ಚಂದನವನದ ಬೋಲ್ಡ್ ಬ್ಯೂಟಿ ಚೈತ್ರಾ ಆಚಾರ್ ಮತ್ತೊಮ್ಮೆ ತಮ್ಮ ಬಿಂದಾಸ್ ಲುಕ್ ಮೂಲಕ ಕಾಣಿಸಿಕೊಂಡಿದ್ದಾರೆ.
ಚೈತ್ರಾ ಆಚಾರ್ ಕಲರ್ ಫುಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಬೋಲ್ಡ್ ಲುಕ್ ಸಖತ್ ಆಗಿದೆ.
ಚೈತ್ರಾ ಬಿಳಿ ಬಣ್ಣದ ಬೆಲ್ ಬಾಟಮ್ ಪ್ಯಾಂಟ್ ಜೊತೆಗೆ ಕಲರ್ ಫುಲ್ ಬ್ಲೇಜರ್ ಧರಿಸಿದ್ದಾರೆ.
ಕೆಲವೊಂದು ಫೋಟೊಗಳಲ್ಲಿ ಚೈತ್ರಾ ಬ್ಲೇಜರ್ ಬಟನ್ ಹಾಕದೇ ಓಪನ್ ಆಗಿಟ್ಟು ಫೋಟೊ ಶೂಟ್ ಮಾಡಿಸಿದ್ದಾರೆ.
ತಮ್ಮ ಈ ಹೊಸ ಲುಕ್ ಗಾಗಿ ಚೈತ್ರಾ ಆಚಾರ್ ಕೂದಲನ್ನು ಗುಂಗುರು ಮಾಡಿಸಿದ್ದು, ವಿಭಿನ್ನವಾಗಿ ಕಾಣಿಸ್ತಿದ್ದಾರೆ.
ಚೈತ್ರಾ ಆಚಾರ್ ಕನ್ನಡ ಚಿತ್ರರಂಗದ ಬೋಲ್ಡ್ ಬ್ಯೂಟಿ. ಹೆಚ್ಚಾಗಿ ಬೋಲ್ಡ್ ಅವತಾರಗಳಲ್ಲೇ ಫೊಟೊ ಶೂಟ್ ಮಾಡಿಸುತ್ತಾರೆ ಚೆಲುವೆ.
ಈಕೆ ಕನ್ನಡ ಚಿತ್ರರಂಗಕ್ಕೆ ಸಿಕ್ಕಂತಹ ಪ್ರತಿಭಾವಂತ ನಟಿ, ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುವ ಚೆಲುವೆ.
ಚೈತ್ರಾ ಆಚಾರ್ ಕನ್ನಡದಲ್ಲಿ ಸಪ್ತ ಸಾಗರದಾಚೆ ಎಲ್ಲೋ, ಟೋಬಿ, ಬ್ಲಿಂಕ್, ತಲೆದಂಡ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸ್ಟ್ರಾಬೆರ್ರಿ, ಉತ್ತರಾಕಾಂಡ ಎನ್ನುವ ಕನ್ನಡ ಸಿನಿಮಾಗಳು ಹಾಗೂ, ಸಿದ್ಧಾರ್ಥ್ 40, ಮೈ ಲಾರ್ಡ್ ಎನ್ನುವ ತಮಿಳು ಸಿನಿಮಾಗಳು ಇವರ ಕೈಯಲ್ಲಿವೆ.
ಚೈತ್ರಾ ಆಚಾರ್ ಒಂದೊಳ್ಳೆ ಗಾಯಕಿಯೂ ಆಗಿದ್ದು, ಸೋಜುಗಾದ ಸೂಜು ಮಲ್ಲಿಗೆ ಹಾಡನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.
ಚೈತ್ರಾ ಆಚಾರ್ ಗೆ ಗಾಯನ ಹಾಗೂ ಅಭಿನಯಕ್ಕಾಗಿ ಎರಡು ಸೈಮಾ ಅವಾರ್ಡ್, ತಲೆದಂಡ ಸಿನಿಮಾಗಾಗಿ ಫಿಲಂಫೇರ್ ಅವಾರ್ಡ್ ಲಭಿಸಿದೆ.
ಸಪ್ತ ಸಾಗರ ಚೆಲುವೆಯ ಈ ಲುಕ್ ಹೇಗಿದೆ? ಸಖತ್ ಕ್ಯೂಟ್ ಅಲ್ವಾ?
ಗಾಜನೂರಿನಲ್ಲಿ ಸೋದರತ್ತೆ ಭೇಟಿ ಮಾಡಿದ ಶಿವರಾಜ್‌ಕುಮಾರ್-ಗೀತಕ್ಕ!
ತಮಿಳು ಚಿತ್ರಕ್ಕೆ ಸೈನ್ ಮಾಡಿದ ಮೇಘಾ ಶೆಟ್ಟಿ; ಒಬ್ಬೊಬ್ಬರೇ ಹೋಗಿ ಎಂದ ನೆಟ್ಟಿಗರು
41 ವರ್ಷದ ನಟಿ ರಾಧಿಕಾ ಪಂಡಿತ್ ಇಷ್ಟು ಚೆನ್ನಾಗಿ ಕಾಣಲು ಇದೇ ಕಾರಣ!