Kannada

2024ರಲ್ಲಿ ಮದುವೆಯಾದ ಸ್ಯಾಂಡಲ್‌ವುಡ್‌ ನಟಿಯರು

2025ರ ಹೊಸ ವರ್ಷಕ್ಕೆ 1 ವಾರವಷ್ಟೇ ಬಾಕಿ ಇದೆ. ಈ ಒಂದು ವರ್ಷದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೆಳವಣಿಯಾಗಿದೆ. ಇಲ್ಲಿ 2024ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ನಟ-ನಟಿಯರ ಪಟ್ಟಿಯನ್ನು ನೀಡಲಾಗಿದೆ. 
 

Kannada

ಮಾನ್ವಿತಾ-ಅರುಣ್

ನಟಿ ಮಾನ್ವಿತಾ ಕಾಮತ್  2024ರ ಮೇ 1ರಂದು ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Image credits: our own
Kannada

ತರುಣ್‌ ಸುಧೀರ್‌-ಸೋನಲ್ ಮೊಂಥೆರೋ

ನಟನಾಗಿ, ನಿರ್ದೇಶಕನಾಗಿ ಕನ್ನಡಿಗರ ಮನಗೆದ್ದಿರುವ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್ ಮೊಂಥೆರೋ 2024ರ ಆಗಸ್ಟ್ 11ರಂದು ಪ್ರೀತಿಸಿ ಮದುವೆಯಾಗಿದ್ದಾರೆ.

Image credits: our own
Kannada

ನಟಿ ಐಶ್ವರ್ಯಾ-ಉಮಾಪತಿ ರಾಮಯ್ಯ

ಬಹುಭಾಷಾ ನಟ ಅರ್ಜುನ್‌ ಸರ್ಜಾ ಅವರ ಪುತ್ರಿ ನಟಿ ಐಶ್ವರ್ಯಾ ಅವರು ಜೂನ್ 10ರಂದು ಉಮಾಪತಿ ರಾಮಯ್ಯ ಅವರನ್ನು ಮದುವೆಯಾದರು. ಕನ್ನಡದಲ್ಲಿ 'ಪ್ರೇಮ ಬರಹ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Image credits: our own
Kannada

ವರಲಕ್ಷ್ಮಿ-ನಿಖೋಲಯ್

ಕಿಚ್ಚ ಸುದೀಪ್ ಅಭಿನಯದ `ಮಾಣಿಕ್ಯ' ರನ್ನ ಸಿನಿಮಾದಲ್ಲಿ ನಟಿಸಿದ್ದ ವರಲಕ್ಷ್ಮಿ ಶರತ್‌ ಕುಮಾರ್ ಅವರು ನಿಖೋಲಯ್ ಸಚ್​ದೇವ್ ಅವರನ್ನು ಜುಲೈ 2ರಂದು ವಿವಾಹವಾದರು.

Image credits: our own
Kannada

ಯಶ್ ಶೆಟ್ಟಿ - ಪೃಥ್ವಿ ಶೆಟ್ಟಿ

ಕನ್ನಡ ಚಿತ್ರರಂಗದ ಉದಯೋನ್ಮುಖ ನಟ, ಖಳನಾಯಕ ಪಾತ್ರದಲ್ಲಿ ಗುರುತಿಸಿಕೊಂಡಿರುವ ಯಶ್ ಶೆಟ್ಟಿ ಅವರು ಪೃಥ್ವಿ ಶೆಟ್ಟಿ  ಎಂಬವರನ್ನು ಮದುವೆಯಾದರು. ಕಳೆದ ಆಗಸ್ಟ್ ನಲ್ಲಿ ಇವರಿಬ್ಬರ ವಿವಾಹ ನೆರವೇರಿದೆ.
 

Image credits: our own
Kannada

ಪ್ರಮೋದ್‌ ಮರವಂತೆ-ಸುಚೇತಾ

ಸ್ಯಾಂಡಲ್‌ವುಡ್‌ನ ಯುವ ರೈಟರ್ ಪ್ರಮೋದ್ ಮರವಂತೆ ಅವರು ಕೆಜಿಎಫ್ ಸಿಂಗರ್‌ ಸುಚೇತಾ ಅವರನ್ನು ಕೈಹಿಡಿದರು. ಡಿ.5ರಂದು ಕುಂದಾಪುರದಲ್ಲಿ ಇವರಿಬ್ಬರ ವಿವಾಹ ನೆರವೇರಿದೆ.
 

Image credits: our own
Kannada

ಅಭಿಷೇಕ್ ಶೆಟ್ಟಿ-ಸಾಕ್ಷಾ ಶೆಟ್ಟಿ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಟ ಅಭಿಷೇಕ್ ಶೆಟ್ಟಿ ಅವರು  2024ರ  ನವೆಂಬರ್ 28ರಂದು ಕುಂದಾಪುರದಲ್ಲಿ ಸಾಕ್ಷಾ ಶೆಟ್ಟಿ ಎಂಬುವವರನ್ನು ಮದುವೆಯಾದರು.
 

Image credits: our own

ಫ್ಯಾಮಿಲಿ ಫೋಟೋ ಹಂಚಿಕೊಂಡ ಯುವರಾಜ್‌ಕುಮಾರ್‌, ಜೊತೆಗಿರುವ ಹುಡುಗಿ ಯಾರು?

ಸರಳ ಸುಂದರಿ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ… ನಟಿಯ ಅಂದಕ್ಕೆ ಫ್ಯಾನ್ಸ್ ಫಿದಾ

ವಿಶ್ವಾದ್ಯಂತ 2000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಯುಐ ಅಬ್ಬರ: ಉಪ್ಪಿ ಪ್ಲಾನ್ ಏನು?

ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ ಅರ್ಯನ್ ; ಮಾಲಾಶ್ರೀ ಮಗ ಹೇಗಿದ್ದಾನೆ ನೋಡಿ