ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದ ಮೂಲಕ ಜನಮನ ಗೆದ್ದ ನಟಿ ಸಪ್ತಮಿ ಗೌಡ, ನಂತರ ಯುವ ಸಿನಿಮಾದಲ್ಲಿ ತಮ್ಮ ಮುದ್ದಾದ ಅಭಿನಯದ ಮೂಲಕ ಮತ್ತೆ ಅಭಿಮಾನಿಗಳನ್ನು ಹೆಚ್ಚಿಸಿಕೊಂಡ ಬೆಡಗಿ.
Image credits: Instagram
ಮುಂದಿನ ಸಿನಿಮಾ ಯಾವುದು?
ಯುವ ಸಿನಿಮಾ ಬಳಿಕ ನಟಿ ಕನ್ನಡದಲ್ಲಿ ಬೇರೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ, ತಮಿಳು ಸಿನಿಮಾದಲ್ಲಿ ನಟಿಸುವ ಬಗ್ಗೆ ಸುದ್ದಿ ಇದೆ, ಆದರೆ ಆ ಕುರಿತು ಕೂಡ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
Image credits: Instagram
ಹೊಸ ಫೋಟೊ ಶೂಟ್
ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಸಹ ನಟಿ ತಮ್ಮ ಫೋಟೊ ಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ ಈ ಮೂಗುತ್ತಿ ಸುಂದರಿ.
Image credits: Instagram
ಲಂಗ ಬ್ಲೌಸ್ ನಲ್ಲಿ ಮಿಂಚಿಂಗ್
ಇದೀಗ ಸಪ್ತಮಿ, ಲಂಗ ಮತ್ತು ಬ್ಲೌಸ್ ಧರಿಸಿ, ರಾಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಪ್ತಮಿ ಹೊಸ ಲುಕ್ ನೋಡಿ ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ಕ್ಯೂಟಿ, ಬ್ಯೂಟಿ, ಚೆಲುವೆ ಎಂದೆಲ್ಲಾ ಕಾಮೆಂಟ್ ಬೇರೆ ಮಾಡಿದ್ದಾರೆ.
Image credits: Instagram
ಬ್ಯಾಕ್ ಲೆಸ್ ಬ್ಲೌಸ್
ನೀಳ ಸುಂದರಿ ಸಪ್ತಮಿ ಗೌಡ, ನೇರಳೆ ಬಣ್ಣದ ಬ್ಯಾಕ್ ಲೆಸ್ ಹಾಗೂ ವಿ ನೆಕ್ ಇರುವ ಬ್ಲೌಸ್ ಧರಿಸಿ, ಕ್ರೀಂ ಬಣ್ಣದ ಲಂಗ ಧರಿಸಿ ಬೆನ್ನು ಹಾಕಿ ಪೋಸ್ ನೀಡಿದ್ದು, ಸಖತ್ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ.
Image credits: Instagram
ಏನ್ ಮಾಡ್ತಿದ್ದಾರೆ ನಟಿ
ಸಪ್ತಮಿ ಸದ್ಯ ಯಾವುದೇ ಸಿನಿಮಾ ಒಪ್ಪಿಕೊಂಡಂತೆ ಕಾಣಿಸ್ತಿಲ್ಲ, ಆದರೆ ಹೆಚ್ಚಾಗಿ ಸೀರೆ, ಮಾಡರ್ನ್ ಡ್ರೆಸ್, ಗೌನ್ ಧರಿಸಿ ಫೋಟೊ ಶೂಟ್ ಮಾಡೋ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ.
Image credits: Instagram
ನ್ಯಾಷನಲ್ ಲೆವೆಲ್ ಸ್ವಿಮ್ಮರ್
ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡೋದಕ್ಕೂ ಮುನ್ನ ಸಪ್ತಮಿ ಗೌಡ ನ್ಯಾಷನಲ್ ಲೆವೆಲ್ ಸ್ವಿಮ್ಮರ್ ಆಗಿದ್ದು, ರಾಷ್ಟ್ರಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿ ಕೂಡ ಪಡೆದಿದ್ದರು.