ಚು, ಕನ್ನಡ ಕಡಿಮೆ.
ರಾಜ್ಯದ 15 ಜಿಲ್ಲೆಗಳಿಗೆ ಮಳೆ ಅಲರ್ಟ್; ಗಂಟೆಗೆ 30 ರಿಂದ 50 KM ವೇಗದಲ್ಲಿ ಗಾಳಿ
ಬನ್ನೇರುಘಟ್ಟದಲ್ಲಿ ಅಪರೂಪದ ಅತಿಥಿ, ಆಫ್ರಿಕಾದಿಂದ ಆಗಮಿಸಿದ ಕ್ಯಾಪುಚಿನ್ ಕೋತಿಗಳು!
Kodagu: ಧಗಧಗಿಸಿ ಹೊತ್ತಿ ಉರಿದ 25 ಪ್ರಯಾಣಿಕರಿದ್ದ ಖಾಸಗಿ ಬಸ್
ತಾಪಮಾನ ಏರಿಕೆ, ಹವಾಮಾನ ಬದಲಾವಣೆಯಿಂದ ಇಳುವರಿ ಕುಸಿತ, ಭವಿಷ್ಯದ ರೈತರ ಪಾಡೇನು?