Sandalwood

2000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆ

ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ ‘ಯುಐ’ ಸಿನಿಮಾ ನಾಳೆ (ಡಿ.20) ವಿಶ್ವಾದ್ಯಂತ 2000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ.

Image credits: google

ಜನರಲ್ಲಿ ಕುತೂಹಲ

ಒಂಭತ್ತು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಬರುತ್ತಿರುವ ಈ ಸಿನಿಮಾ ಬಗ್ಗೆ ಜನರಲ್ಲಿ ಕುತೂಹಲ ಸಖತ್ ಮನೆಮಾಡಿದೆ.

Image credits: google

ಮುಂಗಡ ಬುಕ್ಕಿಂಗ್ ಆರಂಭ

ಚಿತ್ರದ ಸಹ ನಿರ್ಮಾಪಕ ನವೀನ್ ಮನೋಹರ್ ಅವರು, ‘ಚಿತ್ರಕ್ಕೆ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಬಹುತೇಕ ಫುಲ್ ಆಗಿದೆ. ಆರಂಭದಲ್ಲೇ ನಮ್ಮ ಚಿತ್ರಕ್ಕೆ ಸಿಗುತ್ತಿರುವ ಬೆಂಬಲ ನೋಡಿ ಸಂತೋಷವಾಗಿದೆ’ ಎಂದು ಹೇಳಿದ್ದಾರೆ.

Image credits: google

ಕೆ.ಪಿ.ಶ್ರೀಕಾಂತ್ ನಿರ್ಮಾಣ

ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. 

Image credits: google

ಕಾರ್ಯಕಾರಿ ನಿರ್ಮಾಪಕರು

ನವೀನ್ ಮನೋಹರ್ ಸಹ ನಿರ್ಮಾಣವಿದೆ. ತುಳಸಿರಾಮ ನಾಯ್ಡು (ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
 

Image credits: google

ರೀಷ್ಮಾ ನಾಣಯ್ಯ ನಾಯಕಿ

ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿದೆ.

Image credits: google

ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ ಅರ್ಯನ್ ; ಮಾಲಾಶ್ರೀ ಮಗ ಹೇಗಿದ್ದಾನೆ ನೋಡಿ

'ಗಂಡಸರಿಗೆ ಹೆಂಡ್ತಿ ಅಲ್ಲ, ಮನೆಕೆಲಸದವಳು ಬೇಕು..' ಎಂದ ಯಶ್‌ ಹೀರೋಯಿನ್‌!

ಜೊತೆ ಜೊತೆಯಲಿ ಸೀರಿಯಲ್ ನಟ ಅನಿರುದ್ಧ್ ಮುದ್ದಾದ ಫ್ಯಾಮಿಲಿ ಫೋಟೊ

ಖ್ಯಾತ ಕನ್ನಡ ನಟನ ಬಾಡಿಗಾರ್ಡ್ ಇಂದು ದಕ್ಷಿಣದ ಫೇಮಸ್‌ ವಿಲನ್!